VIDEO: ಭೋಜನ ಕೂಟದ ನೆಪದಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ಸಿಎಂ ಯಡಿಯೂರಪ್ಪ ಆಪ್ತರೊಂದಿಗೆ ಚರ್ಚೆ!

ಬೆಂಗಳೂರು,

ಜು.
19:
ಮುಖ್ಯಮಂತ್ರಿ
ಹುದ್ದೆಯಿಂದ
ಬಿ.ಎಸ್.
ಯಡಿಯೂರಪ್ಪ
ಅವರನ್ನು
ಬದಲಾಯಿಸಲು
ಹೈಕಮಾಂಡ್
ಮುಂದಾಗಿದೆ
ಎಂಬ
ಚರ್ಚೆಯ
ಬೆನ್ನಲ್ಲಿಯೇ
ರಾಜಕೀಯ
ಸಂಚಲನ
ಉಂಟಾಗಿದೆ.
"ಉಳಿದ
ಅವಧಿಗೂ
ನಾನೇ
ಮುಖ್ಯಮಂತ್ರಿಯಾಗಿ
ಮುಂದುವರೆಯುತ್ತೇನೆ"
ಎಂದು
ಮುಖ್ಯಮಂತ್ರಿ
ಯಡಿಯೂರಪ್ಪ
ಅವರು
ಹೈಕಮಾಂಡ್
ಭೇಟಿಯ
ಬಳಿಕ
ಬೆಂಗಳೂರಿನಲ್ಲಿ
ಸ್ಪಷ್ಟವಾಗಿ
ಹೇಳಿದ್ದರು.

id="toptextpromo">
id='are-slot-1'
class='oiad
oi-axt
oiadv'>

ಆದರೂ

ಬೇರೆ
ಪಕ್ಷಗಳಿಂದ
ಬಿಜೆಪಿಗೆ
ಬಂದು
ಸಚಿವರಾಗಿರುವವರಿಗೆ
ಆತಂಕ
ಶುರುವಾಗಿದೆ.
ಒಂದೊಮ್ಮೆ
ಬಿಜೆಪಿ
ಹೈಕಮಾಂಡ್
ಯಡಿಯೂರಪ್ಪ
ಅವರನ್ನು
ಸಿಎಂ
ಸ್ಥಾನದಿಂದ
ಬದಲಾವಣೆ
ಮಾಡಿದರೆ
ನಮ್ಮ
ಭವಿಷ್ಯವೇನು?
ಎಂಬ
ಆತಂಕಕ್ಕೆ
ಒಳಗಾಗಿದ್ದಾರೆ.
ಇದೇ
ಸಂದರ್ಭದಲ್ಲಿ
ಸಿಎಂ
ಯಡಿಯೂರಪ್ಪ
ಅವರು
ಆಪ್ತ
ಆಯ್ದ
ಸಚಿವರೊಂದಿಗೆ
ಬೆಂಗಳೂರಿನ
ಖಾಸಗಿ
ಪಂಚತಾರಾ
ಹೋಟೆಲ್‌ನಲ್ಲಿ
ಭೋಜನ
ಕೂಟದ
ನೆಪದಲ್ಲಿ
ಸಭೆ
ಸೇರಿದ್ದರು.
ಚರ್ಚೆ
ಸಂದರ್ಭದಲ್ಲಿ
ಸಿಎಂ
ಯಡಿಯೂರಪ್ಪ
ಮಹತ್ವದ
ಭರವಸೆ
ಕೊಟ್ಟಿದ್ದಾರೆ
ಎಂಬ
ಮಾಹಿತಿಯಿದೆ.

id='are-slot-2'
class='oiad
oi-axt
oiadv'>

ಪಂಚತಾರಾ ಹೋಟೆಲ್‌ನಲ್ಲಿ ಮಹತ್ವದ ಸಭೆ

ಪಂಚತಾರಾ ಹೋಟೆಲ್‌ನಲ್ಲಿ ಮಹತ್ವದ ಸಭೆ

ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಭೋಜನ ಕೂಟದ ನೆಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಪ್ತ ಸಚಿವರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇಂದು ಮಧ್ಯಾಹ್ನ ನಡೆದ ಈ ಭೇಟಿಯಲ್ಲಿ ದೆಹಲಿ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಯ ಕುರಿತು ಆ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರಿಗೆ ರಾಜೀನಾಮೆ ಕೊಡಲು ಹೈಕಮಾಂಡ್ ಸೂಚಿಸಿದೆ ಎಂಬ ವರದಿಗಳು ಹರಿದಾಡುತ್ತಿವೆ ಎಂದು ಸಚಿವರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಭಾಗಿಯಾಗಿದ್ದ ಸಚಿವರು ಯಾರು?

ಸಭೆಯಲ್ಲಿ ಭಾಗಿಯಾಗಿದ್ದ ಸಚಿವರು ಯಾರು?

ಯಡಿಯೂರಪ್ಪ ಅವರನ್ನು ನಂಬಿಕೊಂಡು ಬೇರೆ ಪಕ್ಷಗಳಿಂದ ಬಂದವರೂ ಸೇರಿದಂತೆ ಸಿಎಂ ಆಪ್ತರು ಮಾತುಕತೆ ನಡೆಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಕಂದಾಯ ಸಚಿವ ಆರ್. ಅಶೋಕ್, ಆರೋಗ್ಯ ಸಚಿವ ಡಾ. ಸುಧಾಕರ್, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಶಾಸಕ ಸತೀಶ್ ರೆಡ್ಡಿ ಭಾಗಿಯಾಗಿದ್ದರು ಎಂಬ ಮಾಹಿತಿಯಿದೆ. ಎಲ್ಲರೊಂದಿಗೂ ದೆಹಲಿ ರಾಜಕೀಯ ಹಾಗೂ ಬೆಳವಣಿಗೆಗಳ ಕುರಿತು ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ.

ಸಚಿವರಿಗೆ ಸಿಎಂ ಕೊಟ್ಟ ಭರವಸೆ ಏನು?

ಸಚಿವರಿಗೆ ಸಿಎಂ ಕೊಟ್ಟ ಭರವಸೆ ಏನು?

"ಯಾವುದೇ ಆತಂಕ ಬೇಡ" ಎಂದು ಸಿಎಂ ಯಡಿಯೂರಪ್ಪ ಅವರು ಆಪ್ತರಿಗೆ ಭರವಸೆ ಕೊಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ. ಜೊತೆಗೆ ಹಾಗೆನಾದರೂ ಆದಲ್ಲಿ ಮುಂದೆ ಏನು ಮಾಡಬೇಕು ಎಂಬ ಚರ್ಚೆಯನ್ನು ಸಚಿವರೊಂದಿಗೆ ಯಡಿಯೂರಪ್ಪ ಅವರು ಮಾತನಾಡಿದ್ದಾರೆ. ಹೈಕಮಾಂಡ್ ನನ್ನ ರಾಜೀನಾಮೆಯನ್ನು ಕೇಳಿಲ್ಲ. ಹೀಗಾಗಿ ಯಾವುದೇ ಗೊಂದಲ ಬೇಡ.

ಉಳಿದ ಅವಧಿಗೆ ನಿಗಮ-ಮಂಡಳಿಗಳಿಗೆ ಪಕ್ಷದ ನಿಷ್ಠಾವಂತರನ್ನು ನೇಮಕ ಮಾಡಲು ಅನುವು ಮಾಡಿಕೊಡಿ. ಜೊತೆಗೆ ಯಾವುದೇ ಕಾರಣಕ್ಕೂ ಗೊಂದಲದ ಹೇಳಿಕೆಗಳನ್ನು ಕೊಡಬೇಡಿ ಎಂದು ಎಲ್ಲ ನಾಯಕರಿಗೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.

Recommended Video

    ಹುಟ್ಟೋ ಮಕ್ಕಳ ಅದ್ಭುತ ಭವಿಷ್ಯಕ್ಕಾಗಿ ಗರ್ಭ ಸಂಸ್ಕಾರ | Benefits of Garbha Sanskar | Oneindia Kannada

    ಯಡಿಯೂರಪ್ಪ ಹಿಂದಿನ ಗೇಟ್‌ನಿಂದ ತೆರಳಿದ್ದೇಕೆ?

    ಭೋಜನ ಹಾಗೂ ಚರ್ಚೆಯ ಬಳಿಕ ಸಿಎಂ ಯಡಿಯೂರಪ್ಪ ಅವರು ಹೋಟೆಲ್ ತಾಜ್‌ ವೆಸ್ಟೆಂಡ್‌ನ ಹಿಂದಿನ ಗೇಟ್‌ನಿಂದ ತೆರಳಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾನ್ವೆಯಲ್ಲಿ ತಾಜ್‌ ವೆಸ್ಟೆಂಡ್‌ ಹಿಂದಿನ ಗೇಟ್‌ನಿಂದ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ತೆರಳಿದರು. ತಾಜ್‌ವೆಸ್ಟೆಂಡ್ ಹೋಟೆಲ್‌ ಹಿಂದಿನ ಗೇಟ್‌ನಿಂದ ಸಿಎಂ ಯಡಿಯೂರಪ್ಪ ಅವರು ಹೋಗಿರುವುದು ಕುತೂಹಲ ಮೂಡಿಸಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+