ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜ. 27 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸೋಮವಾರ ಸಂಜೆಯೇ ತಿರುಪತಿಗೆ ತೆರಳಿದ್ದ ಅವರು, ಮಂಗಳವಾರ ಮುಂಜಾನೆ ದೇವರ ದರ್ಶನ ಪಡೆದಿದ್ದಾರೆ.
ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವಾಹ ವಾರ್ಷಿಕೋತ್ಸವ ಆದ್ದರಿಂದ ಕುಟುಂಬದ ವರ್ಗದೊಡನೆ ತಿರುಪತಿಗೆ ತೆರಳಿದ ಸಿಎಂ ದೇವರ ದರ್ಶನ ಪಡೆದಿದ್ದಾರೆ. ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಹ ಸಿಎಂ ಜೊತೆಗಿದ್ದಾರೆ. [2015ರ ಸಂಕಟಗಳನ್ನೆಲ್ಲಾ ನಿವಾರಣೆ ಮಾಡಪ್ಪ ವೆಂಕಟರಮಣ]

ದೇವರ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಯಾದ ಮೇಲೆ ತಿರುಪತಿಗೆ ಬರಲು ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ಇಂದು ಬಂದಿದ್ದೇನೆ, ಈ ಭೇಟಿಯಲ್ಲಿ ವಿಶೇಷತೆ ಏನಿಲ್ಲ ಎಂದರು. ರಾಜ್ಯದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು. [ಸಂಕಷ್ಟ ನಿವಾರಣೆಗಾಗಿ ತಿಮ್ಮಪ್ಪನಿಗೆ ಡಿವಿಎಸ್ ಮೊರೆ]
ಸೋಮವಾರ ಸಂಜೆ 7 ಗಂಟೆ ವೇಳೆಗೆ ಬೆಂಗಳೂರಿನಿಂದ ತಿರುಪತಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಅವರು, ಮಂಗಳವಾರ ದೇವರ ದರ್ಶನ ಪಡೆದ ಬಳಿಕ ವಿಜಯಪುರಕ್ಕೆ ಹೋಗಲಿದ್ದು, ಅಲ್ಲಿ ನಡೆಯುವ ಗಾಣಿಗರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. [ಹೆಲಿಕಾಪ್ಟರ್ ಅವಘಡದಿಂದ ಸಿದ್ದು ಪಾರಾದದ್ದು ಹೇಗೆ?]
ಸಿಎಂ ಸಿದ್ದರಾಮಯ್ಯ ಅವರು ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ಇತ್ತೀಚೆಗೆ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಹುಟ್ಟೂರು ಮೈಸೂರಿನ ಸಿದ್ದರಾಮನ ಹುಂಡಿಗೆ ತೆರಳಿದ್ದ ಅವರು, ಅಲ್ಲಿನ ದೇವರಿಗೆ ಪೂಜೆ ಸಲ್ಲಿಸಿದ್ದರು. ಸದ್ಯ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ದೇವರು ದಿಂಡರು ವಿಷಯಗಳಲ್ಲಿ ಅಷ್ಟಾಗಿ ಉತ್ಸುಕತೆ ತೋರದ ನಮ್ಮ ಸಿದ್ರಾಮಣ್ಣನವರು ದಿಢೀರನೆ ತಿರುಪತಿ ಯಾತ್ರೆ ಕೈಗೊಂಡು ತಿಮ್ಮಪ್ಪನಿಗೆ ಅಡ್ಡಬಿದ್ದ ಸುದ್ದಿ ಆಸ್ತಿಕರು ಮತ್ತು ನಾಸ್ತಿಕರ ಹುಬ್ಬೇರುವಂತೆ ಮಾಡಿದೆ!












Click it and Unblock the Notifications