'ದೇವೇಗೌಡರು ಕರ್ನಾಟಕದ ಸಿಎಂ ಆಗಿದ್ದೂ ದುರಂತ'

ಬೆಂಗಳೂರು, ಜ.30 : 'ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದೂ ದುರಂತ' ಎಂದು ಸಿಎಂ ಸಿದ್ದರಾಮಯ್ಯ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ತಿರುಗೇಟು ಕೊಟ್ಟಿದ್ದಾರೆ. ನಿಜವಾಗಿ ದೇವೇಗೌಡರು ಪ್ರಧಾನಿಯಾದಾಗಲೇ ನಾನು ಮುಖ್ಯಮಂತ್ರಿಯಾಗಬೇಕಿತ್ತು ಎಂದು ಸಿಎಂ ಹೇಳಿದರು.

ತುಮಕೂರಿನಲ್ಲಿ ಗುರುವಾರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, 'ನನ್ನನ್ನು ಡಿಸಿಎಂ ಮಾಡಿದ್ದು ಮಹಾಪರಾಧ ಎಂದಿರುವ ದೇವೇಗೌಡರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೂ ದುರಂತ'ಎಂದರು. 'ನನ್ನನ್ನು ಡಿಸಿಎಂ ಮಾಡಿದೆ ಎನ್ನುತ್ತಿರುವ ದೇವೇಗೌಡರು ತಮ್ಮನ್ನು ಪ್ರಧಾನಿ ಮಾಡಿದವರು ಯಾರು? ಎಂಬುದನ್ನು ಅರಿತು ಮಾತಾಡಲಿ' ಎಂದು ಟಾಂಗ್ ಕೊಟ್ಟರು. [ಎಚ್.ಡಿ.ದೇವೇಗೌಡರು ಮಾಡಿದ ದೊಡ್ಡ ತಪ್ಪು ಇದು!]

Siddaramaiah

'ನನ್ನನ್ನು ಡಿಸಿಎಂ ಮಾಡಿದ್ದು ದೇವೇಗೌಡರಲ್ಲ. ಆ ಸಂದರ್ಭದಲ್ಲಿ ಜನತಾದಳ ನಾಯಕರಾದ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್ ಹಾಗೂ ಪಕ್ಷದ ಶಾಸಕರು ಸರ್ವಾನುಮತದಿಂದ ನನ್ನನ್ನು ಉಪಮುಖ್ಯಮಂತ್ರಿ ಗಾದಿಗೆ ಕೂರಿಸಿದರು' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ದೇವೇಗೌಡರು ಹೇಳಿದ್ದೇನು : ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರು 'ಸಿದ್ದರಾಮಯ್ಯ ಅವರು ಜೆಡಿಎಸ್‌ ಪಕ್ಷದಲ್ಲಿದ್ದಾಗ ಅವರನ್ನು ಉಪಮುಖ್ಯಮಂತ್ರಿ ಮಾಡಿ ದೊಡ್ಡ ತಪ್ಪು ಮಾಡಿದೆ, ಆದ್ದರಿಂದ ಅವರು ಇಂದು ಸಿಎಂ ಆಗಿದ್ದಾರೆ' ಎಂದು ಹೇಳಿದ್ದರು.

'ಸಿದ್ದರಾಮಯ್ಯ ಅವರನ್ನು ಅಂದು ಉಪಮುಖ್ಯಮಂತ್ರಿ ಮಾಡಿದ್ದಕ್ಕೆ ಇಂದು ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನು ಉಪಮುಖ್ಯಮಂತ್ರಿ ಮಾಡಿ ನನ್ನ ಜೀವನದಲ್ಲಿ ತಪ್ಪು ಮಾಡಿದೆ. ಇಲ್ಲದಿದ್ದರೆ ಸೋನಿಯಾ ಗಾಂಧಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುತ್ತಿರಲಿಲ್ಲ' ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+