ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಚೆಲುವರಾಯಸ್ವಾಮಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 01 : ಜೆಡಿಎಸ್ ಪಕ್ಷದಲ್ಲಿನ ಅಸಮಾಧಾನ ಮತ್ತೊಮ್ಮೆ ಬಹಿರಂಗವಾಗಿದೆ. ನಾಗಮಂಗಲ ಶಾಸಕ ಎನ್.ಚೆಲುವರಾಯಸ್ವಾಮಿ ಅವರು ಎಚ್.ಡಿ.ಕುಮಾರಸ್ವಾಮಿ ಅವರ ಮಾತುಗಳಿಗೆ ತಿರುಗೇಟು ಕೊಟ್ಟರು. 'ಸದ್ಯಕ್ಕೆ ಜೆಡಿಎಸ್ ಪಕ್ಷವನ್ನು ಬಿಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಚೆಲುವರಾಯಸ್ವಾಮಿ ಅವರು, 'ಕುಮಾರಸ್ವಾಮಿ ಅವರು ಹಲವು ದಿನಗಳಿಂದ ಪಕ್ಷದ ಎಲ್ಲಾ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಹೀಗೇಕೆ ಮಾತನಾಡುತ್ತಿದ್ದಾರೆ? ಎಂದು ತಿಳಿದಿಲ್ಲ' ಎಂದರು. [ಪಂಚಾಯಿತಿ ಫೈಟ್ : ಜೆಡಿಎಸ್ ಹಿನ್ನಡೆಗೆ ಕಾರಣ ಬಹಿರಂಗ!]

cheluvarayaswamy

ಚೆಲುವರಾಯಸ್ವಾಮಿ ಹೇಳಿದ್ದಿಷ್ಟು

* ಜೆಡಿಎಸ್ ಪಕ್ಷದಲ್ಲಿ ನೋವು ನಲಿವು ಎರಡನ್ನೂ ಕಂಡಿದ್ದೇನೆ. ಪಕ್ಷಕ್ಕೆ ಚಿರಋಣಿ, ಪಕ್ಷ ತೊರೆಯುವ ಬಗ್ಗೆ ಆಲೋಚನೆ ಮಾಡಿಲ್ಲ, ಮುಂದೇನಾಗುತ್ತದೋ ಗೊತ್ತಿಲ್ಲ. [ನಿರ್ಮಲಾನಂದರ ಸಮ್ಮುಖದಲ್ಲಿ ಚೆಲುವ- ಎಚ್ಡಿಕೆ ಹ್ಯಾಂಡ್ ಶೇಕ್]

* ಈಗಲೂ ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮ ನಾಯಕರು. ನಮ್ಮ ಪಕ್ಷದ ನಾಯಕರ ಮೇಲೆ ನನಗೆ ಅಪಾರವಾದ ಗೌರವವಿದೆ. [ಜೆಡಿಎಸ್ ನಲ್ಲಿ ಸ್ವಾಮಿಗಳ ನಡುವೆ ಶೀತಲ ಸಮರ]

* ನನಗೆ ಅಹಂಕಾರ, ದುಡ್ಡಿನ ಮದವಿಲ್ಲ, ಮಂಡ್ಯದ ರಾಜಕಾರಣ ನನ್ನಿಂದಲೇ ಎಂದು ಅಂದುಕೊಂಡಿಲ್ಲ. ಮಂಡ್ಯದಲ್ಲಿ ಪಕ್ಷಕ್ಕೆ ಸ್ಪಲ್ಪ ಮಟ್ಟಿನ ಕೊಡುಗೆ ನೀಡಿದ್ದೇನೆ.

ಕುಮಾರಸ್ವಾಮಿ ಏನು ಹೇಳಿದ್ದರು? : ಮೇ 26ರಂದು ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಈ ಸಭೆಗೆ ಚೆಲುವರಾಯಸ್ವಾಮಿ ಸಹಿತ ಹಲವು ಶಾಸಕರು ಗೈರು ಹಾಜರಾಗಿದ್ದರು.

ಮೇ 30ರಂದು ಮಂಡ್ಯದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು ಶಾಸಕಾಂಗ ಸಭೆಗೆ ಗೈರು ಹಾಜರಾಗಿದ್ದ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಳಿ ನಡೆಸಿದ್ದರು. ಇದಕ್ಕೆ ಇಂದು ಚೆಲುವರಾಯಸ್ವಾಮಿ ಅವರು ತಿರುಗೇಟು ಕೊಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hitting back at JDS state president HD Kumaraswamy Nagamangala MLA N.Cheluvarayaswamy said, he will not quit party.
Please Wait while comments are loading...