Karnataka By-election 2024: ಸಂಡೂರು, ಶಿಗ್ಗಾವಿ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ: ಚನ್ನಪಟ್ಟಣ ಟಿಕೆಟ್‌ ಯಾರಿಗೆ?

ಬೆಂಗಳೂರು, ಅಕ್ಟೋಬರ್‌ 19: ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ಕಾಂಗ್ರೆಸ್ ಹಾಗೂ ಮೈತ್ರಿ ನಾಯಕರಿಗೆ ಪ್ರತಿಷ್ಠೆಯ ಕಣವಾಗಿದ್ದು, ಚನ್ನಪಟ್ಟಣ ಕ್ಷೇತ್ರವನ್ನ ವಶಪಡಿಕೊಳ್ಳಲು ಡಿ ಕೆ ಬದ್ರರ್ಸ್‌ ಹಾಗೂ ಮೈತ್ರಿ ನಾಯಕರು ಭರ್ಜರಿ ಕಸರತ್ತು ನಡೆಸಿದ್ದಾರೆ.

ಚನ್ನಪಟ್ಟಣ ಟಿಕೆಟ್​ ಕಸರತ್ತು ನಡೆದಿರುವ ಬೆನ್ನಲ್ಲೇ ಇದೀಗ ಬಿಜೆಪಿ ಹೈಕಮಾಂಡ್​ ಶನಿವಾರ ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನ ಪ್ರಕಟಿಸಲಾಗಿದ್ದು, . ಶಿಗ್ಗಾಂವಿ ಅಭ್ಯರ್ಥಿಯಾಗಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಂಗಾರು ಹನುಮಂತುಗೆ ಟಿಕೆಟ್ ನೀಡಲಾಗಿದೆ.

Channapatna By-Election Who Is The Candidate For Channapatna

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಕದನ ಮತ್ತಷ್ಟು ಕುತೂಹಲ ಕೆರಳಿಸಿದೆ. ಚನ್ನಪಟ್ಟಣ ಕ್ಷೇತ್ರ ಮೊದಲಿನಿಂದಲೂ ಜೆಡಿಎಸ್‌ ಭದ್ರಕೋಟೆಯಾಗಿದ್ದು, ಮತ್ತೆ ಚನ್ನಪಟ್ಟಣ ಕ್ಷೇತ್ರವನ್ನ ವಶಪಡಿಸಿಕೊಳ್ಳಲು ದಳಪತಿಗಳು ಭರ್ಜರಿ ಪ್ಲಾನ್‌ ನಡೆಸಿದ್ದಾರೆ.

ಇಂದು (ಶನಿವಾರ) ಸಂಜೆ ಚನ್ನಪಟ್ಟಣ ಟಿಕೆಟ್‌ ವಿಚಾರವಾಗಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್‌ ಡಿ ಕುಮಾರಸ್ವಾಮಿ, ಬಿ ಎಸ್‌ ಯಡಿಯೂರಪ್ಪ , ವಿರೋಧ ಪಕ್ಷದ ನಾಯಕರಾದ ಆರ್‌ ಅಶೋಕ್‌ , ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಸೇರಿದಂತೆ ಹಲವು ನಾಯಕರು ಸಭೆ ನಡೆಸಿದ್ದು, ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿಯಾರಾಗಬೇಕು ಅನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಟಿಕೆಟ್‌ ಆಯ್ಕೆಯನ್ನು ಕುಮಾರಸ್ವಾಮಿ ಅವರ ಹೆಗಲಿಗೆ ಹೊರಿಸಿರುವ ಬಿಜೆಪಿ ಹೈಕಮಾಂಡ್‌ ಸಹ ಕ್ಷೇತ್ರ ಗ್ರೌಂಡ್‌ ರಿರ್ಪೋಟ್‌ ಪಡೆದುಕೊಂಡಿದ್ದು, ಯಾರನ್ನು ಅಭ್ಯರ್ಥಿ ಮಾಡಿದರೆ ಹೆಚ್ಚಿನ ಲಾಭ ಇದೆ ಎನ್ನುವ ಬಗ್ಗೆಯೂ ರಾಜ್ಯ ಬಿಜೆಪಿ ನಾಯಕರಿಂದ ವರದಿ ಪಡೆದುಕೊಂಡಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅಳಿಯ ಡಾ. ಮಂಜುನಾಥ ಅವರು ಬಿಜೆಪಿ ಪಕ್ಷದಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸಿ, ಗೆಲುವು ಸಾಧಿಸಿದ್ರು. ಈ ಗೆಲುವಿಗೆ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕರಾದ ಸಿ ಪಿ ಯೋಗೇಶ್ವರ್‌ ಅವರು ಶ್ರಮವಹಿಸಿದ್ರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಸಿ ಪಿ ಯೋಗೇಶ್ವರ್‌ ರಾಜಕೀಯ ಭವಿಷ್ಯದ ಕುರಿತು ಕುಮಾರಸ್ವಾಮಿ ಜೊತೆಗೆ ಚರ್ಚೆಯಾಗಿತ್ತು ಎಂದು ಹೇಳಲಾಗಿದೆ.

ಇದೀಗ ಚನ್ನಪಟ್ಟಣ ಕ್ಷೇತ್ರದಿಂದ ಎನ್‌ ಡಿ ಎ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿರುವ ಸಿ ಪಿ ಯೋಗೇಶ್ವರ್‌ ಇದ್ದಾರೆ. ಆದರೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಜೆಡಿಎಸ್‌ ಭದ್ರಕೋಟೆ. ಹೀಗಾಗಿ ಚನ್ನಪಟ್ಟಣ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಬೇಕು ಎಂದು ಜೆಡಿಎಸ್‌ ನಾಯಕರು ಒತ್ತಡ ಹಾಕಿದ್ದಾರೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್‌ ಡಿ ಕುಮಾರಸ್ವಾಮಿ ಅವರು ಸಹ ತಮ್ಮ ಪುತ್ರ ರಾಜಕೀಯ ಜೀವನ ರೂಪಿಸಲು ಮುಂದಾಗಿದ್ದು, ಚನ್ನಪಟ್ಟಣ ಕ್ಷೇತ್ರದಿಂದ ನಿಖಿಲ್‌ ಸ್ಪರ್ಧೆ ಸಜ್ಜಾಗಿದ್ದಾರೆ ಎನ್ನಲಾಗಿದೆ.

ಚನ್ನಪಟ್ಟಣ ಕ್ಷೇತ್ರದಿಂದ ಎನ್ ಡಿ ಎ ಟಿಕೆಟ್‌ ಸಿಗದಿದ್ದರೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲು ಸಿ ಪಿ ಯೋಗೇಶ್ವರ್‌ ಮುಂದಾಗಿದ್ದಾರೆ. ಅಲ್ಲದೇ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನೀಡುವ ವಿಶ್ವಾಸ ನನಗಿದೆ ಎಂಬ ವಿಶ್ವಾಸವನ್ನ ಸಿ ಪಿ ಯೋಗೇಶ್ವರ್‌ ವ್ಯಕ್ತಪಡಸಿದ್ದಾರೆ. ಈಗಾಗಲೇ ನಿಖಿಲ್‌ ಕುಮಾರಸ್ವಾಮಿ ಅವರ ಕಣಕ್ಕೀಳಿಸಲು ಕುಮಾರಸ್ವಾಮಿ ಪ್ಲಾನ್‌ ನಡೆಸಿದ್ದು, ಯೋಗೇಶ್ವರ್‌ ಗೆ ಟಿಕೆಟ್‌ ಕೊಡಿಸುವುದು ಕುಮಾರಸ್ವಾಮಿ ಅವರ ಕೈಯಲ್ಲಿದೆ.

ಬಿಜೆಪಿ ಹೈಕಮಾಂಡ್‌ ನಾಯಕರ ಭೇಟಿಗೆ ವಿಜಯೇಂದ್ರ ತೆರಳಲಿದ್ದು, ರಾಜ್ಯ ನಾಯಕರ ಜೊತೆಗೆ ಹೈಕಮಾಂಡ್‌ ನಾಯಕರು ಮಾತುಕತೆ ಬಳಿಕ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಲಿದೆ. ಮೂಲಗಳ ಪ್ರಕಾರ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಎನ್‌ ಡಿ ಎ ಟಿಕೆಟ್‌ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಏಕೆಂದರೆ 2+1 ಅನುಪಾತದಲ್ಲಿ ಮೈತ್ರಿ ಟಿಕೆಟ್‌ ಹಂಚಿಕೆಯ ಮಾತುಕತೆ ರಾಜ್ಯ ನಾಯಕರಲ್ಲಿ ಚರ್ಚೆಯಾಗಿದ್ದು, ಚನ್ನಪಟ್ಟಣ ಕ್ಷೇತ್ರದ ಟಿಕೆಟ್‌ ಜೆಡಿಎಸ್‌ ಪಾಲಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+