Channapatna By-Election: ನಿಖಿಲ್ ಕುಮಾರಸ್ವಾಮಿ ಕೋಟಿ... ಕೋಟಿ ಒಡೆಯ, ಅವರ ಪುತ್ರನೂ ಲಕ್ಷಾಧಿಪತಿ!
nikhil kumaraswamy: ಚನ್ನಪಟ್ಟಣ ಉಪ ಚುನಾವಣೆ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಮೂರನೇ ಬಾರಿ ನಿಖಿಲ್ ಕುಮಾರ್‌ಸ್ವಾಮಿ ಅವರು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಅವರ ಬಳಿ ಕೋಟಿ ಕೋಟಿ ರೂಪಾಯಿ ಇದೆ. 70 ಕೋಟಿ ರೂಪಾಯಿ ಸಾಲವೂ ಇದೆ.
ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಜಿದ್ದಾಜಿದ್ದಿನ ಕಣವಾಗಿದೆ. ನಾಮಪತ್ರ ಸಲ್ಲಿಸುವುದಕ್ಕೆ ಶುಕ್ರವಾರ ಕೊನೆಯ ದಿನವಾಗಿದ್ದು,ಚನ್ನಪಟ್ಟಣ ಉಪಚುನಾವಣೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಆಸ್ತಿ ವಿವರಗಳನ್ನು ಘೋಷಿಸಿದ್ದು, ಬರೋಬ್ಬರಿ 100 ಕೋಟಿಗೂ ಹೆಚ್ಚು ಆಸ್ತಿ ನಿಖಿಲ್ ಕುಮಾರಸ್ವಾಮಿ ಅವರ ಬಳಿ ಇದೆ. ನಿಖಿಲ್ ಅವರ ಬಳಿ ಬರೋಬ್ಬರಿ 113 ಕೋಟಿ ರೂ. ಮೌಲ್ಯದ ಆಸ್ತಿ ಇದೆ.

ಅಲ್ಲದೇ ಇದರಲ್ಲಿ 78.15 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ, 29.34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ರೇವತಿ ನಿಖಿಲ್ ಅವರ ಹೆಸರಲ್ಲಿ 5.49 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 43 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ದಂಪತಿ ಮಗ ಆವ್ಯಾನ್ ದೇವ್ ಹೆಸರಲ್ಲಿ 11 ಲಕ್ಷ ರೂಪಾಯಿ ಹಣ ಇರಿಸಲಾಗಿದೆ.
ಸಾಲವೂ ಇದೆ: ನಿಖಿಲ್ ಕುಮಾರಸ್ವಾಮಿ ಅವರು 113 ಕೋಟಿ ರೂಪಾಯಿ ಆಸ್ತಿ ಇದೆ ನಿಜ. ಆದರೆ, ನಿಖಿಲ್ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಸಾಲವೂ ಇದೆ. ನಿಖಿಲ್ ಕುಮಾರಸ್ವಾಮಿ ಹೆಸರಲ್ಲಿ ಒಟ್ಟು 70.44 ಕೋಟಿ ಸಾಲ ಇದೆ. ಅವರ ಪತ್ನಿ ರೇವತಿ ಅವರ ಹೆಸರಿನಲ್ಲೂ 4.96 ಕೋಟಿ ರೂಪಾಯಿ ಸಾಲ ಇದೆ ಎಂದು ಹೇಳಲಾಗಿದೆ.
ಅಲ್ಲದೇ ನಿಖಿಲ್ ಕುಮಾರಸ್ವಾಮಿ ಹೆಸರಲ್ಲಿ ಬರೋಬ್ಬರಿ 1.488 ಕೆಜಿ ಚಿನ್ನ, 16 ಕೆಜಿ ಬೆಳ್ಳಿ ಹಾಗೂ ಅವರ ಪತ್ನಿ ರೇವತಿ ಹೆಸರಲ್ಲಿ 1.411 ಕೆಜಿ ಚಿನ್ನ, 33.05 ಕೆಜಿ ಬೆಳ್ಳಿ ಹಾಗೂ 13 ಕ್ಯಾರೆಟ್ ಡೈಮಂಡ್ ಸಹ ಇದೆ. ಒಂದು ಇನ್ನೋವಾ ಐ ಕ್ರಾಸ್, ಒಂದು ರೇಂಜ್ ರೋವರ್ ಹಾಗೂ ಎರಡು ಕ್ಯಾರಾವ್ಯಾನ್ ಹಾಗೂ ಒಂದು ಇನ್ನೋವಾ ಕ್ರಿಸ್ಟ ಕಾರು ಇದೆ ಎಂದು ಉಲ್ಲೇಖಿಸಲಾಗಿದೆ.

ಮೂರುನೇ ಚುನಾವಣೆ: ನಿಖಿಲ್ ಕುಮಾರಸ್ವಾಮಿಗೆ ಇದು ಮೂರನೇ ಹಾಗೂ ಪ್ರಮುಖ ಚುನಾವಣೆಯಾಗಿದೆ. ಸಾಕಷ್ಟು ಕುತೂಹಲದ ನಂತರ ಈ ಬಾರಿ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಫೈನಲ್ ಆಗಿದೆ. ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಅವರ ಹಿಡಿತ ಇದೆ. ಈ ಕ್ಷೇತ್ರದಲ್ಲಿ ಅವರು ಬರೋಬ್ಬರಿ ಐದು ಬಾರಿ ಗೆಲುವು ಸಾಧಿಸಿದ್ದಾರೆ.ಆದರೆ, ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಈ ಬಾರಿ ನಿಖಿಲ್ ಕುಮಾರಸ್ವಾಮಿ ಸೋತರೆ ಹ್ಯಾಟ್ರಿಕ್ ಸೋಲು ಆಗಲಿದೆ. ಹೇಗಾದರೂ ಮಾಡಿ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳಲೇಬೇಕು ಎಂದು ಎಚ್.ಡಿ ಕುಮಾರಸ್ವಾಮಿ ಪ್ರಯತ್ನಿಸುತ್ತಲ್ಲೇ ಇದ್ದಾರೆ. ಕುಮಾರಸ್ವಾಮಿ ಅವರು ಪುತ್ರ ಪ್ರೇಮ ಗೆಲ್ಲಲಿದೆಯೇ ಇಲ್ಲ ಈ ಬಾರಿಯೂ ಎಡವಲಿದ್ದಾರೆಯೇ ಎನ್ನುವುದು ಇಷ್ಟರಲ್ಲೇ ತಿಳಿಯಲಿದೆ.












Click it and Unblock the Notifications