ಬಿಸಿಯೂಟದ ಅಕ್ಕಿ ತಿಂದ ಅಧಿಕಾರಿಗಳಿಗೆ ಅಮಾನತು ಶಿಕ್ಷೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಮಾರ್ಚ್ 02 : ಸೋಮವಾರಪೇಟೆಯಲ್ಲಿರುವ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ನಡೆದಿರುವ ಅಕ್ಕಿ ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಅಮಾನತು ಮಾಡಲಾಗಿದೆ. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಮೀಸಲಿಟ್ಟ ಅಕ್ಕಿ ಇದ್ದಕ್ಕಿದಂತೆ ನಾಪತ್ತೆಯಾಗಿತ್ತು.

ಚಾಮರಾಜನಗರ ಜಿಲ್ಲಾಧಿಕಾರಿ ಬಿ. ರಾಮು ಅವರು ಓರ್ವ ಆಹಾರ ಶಿರಸ್ತೇದಾರ್ ಹಾಗೂ ಆಹಾರ ನಿರೀಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಸುಮಾರು ಎರಡು ಸಾವಿರ ಕ್ವಿಂಟಾಲ್‍ಗೂ ಅಧಿಕ ಅಕ್ಕಿ ನಿಗೂಢವಾಗಿ ನಾಪತ್ತೆಯಾಗಿತ್ತು, ಈ ಅಕ್ಕಿ ಹಗರಣ ಭಾರೀ ಚರ್ಚೆಗೆ ಕಾರಣವಾಗಿತ್ತು. [ಮದ್ದೂರು ಲಕ್ಷ್ಮಮ್ಮನ ಹಸಿವು ನೀಗಿದ ಅನ್ನಭಾಗ್ಯ]

rice

ಉಗ್ರಾಣದಲ್ಲಿ ಅಕ್ಕಿ ನಿಗೂಢವಾಗಿ ನಾಪತ್ತೆಯಾದ ಬಗ್ಗೆ ಸಾರ್ವಜನಿಕರು ಮತ್ತು ಕೆಲವು ನ್ಯಾಯ ಬೆಲೆ ಅಂಗಡಿ ಮಾಲೀಕರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. ಸಾರ್ವಜನಿಕ ವಲಯದಿಂದ ಬಂದ ದೂರು, ಆಹಾರ ಇಲಾಖೆಯ ಫುಡ್ ಇನ್ಸ್‍ಪೆಕ್ಟರ್ ಭಾರತಿ ಅವರ ಮೇಲೆ ಬರುತ್ತಿದ್ದ ಆರೋಪಗಳನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದರು. [ಮೈಸೂರಿನಲ್ಲಿ ಬಿಸಿ ಊಟಕ್ಕೆ ಬಿಸಿಬಿಸಿ ರಾಗಿ ಮುದ್ದೆ]

ಸೋಮವಾರಪೇಟೆಯಲ್ಲಿರುವ ಗೋದಾಮಿನ ಮೇಲೆ ಫೆ. 19 ರಂದು ದಾಳಿ ನಡೆಸಿ, ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆಗ, ಅಕ್ಕಿ ಅಕ್ರಮ ಬೆಳಕಿಗೆ ಬಂದಿತ್ತು. ಸ್ಥಳದಲ್ಲಿಯೇ ಗೋದಾಮು ವ್ಯವಸ್ಥಾಪಕ ತಮ್ಮಯ್ಯನನ್ನು ಅಮಾನತು, ಬಂಧಿಸಲು ಆದೇಶ ನೀಡಿದ್ದರು. [ನೀವು ತಿನ್ನುವ ಅಕ್ಕಿ ಯಾವುದರಿಂದ ಮಾಡಿದ್ದು!?]

ಸದ್ಯ, ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿಗೆ ಭೇಟಿ ನೀಡದೆ, ಕುಳಿತಲ್ಲೇ ವರದಿ ಸಿದ್ದಪಡಿಸುತ್ತಿದ್ದ ಹಾಗೂ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಫುಡ್ ಇನ್ಸ್‍ಪೆಕ್ಟರ್ ಕೆ.ಎಂ.ಭಾರತಿ ಮತ್ತು ಫುಡ್ ಶಿರಸ್ತೇದಾರ್ ಶ್ರೀಕಂಠ ಆರಾಧ್ಯ ಅವರನ್ನು ಅಮಾನತು ಮಾಡಲಾಗಿದೆ. [ಅಕ್ಕಿ ಮೇಲೆ ಆಸೆ ಇದ್ದರೆ ಕಡಿಮೆ ಮಾಡಿಕೊಂಡು ಬನ್ನಿ!]

ಆಹಾರ ಇಲಾಖೆಯಲ್ಲಿ ನಡೆದಿರುವ ಅಕ್ಕಿ ಹಗರಣದಲ್ಲಿ ಇನ್ನಷ್ಟು ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದೆ. ಇಲಾಖೆಯ ಉನ್ನತ ಅಧಿಕಾರಿಗಳಿಗೆ ಹಗರಣದ ಬಗ್ಗೆ ವರದಿ ಸಲ್ಲಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chamarajanagar deputy commissioner (DC) B.Ramu suspended two officers in connection with the rice scam in Karnataka Food Civil Supplies Corporation godown, Somvarpet. Rice meant for the government's mid-day meal scheme gone missing from the godown, rice scam has come to light on February 19, 2016.
Please Wait while comments are loading...