ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಮಕನಮರಡಿ: ಜಾರಕಿಹೊಳಿ ಹೇಳಿಕೆ ವಿರೋಧಿಸಿ ಹಿಂದೂ ಸಂಘಟನೆಗಳ ಸಮಾವೇಶ

|
Google Oneindia Kannada News

ಬೆಳಗಾವಿ, ನವೆಂಬರ್ 16: ತಾಯಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದರೆ ಸಹಿಸುವ ಮಾತೇ ಇಲ್ಲ. ಎದುರು ಬಂದು ಎದುರಿಸಲಿ. ತಾಕತ್ತಿದ್ದರೆ ಬರ್ತಿರಾ ಸಾಹುಕಾರರೇ ಎಂದು ಸತೀಶ್ ಜಾರಕಿಹೊಳಿ ಅವರಿಗೆ ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಸವಾಲು ಹಾಕಿದರು.

ಬೆಳಗಾವಿ ಜಿಲ್ಲೆಯ ಯಮಕನಮರಡಿಯ ವಿದ್ಯಾವರ್ಧಕ ಸಂಘದ ಶಾಲಾ ಆವರಣದಲ್ಲಿ ಬುಧವಾರ ಸಂಜೆ ಹಿಂದೂ ಪರ ಸಂಘಟನೆಗಳು ಆಯೋಜಿಸಿದ್ದ 'ನಾನು ಹಿಂದೂ' ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಾತಿಯ ಬಗ್ಗೆ ಬರೆದರೆ ಸಹಿಸಿಕೊಳ್ಳುತ್ತೇನೆ. ವೈಯಕ್ತಿಕವಾಗಿ ನಿಂದಿಸಿ ಟ್ರೋಲ್‌ ಮಾಡಿದರೂ ಸಹಿಕೊಳ್ಳುತ್ತೇನೆ. ಆದರೆ, ತಾಯಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದರೆ ಸಹಿಸುವ ಮಾತೇ ಇಲ್ಲ ಎಂದು ಕಿಡಿಕಾರಿದರು.

ತಾಯಿ, ಹಸುಗೂಸುಗಳ ಮರಣ ಮೃದಂಗ: ಆತಂಕಕಾರಿ ವಿ‌ಷಯ ಬಿಚ್ಚಿಟ್ಟ ಕಿಮ್ಸ್‌ ತಾಯಿ, ಹಸುಗೂಸುಗಳ ಮರಣ ಮೃದಂಗ: ಆತಂಕಕಾರಿ ವಿ‌ಷಯ ಬಿಚ್ಚಿಟ್ಟ ಕಿಮ್ಸ್‌

ಹಿಂದೂ ಧರ್ಮವನ್ನು ನುಂಗಬೇಕು ಎಂದು ಬಂದಿದ್ದ ರಾವಣ, ಕಂಸ, ಘೋರಿ, ಘಜನಿ, ಬಾಬರ್‌, ಔರಂಗಜೇಬ್‌, ಟಿಪ್ಪು ಹಜರತ್‌ ಸೇರಿದಂತೆ ಅನೇಕರು ಘೋರ ಅಂತ್ಯ ಕಂಡಿದ್ದಾರೆ. ಇನ್ನು ಈ ಕೊತವಾಲ್‌, ಸಾಹುಕಾರ್‌ಗಳು ಯಾವ ಲೆಕ್ಕ ಎಂದು ಲೇವಡಿ ಮಾಡಿದರು.

Chakravarthy Sulibele Open Challenge to Congress Leader Satish Jarkiholi

ಜಗತ್ತಿನ ಪ್ರಾಚೀನ ಸಂಸ್ಕೃತಿಯಲ್ಲಿ ಹಿಂದೂ ಕೂಡ ಒಂದು ಎಂದು ಸ್ವತಃ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಹೇಳಿದ್ದಾರೆ. ಅಂಬೇಡ್ಕರ್‌ ಅವರ ಹೆಸರು ಹೇಳುವವರು ಇದನ್ನು ತಿಳಿದುಕೊಂಡಿಲ್ಲ. ಧರ್ಮ ಮತ್ತು ರಿಲಿಜನ್‌ ಬೇರೆ ಬೇರೆ. ಮತಾಂತರ ವಿಷಯ ರಿಲಿಜನ್‌ನಲ್ಲಿ ಹೇಳಬೇಕೆ ಹೊರತು ಧರ್ಮದಲ್ಲಿಬರುವುದೇ ಇಲ್ಲ. ಚರ್ಚುಗಳ ಮುಂದೆ ಗರುಡ ಗಂಬಗಳು ಬಂದಿವೆ. ಚರ್ಚ್ಗಳಲ್ಲಿ ಉರುಳು ಸೇವೆ, ಜಾತ್ರೆ ಆರಂಭಿಸುವ ಮೂಲಕ ಸ್ವತಃ
ಚರ್ಚ್ ಗಳು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತಿವೆ ಎಂದರು.

ಹಿಂದೂ ಧರ್ಮಕ್ಕೆ ಸ್ಥಾಪಕರಿಲ್ಲ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರಗಳಿಗೆ ಸ್ಥಾಪಕರಿಲ್ಲ. ಅದೇ ರೀತಿ ಹಿಂದೂ ಧರ್ಮ ಪ್ಯೂರ್‌ ಸೈನ್ಸ್‌. ಹಿಂದೂ ಧರ್ಮದ ಒಳಗೆ ಹೋದರೆ ಜ್ಞಾನದ ಸಂಪತ್ತೇ ಸಿಗುತ್ತದೆ. ಇದನ್ನೇ ಎಲ್ಲ ದಾರ್ಶನಿಕರು ಒಪ್ಪಿಕೊಂಡಿದ್ದಾರೆ. ಭಾರತವನ್ನು ಗೆಲ್ಲಲಾಗಲಿಲ್ಲ ಎನ್ನುವ ಅಸಹಾಯಕತೆಯಿಂದಲೇ ಮುಸ್ಲಿಮರು, ಹಿಂದೂ ಎಂದರೆ ಗುಲಾಮ ಎಂದು ಕರೆದಿದ್ದಾರೆ. ಇದು ನಮಗೆಲ್ಲಹೆಮ್ಮೆಯ ವಿಷಯ ಎಂದು ತಿಳಿದುಕೊಳ್ಳಬೇಕು. 'ಸಪ್ತ ಸಿಂಧೂ ರಾಷ್ಟ್ರ' ಪದ ಭಾರತ ದಿಂದಲೇ ಪರ್ಷಿಯಾಗೆ ಹೋಗಿದ್ದೇ ಹೊರತು, ಪರ್ಶಿಯನ್ನರಿಂದ ಹಿಂದೂ ಪದ ಭಾರತಕ್ಕೆ ಬಂದಿಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಹುಕ್ಕೇರಿಯ ಕ್ಯಾರಗುಡ್ಡ ಶ್ರೀ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ಬೇರೆ ಬೇರೆ ಪ್ರದೇಶಗಳಿಂದ ಹರಿದು ಬರುವ ನದಿಗಳೆಲ್ಲವೂ ಸೇರುವುದು ಸಾಗರವನ್ನು. ಅಂತಹ ಆಳವಾದ ವಿಶಾಲ ಸಂಸ್ಕೃತಿ, ಸಂಪ್ರದಾಯ ಹೊಂದಿರುವುದೇ ಹಿಂದೂ ಧರ್ಮ ಎಂದರು. ನಡತೆಯೇ ಸರಿ ಇಲ್ಲ.

Chakravarthy Sulibele Open Challenge to Congress Leader Satish Jarkiholi

ಹಿರೇಹಡಗಲಿಯ ಹಾಲಸಂಸ್ಥಾನ ಮಠದ ಶ್ರೀಅಭಿನವ ಹಾಲಸ್ವಾಮೀಜಿ ಮಾತನಾಡಿ, ಬಾಯಿ ಬಿಟ್ಟರೆ ಬುದ್ಧ, ಬಸವ, ಅಂಬೇಡ್ಕರ ಹೆಸರು ಹೇಳುವವರ ನಡತೆಯೇ ಸರಿ ಇಲ್ಲ. ಸನಾತನ ಧರ್ಮವನ್ನು ವಿರೋಧ ಮಾಡುವವರ ಜೀವನ ಆದರ್ಶವಾಗಿರಬೇಕೇ ಹೊರತು ಅನಾಗರಿಕರಾಗಬಾರದು ಎಂದರು.

ಈ ಕಾರ್ಯಕ್ರಮದಲ್ಲಿ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾರುತಿ ಅಷ್ಠಗಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಶಶಿಕಾಂತ ನಾಯಕ್‌, ಬಿಜೆಪಿ ಚಿಕ್ಕೋಡಿ ಘಟಕ ಅಧ್ಯಕ್ಷ ಡಾ. ರಾಜೇಶ್‌ ನೇರ್ಲಿ, ಎಸ್ಟಿ ಘಟಕ ಅಧ್ಯಕ್ಷ ಬಸವರಾಜ ಹುಂದ್ರಿ, ಬಿಜೆಪಿ ಬೆಳಗಾವಿ ಜಿಲ್ಲಾಪ್ರಭಾರಿ ಉಜ್ವಲಾ ಬಡವಣಾಚೆ, ರವಿ ಹಂಜಿ, ಪವನ ಕತ್ತಿ, ರುದ್ರಣ್ಣ ಚಂದರಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

English summary
Yuva Brigade Leader Chakravarthy Sulibele Challenges Satish Jarkiholi to open debate on the origin of hindu word controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X