ಕರ್ನಾಟಕ ಹೈಕೋರ್ಟ್ ಗೆ ಐವರು ನ್ಯಾಯಾಧೀಶರ ನೇಮಕ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 12: ದೇಶದಾದ್ಯಂತ ವಿವಿಧ ಹೈಕೋರ್ಟ್ ಗಳಲ್ಲಿ ಖಾಲಿಯಿರುವ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸೂಚಿಸಿದೆ.

ನ್ಯಾಯಾಧೀಶರ ನೇಮಕಾತಿ ಮಂಡಳಿ ಶಿಫಾರಸ್ಸು ಮಾಡಿದ್ದ 77 ಹೆಸರುಗಳ ಪೈಕಿ 34 ಜನರನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದ್ದು ಹೈಕೋರ್ಟ್ ಗಳಿಗೆ ನೇಮಕ ಮಾಡುವಂತೆ ತಿಳಿಸಿದೆ.

Centre appointed 5 new judges to Karnataka high court

ಇನ್ನು ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಐವರು ನ್ಯಾಯಾಧೀಶರನ್ನು ನೇಮಕ ಮಾಡಿದೆ.

ಅಧೀನ ನ್ಯಾಯಾಲಯಗಳ ನ್ಯಾಯಮೂರ್ತಿಗಳಾದ ಕೆಂಪಯ್ಯ, ಸೋಮಶೇಖರ್, ಕೊಟ್ರವ್ವ, ಸೋಮಪ್ಪ ಮುದಗಲ್, ಶ್ರೀನಿವಾಸ್ ಹರೀಶ್ ಕುಮಾರ್, ಜಾನ್ ಮೈಕಲ್ ಕುನ್ಹಾ ಮತ್ತು ಬಸವರಾಜ್ ಆನಂದ ಗೌಡ ಪಾಟೀಲ್ ಅವರನ್ನು ಹೆಚ್ಚುವರಿ ನ್ಯಾಯಮೂರ್ತಿಗಳಿಗಾಗಿ ಪದೋನ್ನತಿ ನೀಡಿ ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ನೇಮಕಗೊಂಡಿರು ನ್ಯಾಯಾಧೀಶರು ಮುಂದಿನ ಎರಡು ವರ್ಷ ಹೆಚ್ಚುವರಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲಿದ್ದು, ಮುಂದಿನವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Centre on Friday told the Supreme Court that it has cleared 34 names out of the 77 recommended by the collegium for appointment as judges in various high courts in the country. In Karnataka, five judges have been appointed to the High Court.
Please Wait while comments are loading...