ಗೋ ಹತ್ಯೆ ನಿಷೇಧ ಅಧಿಸೂಚನೆ ವಿರೋಧಿಸಿ ಮೋದಿಗೆ ಸಿದ್ದರಾಮಯ್ಯ ಪತ್ರ
ಕಸಾಯಿಖಾನೆಗಳಿಗೆ ಮಾರುಕಟ್ಟೆಗಳಿಂದ ಗೋವುಗಳನ್ನು ಒಯ್ಯುವಂತಿಲ್ಲ ಎನ್ನುವ ಕೇಂದ್ರ ಸರಕಾರದ ಹೊಸ ಅಧಿಸೂಚನೆ ವಿರೋಧಿಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು, ಜೂನ್ 10: ಕಸಾಯಿಖಾನೆಗಳಿಗೆ ಮಾರುಕಟ್ಟೆಗಳಿಂದ ಗೋವುಗಳನ್ನು ಒಯ್ಯುವಂತಿಲ್ಲ ಎನ್ನುವ ಕೇಂದ್ರ ಸರಕಾರದ ಹೊಸ ಅಧಿಸೂಚನೆ ವಿರೋಧಿಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
"ಕೇಂದ್ರ ಜಾರಿಗೆ ತಂದಿರುವ ನಿಯಮಗಳು ಕಾನೂನು ಬಾಹಿರ. ಇದರಿಂದ ಭಾರತದ ಸಮಾಜ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ," ಎಂದು ಮುಖ್ಯಮಂತ್ರಿಗಳು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಮಾತ್ರವಲ್ಲದೆ, "ನಿಯಮಗಳನ್ನು ರಾಜ್ಯಗಳ ಜತೆ ಚರ್ಚಿಸಿ ಜಾರಿಗೆ ತರಬೇಕಾಗಿತ್ತು," ಎಂದಿರುವ ಸಿದ್ದರಾಮಯ್ಯ ನಿಯಮಗಳ ಮರುಪರಿಶೀಲನೆ ನಡೆಸುವಂತೆ ಪ್ರಧಾನ ಮಂತ್ರಿಯನ್ನು ಕೇಳಿಕೊಂಡಿದ್ದಾರೆ.
ಈ ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಾ ಪ್ರಧಾನಿಗೆ ಪತ್ರ ಬರೆದು ಕೇಂದ್ರದ ಹೊಸ ಅಧಿಸೂಚನೆಗೆ ಅಸಮ್ಮತಿ ಸೂಚಿಸಿದ್ದರು.












Click it and Unblock the Notifications