ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ

ಅಮೃತ್ ಭಾರತ್ ಯೋಜನೆ ಅಡಿಯಲ್ಲಿ ಕರ್ನಾಟಕದ ಅನೇಕ ರೈಲು ನಿಲ್ದಾಣಗಳು ಅಭಿವೃದ್ಧಿ ಆಗಲಿವೆ. ಎಷ್ಟು ರೈಲು ನಿಲ್ದಾಣ, ಯಾವ ಭಾಗದ ರೈಲು ನಿಲ್ದಾಣಗಳು ಎಂಬ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿರಿ.

|
Google Oneindia Kannada News

ಬೆಂಗಳೂರು, ಫೆಬ್ರುವರಿ 05: ಅಮೃತ್ ಭಾರತ್ ಯೋಜನೆ ಅಡಿಯಲ್ಲಿ ಕರ್ನಾಟಕದ ಒಟ್ಟು ಸುಮಾರು 50ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಅಭಿವೃದ್ಧಿ ಆಗಲಿವೆ. ಇದರ ಜೊತೆಗೆ ನಿಲ್ದಾಣ ವ್ಯಾಪ್ತಿಯ ಸ್ಥಳಗಳು ಸಹಿತ ಅಭಿವೃದ್ಧಿ ನಗರ ಕೇಂದ್ರಗಳಾಗಲಿವೆ.

ಅಮೃತ್ ಭಾರತ್ ಯೋಜನೆ ಅಡಿ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯದ ಸುಮಾರು 52 ರೈಲು ನಿಲ್ದಾಣಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಅವುಗಳಿಗೆ ಅಗತ್ಯ ಸೌಕರ್ಯ ಒದಗಿಸಿ ಉನ್ನತಮಟ್ಟಕ್ಕೇರಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

Central govt has Selected to 52 Railway station of karnataka for make development

Bengaluru Airport: ಫೆ.15 ರಿಂದ ಟರ್ಮಿನಲ್2 ನಲ್ಲಿ ಏರ್‌ ಏಷ್ಯಾ ಸಂಸ್ಥೆಯಿಂದ ವಿಮಾನ ಕಾರ್ಯಾಚರಣೆBengaluru Airport: ಫೆ.15 ರಿಂದ ಟರ್ಮಿನಲ್2 ನಲ್ಲಿ ಏರ್‌ ಏಷ್ಯಾ ಸಂಸ್ಥೆಯಿಂದ ವಿಮಾನ ಕಾರ್ಯಾಚರಣೆ

ಸರ್ಕಾರ ದೀರ್ಘಾವಧಿ ಮತ್ತು ದೂರದೃಷ್ಟಿ ಆಲೋಚನೆ ಹೊಂದಿದ್ದು, ನಿರಂತರ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಿದೆ. ಈ ಐವತ್ತೆರಡು ರೈಲ್ವೆ ನಿಲ್ದಾಣಗಳು ಕರ್ನಾಟಕದ ನೈರುತ್ಯ ರೈಲೈ ವಿಭಾಗ ವ್ಯಾಪ್ತಿಯ ಬೆಂಗಳೂರು, ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ ವಿಭಾಗದಲ್ಲಿ ಬರುತ್ತವೆ. ಜನರು ರೈಲು ಹತ್ತಲು ಬರುವ ಸ್ಥಳವಾಗಿ ಮಾತ್ರವಲ್ಲದೇ, ನಗರ ಕೇಂದ್ರವಾಗಿಯೂ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಗುರಿ ಕೇಂದ್ರ ಸರ್ಕಾರದ್ದಾಗಿದೆ.

ಅಭಿವೃದ್ಧಿಗಾಗಿ ಆಯ್ಕೆಯಾಗಿರುವ ರಾಜ್ಯದ ರೈಲು ನಿಲ್ದಾಣಗಳಲ್ಲಿ ಕನಿಷ್ಠ ಅಗತ್ಯ ಮೂಲ ಸೌಕರ್ಯಗಳನ್ನು ಪರಿಪೂರ್ಣವಾಗಿ ಒದಗಿಸುವ ಉದ್ದೇಶದಿಂದ ಯೋಜನೆಯಲ್ಲಿ ಆದರ್ಶ ನಿಲ್ದಾಣಗಳು ಎಂಬ ವಿಭಾಗವು ಇದೆ. ನಿಲ್ದಾಣಗಳು ಎಂದರೆ ಕೇವಲ ರೈಲುಗಳನ್ನು ಪ್ರಯಾಣಿಕರು ಹತ್ತುವುದು, ಇಲ್ಲವೇ ಇಳಿಯುವುದಕ್ಕೆ ಮಾತ್ರ ಸೀಮಿತ ಮಾಡದೇ ನಿಲ್ದಾಣ ವ್ಯಾಪ್ತಿಯಲ್ಲಿಚಿಲ್ಲರೆ ಮಾರಾಟ ಮಳಿಗೆಗಳು, ಆಹಾರ ಮಳಿಗೆಗಳು, ಇನ್ಫೋಟೈನ್‌ಮೆಂಟ್ ಹಾಗೂ ವಿಶ್ವಾಂತಿ ಕೊಠಡಿ ನಿರ್ಮಿಸಿ ಇನ್ನಷ್ಟು ಉನ್ನತೀಕರಿಸಲಾಗುವುದು.

ಅಂದರೆ ಸಣ್ಣ ಸಣ್ಣ ರೈಲು ನಿಲ್ದಾಣಗಳು ಸಹ ಜಿಲ್ಲಾ ರೈಲ್ವೆ ನಿಲ್ದಾಣಗಳಷ್ಟು ಅಭಿವೃದ್ಧಿಗೊಳ್ಳಲಿವೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ.

ಏನೇನು ಅಭಿವೃದ್ಧಿ ಆಗಲಿದೆ?
ಇನ್ನೂ ನಿಲ್ದಾಣಗಳಲ್ಲಿ ಕ್ರಾಸಿಂಗ್ ಇದ್ದಾಗ ಒಂದು ರೈಲು ಎಕ್ಸಪ್ರೆಸ್ ರೈಲಿಗಾಗಿ ನಿಲ್ಲಬೇಕಿರುತ್ತದೆ. ಇಂತಹ ತಡೆ ರಹಿತ ಬಹುಮಾದರಿ ಸಂಪರ್ಖ ಸಾಧಿಸಲು ನಿಲ್ದಾಣಗಳ ಸುತ್ತಲಿನ ಪ್ರವೇಶ ರಸ್ತೆಗಳ ಬಲವರ್ಧನೆ ಮಾಡಲಾಗುವುದು. ನಗರ ಕೇಂದ್ರವಾಗಿ ಕಾರ್ಯ ನಿರ್ವಹಿಸಲು ಹಾಗೂ ಸ್ಥಳೀಯರ ಆರ್ಥಿಕತೆ ಸುಧಾರಣೆ, ಸಾರಿಗೆ-ಆಧಾರಿತ ಅಭಿವೃದ್ಧಿಗೆ ಅನುಕೂಲವಾಗುವಂತೆ ಈ 52 ನಿಲ್ದಾಣಗಳು ಅಭಿವೃದ್ಧಿಯಾಗಲಿವೆ.

Central govt has Selected to 52 Railway station of karnataka for make development

ವಾಹನಗಳು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ನೆರವಾಗಲು ಹೊಸ ರಸ್ತೆ ನಿರ್ಮಾನ, ಪಾದಚಾರಿ ಮಾರ್ಗಗಳ ಸ್ಥಾಪನೆ, ಸೈಕಲ್ ಪಥಗಳು, ಸ್ಕೈವಾಕ್ ಹಾಗೂ ಸೇತುವೆ ಸೇರಿದಂತೆ ಮುಂತಾದವುಗಳ ರೈಲು ನಿಲ್ದಾಣ ಸುತ್ತಮುತ್ತ ತಲೆಎತ್ತಲಿವೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳ ಜೊತೆಗೆ ಪ್ರಯಾಣಿಕರು ಕ್ಯೂನ ನಲ್ಲಿ ಆರಾಮದಾಯಕವಾಗಿ ಸಾಗುವಂತೆ ವ್ಯವಸ್ಥೆ ಮಾಡುವುದು. ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತಿತರ ಸೌಕರ್ಯ ಒದಗಿಸಲಾಗುತ್ತದೆ ಎಂದು ಕನ್ನಡಪ್ರಭ ವರದಿ ಮಾಡಿದೆ.

ಸಂಪೂರ್ಣ ನವೀಕರಿಸಿದ ನಿಲ್ದಾಣದ ಸಂಕೀರ್ಣ ದಿವ್ಯಾಂಗ-ಸ್ನೇಹಿಯಾಗಿರಬೇಕು. ಮೇಲ್ದರ್ಜೆಗೇರಿದ ರೈಲು ನಿಲ್ದಾಣಗಳು ಸುಸ್ಥಿರತೆಯ ಅಂಶಗಳನ್ನು ಹೊಂದಿರಬೇಕು ಎಂಬೆಲ್ಲ ಅಂಶಗಳನ್ನು ಅಭಿವೃದ್ಧಿ ಯೋಜನೆಯಲ್ಲಿ ಸೇರಿಸಲಾಗಿದೆ.

English summary
Central govt has Selected to 52 Railway station of karnataka for make development under Amrit Bharat Scheme
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X