2 New Railway Line: ಕರ್ನಾಟಕದ 06 ಜಿಲ್ಲೆಗಳಿಗೆ ಅನುಕೂಲಕರ 2 ರೈಲ್ವೆ ಯೋಜನೆಗಳ ಘೋಷಣೆ: ವಿ.ಸೋಮಣ್ಣ
ಬೆಂಗಳೂರು, ಮೇ 15: ಕರ್ನಾಟಕದಲ್ಲಿ ರೈಲ್ವೆ ಜಾಲ ಅಭಿವೃದ್ಧಿ ಪಡಿಸಲಾಗುತ್ತಿದೆ. ವಿದ್ಯುದೀಕರಣ ಜೊತೆಗೆ ಹೊಸ ಮಾರ್ಗ ದ್ವಿಪಥ ರೈಲು ಮಾರ್ಗ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ಕರ್ನಾಟಕದ ವಿವಿಧ ಕಡೆಗಳಲ್ಲಿ ಹೊಸ ರೈಲು ಮಾರ್ಗ ಸೇವೆಗೆ ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಿದೆ. ರಾಜ್ಯದಲ್ಲಿ 235 ಕಿಲೋ ಮೀಟರ್ ಉದ್ದದ ಎರಡು ಹೊಸ ರೈಲ್ವೆ ಯೋಜನೆಗಳಿಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ ಎಂದು ಸಚಿವ ವಿ.ಸೋಮಣ್ಣ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ರೈಲ್ವೆ ಇಲಾಖೆಯು ಕರ್ನಾಟಕದಲ್ಲಿ ನೂತನ ರೈಲ್ವೆ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ಒಪ್ಪಿಗೆ ನೀಡಿದೆ. ಇದರಿಂದ ಒಟ್ಟು ಸುಮಾರು 06 ಜಿಲ್ಲೆಗಳಿಗೆ ಸಹಾಯವಾಗಲಿದೆ. ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿಯಾಗಲಿದೆ. ಆಲಮಟ್ಟಿ- ಯಾದಗಿರಿ ರೈಲು ಮಾರ್ಗ ಹಾಗೂ ಭದ್ರಾವತಿ-ಚಿಕ್ಕಜಾಜೂರುವರೆಗೆ ಎರಡು ನೂತನ ರೈಲ್ವೆ ಮಾರ್ಗಗಳ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು. ಈ ದೃಷ್ಠಿಯಿಂದ, ಈ ಎರಡೂ ರೈಲ್ವೆ ಮಾರ್ಗಗಳ ಅಂತಿಮ ಸರ್ವೆ ಮಾಡಲು ಆದೇಶ ಹೊರಡಿಸಲಾಗಿದೆ ಎಂದು ಸಚಿವರು ಮಾಹಿತಿ ನಿಡಿದ್ದಾರೆ.

ರಾಜ್ಯದಲ್ಲಿ ರೈಲ್ವೆ ಮೂಲ ಸೌಕರ್ಯಗಳ ಹೆಚ್ಚಳ ಹಾಗೂ ನೂತನ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಬೆಂಬಲವಾಗಿ ನಿಂತಿರುವ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಜನತೆಯ ಪರವಾಗಿ ಸಚಿವರು ಧನ್ಯವಾದ ತಿಳಿಸಿದರು.
ಸರ್ವೇಗಾಗಿ 5.8 ಕೋಟಿ ರೂಪಾಯಿ ಮೀಸಲು
ಈ ಎರಡು ಹೊಸ ರೈಲ್ವೆ ಯೋಜನೆಗಳಿಂದ ಉತ್ತರ ಕರ್ನಾಟಕದ ಮೂರು ಹಾಗೂ ಮಧ್ಯ ಕರ್ನಾಟಕದ ಮೂರು ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ಈ ಸರ್ವೆ ಕಾರ್ಯಕ್ಕೆಂದೆ ಸರ್ಕಾರ 5.8 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಸಾರ್ವಜನಿಕ ಸಾರಿಗೆ ಮಹತ್ವ ಅರಿತ ಕೇಂದ್ರ ಸರ್ಕಾರ ರಾಜ್ಯದ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸಿದೆ.

ಪ್ರಾದೇಶಿಕ ರೈಲ್ವೆ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಎರಡು ಮಾರ್ಗಗಳಿಗೆ ಒಪ್ಪಿಗೆ ನೀಡಿದ್ದಲ್ಲದೇ ಅಂತಿಮ ಸ್ಥಳ ಸಮೀಕ್ಷೆ ಕಾರ್ಯಕ್ಕೆ ಅನುದಾನ ನೀಡಲಾಗಿದೆ. ಆಲಮಟ್ಟಿ-ಯಾದಗಿರಿ ನೂತನ ರೈಲು ಮಾರ್ಗದಿಂದ ಉತ್ತರ ಕರ್ನಾಟಕದ ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಅನುಕೂಲವಾಗಲಿದೆ.
ಇನ್ನೂ ಭದ್ರಾವತಿ-ಚಿಕ್ಕಜಾಜೂರು ನೂತನ ರೈಲು ಮಾರ್ಗದಿಂದ ಮಧ್ಯಾ ಕರ್ನಾಟಕದ ಬಾಗಲಕೋಟೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ ಜನರಿಗೆ ಹೆಚ್ಚಿನ ಸಹಾಯವಾಗುತ್ತದೆ.
ಎರಡು ರೈಲ್ವೆ ಯೋಜನೆಗಳ ಸಂಕ್ಷಿಪ್ತ ಮಾಹಿತಿ
1. ಆಲಮಟ್ಟಿ-ಯಾದಗಿರಿ ರೈಲು ಮಾರ್ಗ
* ಸೇವೇ ಉದ್ದ-162 ಕಿಲೋ ಮೀಟರ್
* ಒಟ್ಟು ವೆಚ್ಚ 4.5 ಕೋಟಿ ರೂಪಾಯಿ
* ಸೇವೇ ಉದ್ದ-73 ಕಿಲೋ ಮೀಟರ್
* ಒಟ್ಟು ವೆಚ್ಚ 1.823 ಕೋಟಿ ರೂಪಾಯಿ
* ಒಟ್ಟು 235 ಕಿಲೋ ಮೀಟರ್ ಸರ್ವೇ ನಡೆಯಬೇಕಿದೆ. 5.875 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.












Click it and Unblock the Notifications