ಸಿಡಿ ಪ್ರಸಾರ ತಡೆಗೆ ಜಿ.ಟಿ.ಪಾಟೀಲ್ ಅರ್ಜಿ ಹಾಕಿದ್ಯಾಕೆ?

Posted By:
Subscribe to Oneindia Kannada

ಬಾಗಲಕೋಟೆ, ಡಿಸೆಂಬರ್ 24: ಸಿಡಿ ಪ್ರಕರಣದಲ್ಲಿ ತನ್ನನ್ನೂ ಸಿಕ್ಕಿ ಹಾಕಿಸಲು ಷಡ್ಯಂತ್ರ ನಡೆದಿದೆ ಎಂದು ಊಹಿಸಿ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗದಂತೆ ಮೊದಲೇ ಎಚ್ಚರಿಕೆ ವಹಿಸಿ ಬೀಳಗಿ ಶಾಸಕ ಜೆ.ಟಿ. ಪಾಟೀಲ ಹೈಕೋರ್ಟ್ ಗೆ ಮೊರೆ ಹೋಗಿ ತಡೆಯಾಜ್ಞೆ ತಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ತನಗೆ ಸಂಬಂಧಿಸಿದ ಯಾವುದೇ ಅಶ್ಲೀಲ ಸಿಡಿ ಬಂದರೂ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಬೇಕು ಎಂದು ಬೀಳಗಿ ಶಾಸಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಿಸಿದ ನ್ಯಾ. ಅಶೋಕ್ ಬಿ. ಹಿಂಚಿಗೇರಿ ಅವರ ಏಕಸದಸ್ಯ ನ್ಯಾಯಪೀಠ, ಶಾಸಕರ ಅರ್ಜಿಯನ್ನು ಅಂಗೀಕರಿಸಿ, ಮಾಧ್ಯಮದಲ್ಲಿ ಸಿಡಿ ಪ್ರಸಾರಕ್ಕೆ ಮಾಡದಿರಲು ಆದೇಶ ಹೊರಡಿಸಿದೆ,[ನಾಲ್ವರು ಗಣ್ಯರ ಸಿಡಿ ಶೀಘ್ರ ಬಿಡುಗಡೆ: ಮುಲಾಲಿ]

CD not broadcast: Injunction from the High Court

ಇನ್ನು ಈ ಸಂಬಂಧ ಶಾಸಕ ಶುಕ್ರವಾರ ಪ್ರತಿಕ್ರಿಯಿಸಿದ್ದು, ನನ್ನ ಬಗ್ಗೆ ಅಲ್ಲಲ್ಲಿ ಸಿಡಿ ಬಿಡುಗಡೆಯಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಹೀಗಾಗಿ ಈ ಕ್ರಮ ಕೈಗೊಳ್ಳಲಾಯಿತು. ನಾವು 30 ವರ್ಷಗಳಿಂದ ಹೆಸರು ಕೆಡಿಸಿಕೊಳ್ಳದೇ ರಾಜಕೀಯ ಮಾಡಿರುವೆ, ಸಿಡಿ ಹೆಸರಿನಲ್ಲಿ ತೇಜೋವಧೆ ಮಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಆಧಾರ ರಹಿತ ವರದಿ ಪ್ರಕಟವಾಗಬಾರದು ಎಂಬ ಕಾರಣಕ್ಕೆ ನ್ಯಾಯಲಯ ಮೊರೆ ಹೋಗಿರುವುದಾಗಿ ತಿಳಿಸಿದರು.[ಮೇಟಿ ಸಿಡಿ ಆಯ್ತು, ಇನ್ನೆರಡು ಸಿಡಿ ಯಾವ ಶಾಸಕರದ್ದು ?]

ದೇಶದಲ್ಲಿ ತಂತ್ರಜ್ಞಾನ ಮುಂದುವರೆದಿದೆ ಈಗ ಏನು ಬೇಕಾದರೂ ಸೃಷ್ಟಿಸಬಹುದು, ನಾನು ಜೆ.ಟಿ. ಪಾಟೀಲ್ ಅವರನ್ನು ಬಲ್ಲೆ, ಅವರು ಅಂತಹವರಲ್ಲ ಎಂದು ಜೊತೆಯಲ್ಲಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Put the CD in the media not to broadcast. High Court to apply for an Application brought the injunction the beelali legislator J.T. Patil.
Please Wait while comments are loading...