• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಐ FIR: ಡಿಕೆಶಿ ಐದು ವರ್ಷಗಳಲ್ಲಿ ಸಂಪಾದಿಸಿದ ಆಸ್ತಿ ಎಷ್ಟು ಗೊತ್ತಾ?

|

ಬೆಂಗಳೂರು, ಅ. 06: ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ಸಂದರ್ಭದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿರುವುದು ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಉಪ ಚುನಾವಣೆಯ ಹಿನ್ನೆಲೆಯಲ್ಲಿಯೇ ಸಿಬಿಐ ದಾಳಿಯಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಆದರೆ ಇದು ರಾಜಕೀಯ ಪ್ರೇರಿತ ದಾಳಿಯಲ್ಲ ಎಂದು ಅದಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದರು. ಇದೀಗ ದಾಳಿಗೂ ಮೊದಲು ಸಿಬಿಐ ದಾಖಲಿಸಿದ್ದ ಎಫ್‌ಐಆರ್ 'ಒನ್‌ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿದ್ದು, ದಾಳಿಗೆ ಸ್ಪಷ್ಟವಾದ ಕಾರಣವು ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದ ನಿವಾಸವೂ ಸೇರಿದಂತೆ ನಿನ್ನೆ (ಅ.05)ಯಿಂದ 15 ಕಡೆಗಳಲ್ಲಿ ಏಕಕಾಲಕ್ಕೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ನಗದು ಹಣ, ಚಿನ್ನ ಸೇರಿದಂತೆ ಆಸ್ತಿಯ ಕುರಿತ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಆದರೂ ಈ ದಾಳಿ ರಾಜಕೀಯ ಪ್ರೇರಿತ ಎಂದು ಚರ್ಚೆಗೆ ಕಾರಣವಾಗಿತ್ತು.

ಇದೀಗ ದಾಳಿಗೂ ಮೊದಲು ಬೆಂಗಳೂರಿನ ಸಿಬಿಐ ಕೇಂದ್ರ ಕಚೇರಿಯಲ್ಲಿ ಅಕ್ಟೋಬರ್ 03 ರಂದೇ ಸಿಬಿಐ ಎಫ್‌ಐಆರ್ ದಾಖಲಿಸಿದ್ದು ಆಮೇಲೆ ಸರ್ಚ್‌ ವಾರೆಂಟ್ ಪಡೆದು ದಾಳಿ ನಡೆಸಿರುವುದು ಬಹಿರಂಗವಾಗಿದೆ. ಮೊನ್ನೆಯೇ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಆದಾಯ ಮೀರಿ ಆಸ್ತಿ ಹೊಂದಿದ್ದು ದಾಳಿಗೆ ಮೊದಲ ಕಾರಣವಾಗಿದೆ. ಈ ಎಲ್ಲ ವಿವರಗಳನ್ನು ಸಿಬಿಐ ಅಧಿಕಾರಿಗಳು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಕೆ

ಆದಾಯ ಮೀರಿ ಆಸ್ತಿ ಗಳಿಕೆ

ಭ್ರಷ್ಟಾಚಾರ ತಡೆ ಕಾಯ್ದೆ 1998ರ ಅಡಿಯಲ್ಲಿ ಸಿಬಿಐ ಅಧಿಕಾರಿಗಳು ಎಫ್‌ಐಆರ್‌ನ್ನು ದಾಖಲಿಸಿದ್ದು, 2013 ರಿಂದ 2018ರ ಅವಧಿಯಲ್ಲಿ ಶಿವಕುಮಾರ್‌ ಕುಟುಂಬ 74.93 ಕೋಟಿ ರೂಪಾಯಿಗಳಷ್ಟು ಆದಾಯಕ್ಕೂ ಮೀರಿದ ಆಸ್ತಿಯನ್ನು ಹೊಂದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಕಳೆದ 2013 ರಿಂದ 2018ರ ಅವಧಿಯಲ್ಲಿ ಈ ಆಸ್ತಿ ಹೆಚ್ಚಳವಾಗಿದ್ದು, ಇದಕ್ಕೆ ಸೂಕ್ತ ಪುರಾವೆ ಕೊಡುವಲ್ಲಿ ಡಿ.ಕೆ. ಶಿವಕುಮಾರ್ ವಿಫಲರಾಗಿದ್ದಾರೆಂದು FIRನಲ್ಲಿ ಹೇಳಲಾಗಿದೆ.

ಡಿಕೆಶಿ ಶಿಕ್ಷಾರ್ಹ ಎಂದು FIR

ಡಿಕೆಶಿ ಶಿಕ್ಷಾರ್ಹ ಎಂದು FIR

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಸ್ತಿ ಮೌಲ್ಯ ಐದು ವರ್ಷಗಳಲ್ಲಿ 33.92 ಕೋಟಿ ರೂ. ಗಳಿಂದ 128.60 ಕೋಟಿ ರೂ. ಗಳಷ್ಟಾಗಿದೆ. ತಮ್ಮ ಒಟ್ಟಾರೆ ಆದಾಯಕ್ಕಿಂತ ಶೇ.44.93ರಷ್ಟು ಹೆಚ್ಚು, ಆದಾಯಕ್ಕೂ ಮೀರಿದ ಆಸ್ತಿಯನ್ನು ಅವರು ಹೊಂದಿದ್ದಾರೆ. ಈ ಕುರಿತು ವಿಚಾರಣೆ ನಡೆಸಿದಾಗ ಸಮರ್ಥವಾದ ಉತ್ತರಗಳನ್ನು ಆರೋಪಿಗಳು ನೀಡಿಲ್ಲ. ಹೀಗಾಗಿ, ಭ್ರಷ್ಟಾಚಾರ ನಿಗ್ರಹ ಕಾಯಿದೆ ಕಲಂ 13(2) ಜತೆಗೆ, 13(1)(ಇ) ಅಡಿ ಡಿ.ಕೆ. ಶಿವಕುಮಾರ್‌ ಅವರು ಶಿಕ್ಷಾರ್ಹರು ಎಂದು ಸಿಬಿಐ ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ತನಿಖೆ ನಡೆಸಿದ್ದ ಇಡಿ ಇಲಾಖೆಯು ಐಟಿ ಕಾಯಿದೆ, ಐಪಿಸಿ ಕಲಂಗಳ ಉಲ್ಲಂಘನೆ ಜೊತೆಗೆ ಭ್ರಷ್ಟಾಚಾರ ಕಾಯಿದೆ ಉಲ್ಲಂಘನೆಯಾಗಿದೆ ಎಂದು ತನಿಖೆಯ ನಂತರ ತಿಳಿಸಿತ್ತು. ಅದನ್ನೇ ರಾಜ್ಯ ಸರಕಾರಕ್ಕೆ ಜಾರಿ ನಿರ್ದೇಶನಾಲಯ ತಿಳಿಸಿತ್ತು. ಈ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ತನಿಖೆಯ ಮಾಹಿತಿಯನ್ನು ರಾಜ್ಯ ಸರಕಾರದೊಂದಿಗೆ ಇಡಿ ಹಂಚಿಕೊಂಡಿತ್ತು.

ಸರ್ಕಾರದ ಅನುಮತಿ ಪಡೆದಿದ್ದ ಸಿಬಿಐ

ಸರ್ಕಾರದ ಅನುಮತಿ ಪಡೆದಿದ್ದ ಸಿಬಿಐ

ಈ ಕುರಿತು ರಾಜ್ಯ ಸರಕಾರ ವಿಚಾರಣೆ ನಡೆಸಿ ದಿಲ್ಲಿ ಸ್ಪೆಷಲ್‌ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯಿದೆಯಡಿ ವಿಚಾರಣೆ ನಡೆಸಲು 2019ರ ಸೆ. 25ರಂದು ಅನುಮತಿ ನೀಡಿತ್ತು. ಈ ಮಾಹಿತಿ ಪರಿಶೀಲಿಸಿ ಸಿಬಿಐ, ಡಿ.ಕೆ ಶಿವಕುಮಾರ್‌, ಆಪ್ತ ಆಂಜನೇಯ ಹನುಮಂತಯ್ಯ ಮತ್ತು ಸಂಬಂಧಿಕರಾದ ಶಶಿಕುಮಾರ್‌ ಶಿವಣ್ಣ ಅವರ ವಿರುದ್ಧ 2020ರ ಮಾ. 12ರಂದು ಪ್ರಾಥಮಿಕ ತನಿಖೆ ಆರಂಭಿಸಿತ್ತು. ತನಿಖೆ ವೇಳೆ ಡಿ.ಕೆ. ಶಿವಕುಮಾರ್‌ ಮತ್ತು ಕುಟುಂಬ ಸದಸ್ಯರು 2013ರ ಏ.1ರಿಂದ 2018ರ ಏ.30ರ ನಡುವೆ ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವುದು ದೃಢಪಟ್ಟಿತ್ತು.

  DKS ಮನೆ ಮೇಲೆ ನಡೆದ ದಾಳಿಯ ಹಿಂದಿದೆಯೇ Congress ಒಳಸಂಚು? | Oneindia Kannada
  ಐದು ವರ್ಷಗಳಲ್ಲಿ ಹೆಚ್ಚಾದ ಆಸ್ತಿ

  ಐದು ವರ್ಷಗಳಲ್ಲಿ ಹೆಚ್ಚಾದ ಆಸ್ತಿ

  2013 ಏ.1ರ ಪೂರ್ವದಲ್ಲಿ ಡಿ.ಕೆ. ಶಿವಕುಮಾರ್‌ ಮತ್ತು ಕುಟುಂಬ ಸದಸ್ಯರು 33.92 ಕೋಟಿ ರೂ. ಸ್ಥಿರಾಸ್ತಿ ಮತ್ತು ಚರಾಸ್ತಿ ಹೊಂದಿದ್ದರು. 2018ರ ಏ.30ರ ಐದು ವರ್ಷಗಳ ಅವಧಿಯಲ್ಲಿ 128.60 ಕೋಟಿ ರೂ. ಆಸ್ತಿ ಸಂಪಾದಿಸಿದ್ದರು. ಅಂದರೆ 2018ರ ಹೊತ್ತಿಗೆ ಅವರ ಒಟ್ಟು ಆಸ್ತಿಯ ಮೌಲ್ಯ 162.53 ಕೋಟಿ ರೂ. ಆಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಈ ಎಲ್ಲ ದಾಖಲೆಗಳೊಂದಿಗೆ ಎಫ್‌ಐಆರ್ ದಾಖಲಿಸಿದ್ದ ಸಿಬಿಐ ನಿನ್ನೆ ದಾಳಿ ನಡೆಸಿ ತನಿಖೆ ಮುಂದುವರೆಸಿದೆ.

  English summary
  CBI Files FIR Against KPCC President DK Shivakumar On Allegations Of Acquisition Of Disproportionate Assets, Know more about CBI raid and FIR.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X