Cauvery Water Dispute: "ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಮತ್ತು ವೈಫಲ್ಯಕ್ಕೆ ರಾಜ್ಯದ ರೈತರು, ಕನ್ನಡಿಗರು ಬಲಿಯಾಗಬೇಕೇ?'

ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಮತ್ತು ವೈಫಲ್ಯಕ್ಕೆ ರಾಜ್ಯದ ರೈತರು, ಕನ್ನಡಿಗರು ಬಲಿಯಾಗಬೇಕೇ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 6,000 ಕ್ಯೂಸೆಕ್ ನೀರು ಹರಿಸಲು ಆದೇಶಿಸಿರುವುದು ಕರ್ನಾಟಕದ ಹಿತಾಸಕ್ತಿಗೆ ಹೊಡೆದ ಬಲವಾದ ಪೆಟ್ಟು. ನಮ್ಮ ಕರ್ನಾಟಕದ ವಾದಕ್ಕೆ ಪ್ರಾಧಿಕಾರದಲ್ಲಿ ಸೂಕ್ತ ಬೆಲೆ ಸಿಗದಿರಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರದ ಮೃದು ಧೋರಣೆ ಮತ್ತು ಕಾನೂನು ಹೋರಾಟದ ಸಂಪೂರ್ಣ ವೈಫಲ್ಯವೇ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಭಾವದ ನಡುವೆಯೂ ಶರಣಾಗತಿ: ರಾಜ್ಯದಲ್ಲಿ ತೀವ್ರ ಮಳೆ ಅಭಾವವಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಸಂಕಷ್ಟದ ಪರಿಸ್ಥಿತಿಯಿದ್ದರೂ, ಪ್ರಾಧಿಕಾರದ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ನೀರು ಹರಿಸುತ್ತಿರುವುದಾಗಿ ಸರ್ಕಾರವೇ ಒಪ್ಪಿಕೊಳ್ಳುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ!

Cauvery Water Dispute 6 000 Cusecs to Tamil Nadu for 15 Days R Ashoka Slams Congress Government

ಕಡಿಮೆ ನೀರು ಸಂಗ್ರಹ: ಜೂನ್ 1ರಿಂದ ಸೆಪ್ಟೆಂಬರ್ 7ರವರೆಗೆ ರಾಜ್ಯದ ನಾಲ್ಕೂ ಜಲಾಶಯಗಳಿಗೆ ಹರಿದು ಬಂದ ಒಟ್ಟು ಒಳಹರಿವು ಕೇವಲ 108.31 TMC. ಇದು 30 ವರ್ಷಗಳ ಸರಾಸರಿ (216.40 TMC) ಗಿಂತ ಶೇ. 49.95 ರಷ್ಟು ಕಡಿಮೆ!

ಹೆಚ್ಚುವರಿ ನೀರು ಬಿಡುಗಡೆ: ಜುಲೈ 29ರಿಂದ ಸೆಪ್ಟೆಂಬರ್ 7ರವರೆಗೆ ಬಿಳಿಗುಂಡ್ಲು ಮೂಲಕ ತಮಿಳುನಾಡಿಗೆ ಈಗಾಗಲೇ 30.75 TMC ನೀರು ಹರಿದುಹೋಗಿದೆ. ಪ್ರಾಧಿಕಾರ ನಿಗದಿಪಡಿಸಿದ್ದಕ್ಕಿಂತ (27.86 TMC) 2.88 TMC ನೀರನ್ನು ಈ ಸರ್ಕಾರ ಹೆಚ್ಚುವರಿಯಾಗಿ ಹರಿಸಿದೆ!

ತಮಿಳುನಾಡಿನಲ್ಲಿ ನೀರು ಸಮೃದ್ಧಿ: ತಮಿಳುನಾಡಿನ ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಲ್ಲಿ ಈಗಾಗಲೇ 86.98 TMC ನೀರಿದೆ. ಅದಲ್ಲದೆ, ಅಂತರ್ಜಲ ಹೊರತುಪಡಿಸಿ 35.66 TMC ನೀರನ್ನು ನೆರೆ ರಾಜ್ಯ ಬಳಸಿಕೊಂಡಿದೆ.

ತಮಿಳುನಾಡು ಸರ್ಕಾರವು ಪ್ರಾಧಿಕಾರದ ಸಭೆಯಲ್ಲಿ ನಿತ್ಯ ಬರೋಬ್ಬರಿ 20,000 ಕ್ಯೂಸೆಕ್ ನೀರಿಗಾಗಿ ಪಟ್ಟು ಹಿಡಿದಾಗ, ಅದನ್ನು ದೃಢವಾಗಿ ವಿರೋಧಿಸಿ ಸಂಪೂರ್ಣ ನೀರು ಬಿಡುಗಡೆಯನ್ನು ತಡೆಯಲು ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ನಮ್ಮ ಜಲಾಶಯಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿರುವಾಗ, ಮಳೆ ಅಭಾವದಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾಗ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಿ ಈಗ ಮತ್ತೆ 15 ದಿನಗಳಲ್ಲಿ 7.77 TMC ನೀರು ಹರಿಸಲು ಒಪ್ಪಿಕೊಂಡು ಬಂದಿರುವುದು ಕನ್ನಡಿಗರಿಗೆ ಎಸಗಿದ ಮಹಾದ್ರೋಹ ಎಂದು ಆರ್‌. ಅಶೋಕ್ ಅವರು ಹೇಳಿದ್ದಾರೆ.

Cauvery Water Dispute: "ಮೇಲ್ಮನವಿ ಸಲ್ಲಿಸುವ ಆಲೋಚನೆ ಇದೆ" ಎಂಬ ನೆಪ!

"ಮೇಲ್ಮನವಿ ಸಲ್ಲಿಸುವ ಆಲೋಚನೆ ಇದೆ" ಎಂದು ದಿನಕ್ಕೊಂದು ನೆಪ ಹೇಳಿ ಕಾಲಹರಣ ಮಾಡುವ ಬದಲು, ತಕ್ಷಣವೇ ಸುಪ್ರೀಂ ಕೋರ್ಟ್‌ನಲ್ಲಿ ಬಲವಾದ ಮೇಲ್ಮನವಿ ಸಲ್ಲಿಸಿ ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ಕನ್ನಡಿಗರು ಮತ್ತು ರೈತರು ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದು ಖಚಿತ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+