ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಜಲಾಶಯಗಳಲ್ಲಿ ನೀರು ಸಂಗ್ರಹ ಎಷ್ಟಿದೆ?

By Madhusoodhan
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07 : ಕರ್ನಾಟಕದಲ್ಲಿ ಪ್ರತಿಭಟನೆಗಳ ಸರಮಾಲೆ ಆರಂಭವಾಗಿದೆ. ಸಮಗ್ರ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿವೆ. ಇದಕ್ಕೆಲ್ಲ ಕಾರಣ ನೀರು. ನೀರು, ನೀರು.

ಮುಂಗಾರು ಬಹುತೇಕ ತನ್ನ ಆರ್ಭಟವನ್ನು ಮುಗಿಸಿದೆ. ಇನ್ನು ಮುಂದೆ ರಾಜ್ಯದ ಜಲಾಶಯಗಳಿಗೆ ಹೆಚ್ಚಿನ ಒಳಹರಿವು ಹರಿದು ಬರುತ್ತದೆ ಎಂಬ ನಿರೀಕ್ಷೆಯನ್ನು ನಾವು ಇಟ್ಟುಕೊಳ್ಳುವಂತೆ ಇಲ್ಲ.['ಹಿಂದಿನ ಸರ್ಕಾರ ವಚನಭ್ರಷ್ಟ ಸರ್ಕಾರ, ಇದು ವಂಚಕರ ಸರ್ಕಾರ']

ಫ್ರತಿಫಲ ನೀಡಿದ ಮಹದಾಯಿ-ಕಳಸಾ ಬಂಡೂರಿ ಹೋರಾಟದ ಕೂಗು, ಬಗೆಹರಿಯದ ಮೇಕೆದಾಟು ಯೋಜನೆ ವಿವಾದಕ್ಕೆ ಇದೀಗ ಕಾವೇರಿಯೂ ಸೇರಿಕೊಂಡಿದ್ದಾಳೆ. ಬೇಸಿಗೆಯನ್ನು ಎದುರಿಸಲು ನಮ್ಮ ಜಲಾಶಯಗಳಲ್ಲಿ ಎಷ್ಟು ನೀರಿದೆ ಎನ್ನುವುದನ್ನು ಒಂದು ಸುತ್ತು ನೋಡಿಕೊಂಡು ಬಂದರೆ ಮುಂದಿನ ಬೇಸಿಗೆ ಎದುರಿಸಲು ಹೇಗೆ ಸಿದ್ಧರಾಗಬೇಕು ಎಂಬ ಅಂದಾಜು ಸಿಗಬಹುದು.

ಕೆಆರ್ ಎಸ್ ಕತೆ?

ಕೆಆರ್ ಎಸ್ ಕತೆ?

124.80 ಅಡಿಯ ಕೆ ಆಆರ್ ಎಸ್ ನಲ್ಲಿ ಸದ್ಯ 93.72 ಅಡಿ ನೀರಿದೆ. ಕಳೆದ ವರ್ಷ ಇದೇ ವೇಳೆಗೆ 103.50 ಅಡಿ ನೀರಿತ್ತು. ಒಟ್ಟು 49 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ 18 ಟಿಎಂಸಿ ನೀರು ಮಾತ್ರ ಇದೆ.

ಕಬಿನಿ ಜನರಿಗೆ ಕಣ್ಣೀರು

ಕಬಿನಿ ಜನರಿಗೆ ಕಣ್ಣೀರು

2284 ಅಡಿಯ ಕಬಿನಿಯಲ್ಲಿ 2275 ಅಡಿ ನೀರಿದೆ. ಇದೇ ವೇಳೆಗೆ ಕಳೆದ ವರ್ಷ 2275.43 ಅಡಿ ನೀರಿತ್ತು. 19 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ 14.81 ಟಿಎಂಸಿ ನೀರಿದೆ.

ಹಾರಂಗಿ

ಹಾರಂಗಿ

2859 ಅಡಿ ಜಲಾಶಯದಲ್ಲಿ 2851 ಅಡಿ ನೀರಿದೆ. 8.50 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 6.75 ಟಿ ಎಂಸಿ ನೀರು ಬಳಕೆಗೆ ಲಭ್ಯವಿದೆ.

ಹೇಮಾವತಿ

ಹೇಮಾವತಿ

2922 ಅಡಿಯ ಅಣೆಕಟ್ಟಿನಲ್ಲಿ 2895 ಅಡಿ ನೀರಿದೆ. 37 ಟಿಎಂಸಿಯ ಅಣೆಕಟ್ಟಿನಲ್ಲಿ 16.47 ಟಿಎಂಸಿ ನೀರಿದೆ.

ಲಿಂಗನಮಕ್ಕಿ ಜಲಾಶಯ

ಲಿಂಗನಮಕ್ಕಿ ಜಲಾಶಯ

1819 ಅಡಿ ಜಲಾಶಯದಲ್ಲಿ 1794 ಅಡಿ ನೀರಿನ ಸಂಗ್ರಹ ಇದೆ. 151 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ 82.27 ಟಿಎಂಸಿ ನೀರಿದ್ದು ಭಾರೀ ಕೊರತೆಯಿದೆ. ಮಲೆನಾಡ ಭಾಗದಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದಿಲ್ಲ.

ಸುಪಾ ಜಲಾಶಯ

ಸುಪಾ ಜಲಾಶಯ

1849 ಅಡಿಯ ಸುಪಾ ಜಲಾಶಯದಲ್ಲಿ 1786 ಅಡಿ ನೀರಿದೆ. 145 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ 74 ಟಿಎಂಸಿ ನೀರಿದೆ.

ವರಾಹಿ

ವರಾಹಿ

1949 ಅಡಿಯ ವರಾಹಿ ಅಣೆಕಟ್ಟಿನಲ್ಲಿ 1920 ಅಡಿ ನೀರಿದೆ. 31.10 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ 16.26ಟಿಎಂಸಿ ನೀರಿದೆ.

ಭದ್ರಾ

ಭದ್ರಾ

2158 ಅಡಿಯ ಭದ್ರಾ ಅಣೆಕಟ್ಟಿನಲ್ಲಿ 2130 ಅಡಿ ನೀರಿದೆ. 71.53 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ 41.23 ಟಿಎಂಸಿ ನೀರಿದೆ.

ತುಂಗಭದ್ರಾ

ತುಂಗಭದ್ರಾ

1633 ಅಡಿಯ ತುಂಗಭದ್ರಾ ಡ್ಯಾಂ ನಲ್ಲಿ 1615 ಅಡಿ ನೀರಿದೆ. 100.86 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ 47.40 ಟಿಎಂಸಿ ನೀರಿದೆ.

ಘಟಪ್ರಭಾ

ಘಟಪ್ರಭಾ

2175 ಅಡಿಯ ಘಟಪ್ರಭಾ ಅಣೆಕಟ್ಟಿನಲ್ಲಿ 2166 ಅಡಿ ನೀರಿದೆ. 51 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ 44.55 ಟಿಎಂಸಿ ನೀರಿದೆ.

ಮಲಪ್ರಭಾ

ಮಲಪ್ರಭಾ

2079 ಅಡಿಯ ಮಲಪ್ರಭಾದಲ್ಲಿ ಸದ್ಯ 2059 ಅಡಿ ನೀರಿದೆ. ಕಳೆದ ವರ್ಷ ಇದೇ ವೇಳೆಗೆ 2055 ಅಡಿ ನೀರಿತ್ತು. ಒಟ್ಟು 37.73 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ 16.09 ಟಿಎಂಸಿ ನೀರು ಮಾತ್ರ ಇದೆ.

ಆಲಮಟ್ಟಿ

ಆಲಮಟ್ಟಿ

1704.81 ಅಡಿಯ ಆಲಮಟ್ಟಿಯ ಮಾತ್ರ ಈ ವರ್ಷ ಭರ್ತಿಯಾಗಿದೆ. 123 ಟಿಎಂಸಿ ನೀರಿನ ಸಂಗ್ರಹ ಹೊಂದಿದೆ.

 ನಾರಾಯಣಪುರ

ನಾರಾಯಣಪುರ

1615 ಅಡಿಯ ನಾರಾಯಣಪುರ ಡ್ಯಾಂ ನಲ್ಲಿ 1612 ಅಡಿ ನೀರಿದೆ. 33.31 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ 29.49 ಟಿಎಂಸಿ ನೀರಿದೆ.

English summary
All over Karnataka witnessing protests because of Cauvery verdict. Karnataka will observe a day-long bandh on September 9, 2016 to protest against Supreme Court order. Here is the level of Karnataka's major reservoirs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X