ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ತೀರ್ಪು: ಕರ್ನಾಟಕಕ್ಕೆ ಸಿಹಿಯೂ ಹೌದು, ಕಹಿಯೂ ಹೌದು!

|
Google Oneindia Kannada News

Recommended Video

ಕಾವೇರಿ ವಿವಾದದ ತೀರ್ಪು : ಕರ್ನಾಟಕಕ್ಕೆ ಸಿಹಿ ಕಹಿ ಎರಡೂ ಹೌದು | Oneindia Kannada

ನವದೆಹಲಿ, ಫೆಬ್ರವರಿ 16: ಬಹುದಿನದಿಂದ ಉಸಿರುಬಿಗಿಹಿಡಿದು ಕಾಯುತ್ತಿದ್ದ ಕಾವೇರಿ ತೀರ್ಪು ಇಂದು(ಫೆ.16) ಹೊರಬಿದ್ದಿದೆ.

ಕನ್ನಡಿಗರ ಜೀವನದಿ ಕಾವೇರಿ ನದಿ ನೀರಿನ ಹಂಚಿಕೆಯ ಕುರಿತು 2007 ರ ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ

ಸುಪ್ರೀಂ ಕೋರ್ಟ್ ಕಾವೇರಿ ತೀರ್ಪಿಗೆ ಯಾರು, ಏನೆಂದರು?ಸುಪ್ರೀಂ ಕೋರ್ಟ್ ಕಾವೇರಿ ತೀರ್ಪಿಗೆ ಯಾರು, ಏನೆಂದರು?

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ಅಮಿತ್ ರಾಯ್, ನ್ಯಾ.ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ನೀಡಿದ ಈ ತೀರ್ಪು ಕರ್ನಾಟಕಕ್ಕೆ ಕೊಂಚ ಸಮಾಧಾನ ತಂದಿದ್ದರೆ ತಮಿಳುನಾಡಿನ ಜನರಲ್ಲಿ ಆಕ್ರೋಶ ಹುಟ್ಟಿಸಿದೆ.

ಕರ್ನಾಟಕ ತಮಿಳುನಾಡಿಗೆ ಬಿಡುತ್ತಿದ್ದ 192 ಟಿಎಂಸಿ ಅಡಿ ನೀರನ್ನು ಕಡಿತಗೊಳಿಸಿ 177.75 ಟಿ.ಎಂಸಿ ಅಡಿ ನೀರನ್ನಷ್ಟೇ ಬಿಡಲು ಸುಪ್ರೀಂ ಆದೇಶಿಸಿದೆ. ಇದರಿಂದ ಕರ್ನಾಟಕ ಹೆಚ್ಚುವರಿ 14.25 ನೀರನ್ನು ಉಳಿಸಿಕೊಳ್ಳಬಹುದಾಗಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಹಲವರು ಟ್ವೀಟ್ ಮಾಡಿದ್ದು, ಕೆಲವರು ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದರೆ, ಮತ್ತಷ್ಟು ಜನ ಇದು ಕನ್ನಡಿಗರು ಖುಷಿ ಪಡುವ ವಿಚಾರವಲ್ಲ ಎಂದಿದ್ದಾರೆ.

Array

ತಮಿಳುನಾಡಿನ ಜನರ ಪ್ರತಿಕ್ರಿಯೆ ಬೇಸರ ತಂದಿದೆ!

ತೀರ್ಪು ಸಮಾಧಾನಕರವಾಗಿದೆ. ಆದರೆ ತಮಿಳು ನಾಡಿನ ಜನರ ಪ್ರತಿಕ್ರಿಯೆ ಬೇಸರ ತಂದಿದೆ. ನಾವು ಈಗಾಗಲೇ ಅವರಿಗೆ ಸಾಕಷ್ಟು ನೀರು ನೀಡಿದ್ದೇವೆ. ಈಗಾಗಲೇ ಉಳಿಸಿಕೊಳ್ಳಬೇಕಾದ 14.75 ಟಿಎಂಸಿ ಅಡಿ ನೀರು ನಮಗೆ ನಿಜಕ್ಕೂ ಸಾಕಾಗುವುದಿಲ್ಲ. ಆದರೂ ನಾವು ಹೇಗೂ ನಿರ್ವಹಿಸಿಕೊಳ್ಳಬೇಕಿದೆ. ತೀರ್ಪನ್ನು ತಮಿಳುನಾಡು ಸ್ವಾಗತಿಸಬೇಕಿದೆ ಎಂದಿದ್ದಾರೆ ಮನಿಶ್ ಜವಾಲಿ ಎಂಬುವವರು.

ಕಾವೇರಿ ಅಂತಿಮ ತೀರ್ಪು: ತಮಿಳನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿಕಾವೇರಿ ಅಂತಿಮ ತೀರ್ಪು: ತಮಿಳನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿ

Array

ತಮಿಳರೇ, ಬೆಂಗಳೂರು ಬಿಡಲು ಸಿದ್ಧರಾಗಿ!

ಕಾವೇರಿ ತೀರ್ಪು ಹೊರಬಂದಿದೆ. ಅಕಸ್ಮಾತ್ ತಮಿಳುನಾಡಿನಲ್ಲಿರುವ ಕನ್ನಡಿಗರಿಗೇನಾದರೂ ಆದರೆ ಬೆಂಗಳೂರಿನಲ್ಲಿರುವ ತಮಿಳರು ಕರ್ನಾಟಕ ಬಿಡಲು ಸಿದ್ಧರಾಗಿ ಎಂದಿದ್ದಾರೆ ರಂಜಿತ್ ಎಂಬುವವರು.

ಕಾವೇರಿ ಅಂತಿಮ ತೀರ್ಪು: ಟ್ವಿಟ್ಟರ್ ನಲ್ಲಿ ಶಾಂತಿಮಂತ್ರ ಪಠಣಕಾವೇರಿ ಅಂತಿಮ ತೀರ್ಪು: ಟ್ವಿಟ್ಟರ್ ನಲ್ಲಿ ಶಾಂತಿಮಂತ್ರ ಪಠಣ

Array

ಇನ್ನೂ ಹೆಚ್ಚೇ ನೀರು ಕರ್ನಾಟಕಕ್ಕೆ ಸಿಗಬೇಕಿತ್ತು!

ಗೌರವಾನ್ವಿತ್ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಇನ್ನೂ ಹೆಚ್ಚೇ ನೀರನ್ನು ಉಳಿಸಿಕೊಳ್ಳಲು ಹೇಳುತ್ತದೆ ಎಂದುಕೊಂಡಿದ್ದೆವು. ಆದರೆ ಕಾನೂನಿನ ತೀರ್ಪಿಗೆ ನಾವು ಗೌರವ ನೀಡಬೇಕು ಎಂದಿದ್ದಾರೆ ಅಶೋಕ್ ತೋಟದಗೌಡ್ರು.

ಕರ್ನಾಟಕಕ್ಕೆ ಕಣ್ಣೀರಾಗಲಿಲ್ಲ ಕಾವೇರಿ: ಸಂತಸ ತಂದ ಸುಪ್ರೀಂ ತೀರ್ಪುಕರ್ನಾಟಕಕ್ಕೆ ಕಣ್ಣೀರಾಗಲಿಲ್ಲ ಕಾವೇರಿ: ಸಂತಸ ತಂದ ಸುಪ್ರೀಂ ತೀರ್ಪು

Array

ಇದು ಯಾರ ಗೆಲುವು? ಯಾರ ಸೋಲು?

ಅಕಸ್ಮಾತ್ ಕಾವೇರಿ ತೀರ್ಪು ಕರ್ನಾಟಕದ ವಿರುದ್ಧ ಬಂದಿದ್ದರೆ ಕಾಂಗ್ರೆಸ್ ಮತ್ತು ವಾಟಾಳ್ ನಾಗರಾಜ್, 'ಇದು ಮೋದಿ ಸರ್ಕಾರದ ವೈಫಲ್ಯ, ಬಿಜೆಪಿಯ ವೈಫಲ್ಯ' ಎನ್ನುತ್ತಿದ್ದರು. ಆದರೆ ಪರವಾಗಿ ಬಂದರೆ, 'ಸರ್ಕಾರ ಸರಿಯಾದ ಸಾಕ್ಷ್ಯ ಒದಗಿಸಿದೆ!' ಎನ್ನುತ್ತಾರೆ ಎಂದಿದ್ದಾರೆ ಕಿರಣ್ ಬಾಬು ಎನ್ನುವವರು.

ಟೈಮ್ ಲೈನ್ : ಕಾವೇರಿ ವಿವಾದ ತೀರ್ಪು 15 ವರ್ಷಗಳ ತನಕ ಬದ್ಧಟೈಮ್ ಲೈನ್ : ಕಾವೇರಿ ವಿವಾದ ತೀರ್ಪು 15 ವರ್ಷಗಳ ತನಕ ಬದ್ಧ

ಕಾವೇರಿ ವಿಷಯದಲ್ಲಿ ಕರ್ನಾಟಕ ರಾಜಕೀಯವ ಮಾಡೋಲ್ಲ

ಕಾವೇರಿ ವಿಷಯದಲ್ಲಿ ಕರ್ನಾಟಕ ಎಂದಿಗೂ ರಾಜಕೀಯ ಮಾಡುವುದಿಲ್ಲ. ಆದರೆ ತಮಿಳುನಾಡಿಗೆ ಕಾವೇರಿ ಎಂಬುದು ಬಹುದೊಡ್ಡ ರಾಜಕೀಯ ವಿಷಯ. ಇಲ್ಲಿನ ರಾಜಕೀಯ ಪಕ್ಷಗಳಿಗೆ ಕಾವೇರಿ ವಿವಾದ ಒಂದು ರಾಜಕೀಯ ಸಾಧನವಾಗಿದೆ ಎಂದಿದ್ದಾರೆ ಪಶುಪಥಿ ಎಂಬುವವರು.

English summary
In the much awaited verdict on Cauvery dispute, the Supreme Court on Feb 16th pronounced that Karnataka be given additional 14.75 TMC of the river water while 177.25 TMC of water be released for Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X