ಸರ್ವಪಕ್ಷ ಸಭೆಗೆ ಬಿಜೆಪಿಯಿಂದ ಯಾರೂ ಹೋಗುತ್ತಿಲ್ಲ!
ಬೆಂಗಳೂರು, ಸೆ. 21: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಲು ಸರ್ವಪಕ್ಷದ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಬುಧವಾರ ಸಂಜೆ 5 ಗಂಟೆಗೆ ಕರೆದಿರುವ ಸಭೆಗೆ ಹಾಜರಾಗದಿರಲು ಬಿಜೆಪಿ ನಿರ್ಧರಿಸಿದೆ. ಜೆಡಿಎಸ್ ಸದಸ್ಯರು ಹಾಜರಾಗುವುದು ಅನುಮಾನವಾಗಿದೆ.[ಸೆ.21ರಿಂದ 27ರವರೆಗೂ ಪ್ರತಿದಿನ 6,000 ಕ್ಯೂಸೆಕ್ಸ್ ನೀರು ಹರಿಸಿ]
ಸಿದ್ದರಾಮಯ್ಯ ಅವರು ಕರೆದಿರುವ ಸರ್ವಪಕ್ಷಸಭೆ ಅನಗತ್ಯ, ನಾವು ವಿಶೇಷ ಅಧಿವೇಶನ ಕರೆಯುವಂತೆ ಕೋರಿದ್ದೇವೆ. ಅದಕ್ಕೆ ಬೆಲೆ ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. [ನೀರಿನ ಸಮಸ್ಯೆಗೆ 'ದಿವ್ಯ' ಉಪಾಯ ನೀಡಿದ ರಮ್ಯಾ]

ಪೂರ್ವನಿಗದಿತ ಕಾರ್ಯಕ್ರಮದಂತೆ ಯಡಿಯೂರಪ್ಪ ಅವರು ಕಡೂರು ಪ್ರವಾಸ ಕೈಗೊಂಡಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಬಿಜೆಪಿ ಅಂದಿನಿಂದ ಹೇಳುತ್ತಾ ಬಂದಿದೆ ಆದರೆ, ಈ ಬಗ್ಗೆ ಸಿದ್ದರಾಮಯ್ಯ ದೃಢ ನಿರ್ಧಾರ ಕೈಗೊಂಡಿಲ್ಲ ಏಕೆ? ಎಂದು ಬಿಎಸ್ ವೈ ಪ್ರಶ್ನಿಸಿದ್ದಾರೆ.[ಕರ್ನಾಟಕಕ್ಕೆ ಮರಣಶಾಸನ : ಸಿದ್ದರಾಮಯ್ಯ]
ಜೆಡಿಎಸ್ ಕೂಡಾ ಅನುಮಾನ: ಜೆಡಿಎಸ್ ಸಂಸದ ಎಂಎಸ್ ಪುಟ್ಟರಾಜು ಅವರು ಸುಪ್ರೀಂಕೋರ್ಟ್ ತೀರ್ಪು ಖಂಡಿಸಿ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ಮಂಡ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರು, ಸಂಸದರು, ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.












Click it and Unblock the Notifications