ಕಾವೇರಿ ನದಿ ಕಾಲುವೆಗಳ ಮೇಲೆ ಸೌರ ಫಲಕ ಸ್ಥಾಪನೆ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 02 : ಆಮಲಟ್ಟಿ ಬಲದಂಡೆ ಕಾಲುವೆಗಳ ಮೇಲೆ ಸೌರ ವಿದ್ಯುತ್ ಉತ್ಪಾದಿಸುವ ಯೋಜನೆ ಯಶಸ್ವಿಯಾಗಿದೆ. ಸದ್ಯ, ಇಂಧನ ಇಲಾಖೆ ನೀರಾವರಿ ಇಲಾಖೆ ಸಹಯೋಗದಿಂದ ಕಾವೇರಿ ನದಿಯ ನಾಲೆಗಳ ಮೇಲೆ ಸೌರ ಫಲಕ ಅಳವಡಿಸಲು ಯೋಜನೆ ರೂಪಿಸಿದೆ.

ಪ್ರತಿದಿನ 120 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲು ಕಾವೇರಿ ನದಿ ಪಾತ್ರದ ನಾಲೆಗಳ ಮೇಲೆ ಸೌರ ಫಲಕ ಅಳವಡಿಸಲಾಗುತ್ತದೆ. ನೀರಾವರಿ ಉದ್ದೇಶಕ್ಕೆ ಅಗತ್ಯವಿರುಷ್ಟು ವಿದ್ಯುತ್ ಬಳಸಿಕೊಂಡು, ಉಳಿದ್ದನ್ನು ಗ್ರೀಡ್‌ಗೆ ಸಂಪರ್ಕಿಸಲು ನಿರ್ಧರಿಸಲಾಗಿದೆ.[ಸೋಲಾರ್ ವಿದ್ಯುತ್ ಉತ್ಪಾದನೆಗೆ ಸರ್ಕಾರದಿಂದಲೇ ಸಾಲ ಸೌಲಭ್ಯ]

Cauvery basin to generate at least 120MW per day

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಆಮಲಟ್ಟಿ ಬಲದಂಡೆ ಕಾಲುವೆಗಳ ಮೇಲೆ ಸೌರ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಈ ಯೋಜನೆ ಯಶಸ್ವಿಯಾದ ಹಿನ್ನಲೆಯಲ್ಲಿ ಕಾವೇರಿ ಪಾತ್ರದಲ್ಲೂ ಇದನ್ನು ಜಾರಿಗೆ ತರಲು ಯೋಜನೆ ಸಿದ್ಧವಾಗಿದೆ.[ಕರ್ನಾಟಕ ಹೈಕೋರ್ಟಿಗೆ ಸೌರಶಕ್ತಿ ಬಲ]

ಕಾವೇರಿ ನೀರಾವರಿ ನಿಗಮ ನಿಯಮಿತ ಇಂಧನ ಇಲಾಖೆಗೆ ಈ ಕುರಿತು ವಿವರವಾದ ಪ್ರಸ್ತಾವನೆ ಸಲ್ಲಿಸಿದೆ. ಎಲ್ಲಿ ಎಷ್ಟು ಸ್ಥಳವಿದೆ?, ಎಲ್ಲಿ ಯೋಜನೆ ಜಾರಿಗೊಳಿಸಬಹುದು? ಮುಂತಾದ ವಿವರಗಳನ್ನು ಈ ಯೋಜನಾ ವರದಿ ಒಳಗೊಂಡಿದೆ.[ಪಾವಗಡಕ್ಕೆ ಬಂತು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್]

ನೀರಾವರಿ ಮತ್ತು ಇಂಧನ ಇಲಾಖೆ ಈ ಯೋಜನಾ ವರದಿ ಬಗ್ಗೆ ಚರ್ಚೆ ನಡೆಸಿದ್ದು, ಯೋಜನೆಗೆ ಎಷ್ಟು ವೆಚ್ಚ ವಾಗಲಿದೆ ಎಂದು ಅಂದಾಜು ನಡೆಸಲಾಗುತ್ತಿದೆ. ವಿದ್ಯುತ್ ಖರೀದಿ ಒಪ್ಪಂದದ ಅನ್ವಯ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂಬುದು ಸದ್ಯದ ಮಾಹಿತಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Solar parks will be set up along the Cauvery basin to generate at least 120MW per day. The canals and vacant land slots along the Cauvery will soon be utilised to solar power genaration.
Please Wait while comments are loading...