Karnataka Elections: ಬಿಜೆಪಿ ಟಿಕೆಟ್ ಹಂಚಿಕೆ- ಯಾವ ಸಮುದಾಯಕ್ಕೆ ಎಷ್ಟು ತಿಳಿಯಿರಿ
ಬೆಂಗಳೂರು, ಏಪ್ರಿಲ್ 20: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಎಲ್ಲಾ 224 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಪಕ್ಷವು ವಿವಿಧ ಜಾತಿಗಳಿಗೆ ಪ್ರಾತಿನಿಧ್ಯವನ್ನು ನೀಡಿದೆ. ಲಿಂಗಾಯತರು ಸಿಂಹಪಾಲು ಟಿಕೆಟ್‌ಗಳನ್ನು ಪಡೆದಿದ್ದಾರೆ. ಕೇಸರಿ ಪಕ್ಷವು ಪ್ರತಿಪಕ್ಷಗಳ ಮತಗಳಿಗೆ ಕತ್ತರಿ ಹಾಕಲು ಪರಿಶಿಷ್ಟ ಜಾತಿಯವರಿಗೆ ದೊಡ್ಡ ಪ್ರಮಾಣದ ಟಿಕೆಟ್ ನೀಡಿದೆ.
ನಿರೀಕ್ಷೆಯಂತೆ ಪಕ್ಷವು 68 ಟಿಕೆಟ್‌ಗಳನ್ನು ಲಿಂಗಾಯತರಿಗೆ ನೀಡಿದೆ. ಅತ್ಯಧಿಕ ಸಂಖ್ಯೆಯ ಸ್ಥಾನಗಳು ಲಿಂಗಾಯತರ ಪಾಲಾಗಿವೆ. ಸಮುದಾಯವು ಸಾಂಪ್ರದಾಯಿಕವಾಗಿ ಪಕ್ಷಕ್ಕೆ ಮತ ಹಾಕುತ್ತದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಲಿಂಗಾಯತರಿಗೆ ಮಣೆ ಹಾಕಿದೆ.

ಕರ್ನಾಟಕದ ಎರಡನೇ ಪ್ರಾಬಲ್ಯದ ಸಮುದಾಯವಾದ ಒಕ್ಕಲಿಗರಿಗೆ 42 ಸ್ಥಾನಗಳಲ್ಲಿ ಟಿಕೆಟ್ ನೀಡಿದೆ.
ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ)ಗಳನ್ನು ಓಲೈಸುವ ಉದ್ದೇಶದಿಂದ ಪಕ್ಷವು ಕ್ರಮವಾಗಿ 37 ಮತ್ತು 18 ಸ್ಥಾನಗಳನ್ನು ಹಂಚಿಕೆ ಮಾಡಿದೆ.
2011 ರ ಜನಗಣತಿಯ ಮಾಹಿತಿಯ ಪ್ರಕಾರ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳು ರಾಜ್ಯದ ಒಟ್ಟು 6.10 ಕೋಟಿ ಜನಸಂಖ್ಯೆಯಲ್ಲಿ ಸುಮಾರು 24 ಪ್ರತಿಶತದಷ್ಟಿದ್ದಾರೆ.
ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಮೀಸಲಾತಿಯನ್ನು ಹೆಚ್ಚಿಸಿದ ನಂತರ ಪಕ್ಷವು ಎಸ್‌ಸಿ/ಎಸ್‌ಟಿ ಸಮುದಾಯದಿಂದ ಲಾಭಾಂಶದ ಮೇಲೆ ಕಣ್ಣಿಟ್ಟಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಬ್ರಾಹ್ಮಣರು 13 ಟಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಈಡಿಗ ಸಮುದಾಯಕ್ಕೆ 8 ಟಿಕೆಟ್ ನೀಡಿದೆ. ಕುರುಬ ಮತ್ತು ರೆಡ್ಡಿ ಸಮುದಾಯಗಳು ತಲಾ 7 ಸ್ಥಾನ ಪಡೆದಿವೆ. ಬಂಟ್ ಸಮುದಾಯದ ಅಭ್ಯರ್ಥಿಗಳು ಆರು ಟಿಕೆಟ್ ಪಡೆದಿದ್ದಾರೆ.
ಬಿಜೆಪಿಯ ಪಟ್ಟಿಯಲ್ಲಿ ಕೆಲವು ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳೂ ಸ್ಥಾನ ಪಡೆದಿದ್ದಾರೆ. ಬಿಜೆಪಿಯಿಂದ ಐದು ವಕೀಲರು, 3 ಶಿಕ್ಷಣ ತಜ್ಞರು, 1 ನಿವೃತ್ತ ಐಎಎಸ್ ಮತ್ತು 1 ಮಾಜಿ ಐಪಿಎಸ್ ಅಧಿಕಾರಿ, 3 ನಿವೃತ್ತ ಸರ್ಕಾರಿ ನೌಕರರು ಮತ್ತು 8 ಸಾಮಾಜಿಕ ಕಾರ್ಯಕರ್ತರು ಟಿಕೆಟ್ ಪಡೆದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಚುನಾವಣೆಗೆ ಶಿಗ್ಗಾವಿಯಿಂದ ಸ್ಪರ್ಧಿಸಲಿದ್ದಾರೆ. ಶಿಕಾರಪುರದಿಂದ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ಬಿಜೇಂದ್ರ ಕಣಕ್ಕಿಳಿದಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಮುಖಂಡ ಸಿಟಿ ರವಿ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಮುಖಂಡರಾದ ರಮೇಶ್ ಜಾರಕಿಹೊಳಿ ಮತ್ತು ಗೋವಿಂದ ಎಂ ಕಾರಜೋಳ ಅವರು ಕ್ರಮವಾಗಿ ಗೋಕಾಕ ಮತ್ತು ಮುಧೋಳದಿಂದ ಸ್ಪರ್ಧಿಸಲಿದ್ದಾರೆ.
ಬಿಜೆಪಿ ನೀಡಿರುವ ಜಾತಿವಾರು ಟಿಕೆಟ್‌ಗಳ ಸಂಪೂರ್ಣ ಪಟ್ಟಿ ಇಲ್ಲಿದೆ
1 ಲಿಂಗಾಯತ 68
2 ಒಕ್ಕಲಿಗ 47
3 ಎಸ್ಸಿ 37
4 ಎಸ್‌ಟಿ 18
5 ಬ್ರಾಹ್ಮಣರು 13
6 ಈಡಿಗ 8
7 ಕುರುಬ 7
8 ರೆಡ್ಡಿ 7
9 ಬಂಟರು 6
10 ಮರಾಠಾ 3
11 ಗಾಣಿಗ 2
12 ನಾಯ್ಡು 2
13 ರಜಪೂತ 2
14 ಯಾದವ್ 2
15 ಬಲಿಜ 1
16 ಜೈನ 1
17 ಕೊಡವರು 1
18 ಕೋಲಿ-ಕಬ್ಬಲಿಗ 1
19 ಕೊಮಾರಪಂತ್ 1
20 ಮೊಗವೀರ 1
21 ತಿಗಳ 1












Click it and Unblock the Notifications