'ರವಿ ಕಾಣದ್ದನ್ನೂ ಪತ್ರಕರ್ತರು ಹುಡುಕಿ ಬರೆದಿರುತ್ತಾರೆ'

Posted By:
Subscribe to Oneindia Kannada

ಕೊಪ್ಪಳ, ಆಗಸ್ಟ್ 26 : ಕರ್ನಾಟಕ ಸರ್ಕಾರ ಸುಮಾರು 130 ಕೋಟಿ ವೆಚ್ಚದಲ್ಲಿ ನಡೆಸಿದ ಜಾತಿ ಗಣತಿ ವರದಿ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಮಾಧ್ಯಮಗಳಲ್ಲಿ ವರದಿಯ ಅಂಕಿ-ಸಂಖ್ಯೆಗಳು ಬಹಿರಂಗವಾಗುತ್ತಿವೆ. ವರದಿ ಸೋರಿಕೆಯಾಗಿದೆ ಎಂಬ ಸುದ್ದಿಗಳು ಹಬ್ಬಿವೆ.

ಕೊಪ್ಪಳದಲ್ಲಿ ಶುಕ್ರವಾರ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು, 'ರವಿ ಕಾಣದ್ದನ್ನೂ ಪತ್ರಕರ್ತರು ಹುಡುಕಿ ಬರೆದಿರುತ್ತಾರೆ. ಆದರೆ, ಅದು ಅಧಿಕೃತ ಅಲ್ಲ. ಜಾತಿ ಗಣತಿ ವರದಿ ಸೋರಿಕೆಯಾಗಿಲ್ಲ' ಎಂದು ಸ್ಪಷ್ಟಪಡಿಸಿದರು.[ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?]

Caste census data not leaked says H.Anjaneya

'ಕೆಲವು ಸಮುದಾಯಗಳಿಗೆ ಕೊಡಬೇಕಾದ ಸೌಲಭ್ಯಗಳ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದಿಂದ ಶಿಫಾರಸು ಕೇಳಿದ್ದೇವೆ. ಆಯೋಗ ಅದಕ್ಕೆ ಕಾಲಾವಕಾಶ ಕೇಳಿದೆ. ಶಿಫಾರಸು ಬಂದ ನಂತರ ವರದಿಯನ್ನು ಸದನದಲ್ಲಿ ಮಂಡಿಸಲಾಗುವುದು' ಎಂದು ಸಚಿವರು ಹೇಳಿದರು.[ಸಿದ್ದರಾಮಯ್ಯ ಮನೆಯಲ್ಲಿ ಜಾತಿ ಗಣತಿ : ಚಿತ್ರ, ವಿವರ]

ಕರ್ನಾಟಕ ಸರ್ಕಾರ 2015ರಲ್ಲಿ ಸುಮಾರು 130 ಕೋಟಿ ವೆಚ್ಚದಲ್ಲಿ ಜಾತಿ ಗಣತಿ ನಡೆಸಿದೆ. ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಸೇರಿದ ವ್ಯಕ್ತಿಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿ-ಗತಿ, ಔದ್ಯೋಗಿಕ-ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಅಂಶಗಳ ಮೇಲೆ ನಿಖರವಾದ ಮಾಹಿತಿ ಸಂಗ್ರಹಿಸುವುದು ಸಮೀಕ್ಷೆಯ ಉದ್ದೇಶವಾಗಿತ್ತು.['ಜಾತಿಗಣತಿ ವಿರೋಧಿಸುವವರು ಜಾತಿವಾದಿಗಳು']

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Social welfare minister H. Anjaneya dismissed the rumour of details of the caste census being leaked.
Please Wait while comments are loading...