ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಉಚಿತ ಚಿಕಿತ್ಸೆ ಸೌಲಭ್ಯ!

By Nayana
|
Google Oneindia Kannada News

ಬೆಂಗಳೂರು ಮೇ 05 : ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಚುನಾವಣೆಯ ದಿನ ಹಾಗೂ ಮತೆಣಿಗೆ ದಿನದಂದು ಉಚಿತ ಚಿಕಿತ್ಸೆ ಸೌಲಭ್ಯ ಪಡೆಯಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸುತ್ತೋಲೆ ಹೊರಡಿಸಿದೆ.

ಮತದಾನ ಮತ್ತು ಮತ ಎಣಿಕೆ ದಿನದಂದು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗೆ ತುರ್ತು ಚಿಕಿತ್ಸೆಯ ಅಗತ್ಯ ಕಂಡುಬಂದಲ್ಲಿ ತಕ್ಷಣವೇ ಹತ್ತಿರದಲ್ಲಿರುವ ಆರೋಗ್ಯ ಕೇಂದ್ರ ಇಲ್ಲವೇ ಆಸ್ಪತ್ರೆಗೆ ದಾಖಲಿಸಿದಲ್ಲಿ, ಅಲ್ಲಿ ನೀಡುವ ಚಿಕಿತ್ಸೆಯು ನಗದು ರಹಿತವಾಗಿರಬೇಕು ಎಂದು ಅಪರ ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಮಹಿಳೆಯರಿಗೆಂದೇ ಸಿದ್ಧಗೊಳ್ಳುತ್ತಿವೆ ಪಿಂಕ್ ಮತಗಟ್ಟೆ ಮಹಿಳೆಯರಿಗೆಂದೇ ಸಿದ್ಧಗೊಳ್ಳುತ್ತಿವೆ ಪಿಂಕ್ ಮತಗಟ್ಟೆ

ಒಂದು ಪಕ್ಷ ಹತ್ತಿರದಲ್ಲಿ ಸರ್ಕಾರಿ ಆಸ್ಪತ್ರೆಗಳು ಲಭ್ಯವಿರದಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿಯೂ ಸಹ ನಗದು ರಹಿತವಾಗಿ ಚಿಕಿತ್ಸೆಯನ್ನು ನೀಡಬೇಕಾಗಿರುತ್ತದೆ.

Cashless treatment for election duty staff

ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳು ಪಡೆದುಕೊಳ್ಳುವ ನಗದು ರಹಿತ ತುರ್ತು ಚಿಕಿತ್ಸಾ ಇಲ್ಲವೇ ಸಾಮಾನ್ಯ ಚಿಕಿತ್ಸಾ ವೆಚ್ಚದ ಬಿಲ್‍ಗಳನ್ನು ಸಂಬಂಧಿಸಿದ ಆಸ್ಪತ್ರೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಬೇಕು. ಇಲ್ಲಿಂದ ಸಂಭಂಧಿಸಿದ ಆಸ್ಪತ್ರೆಗೆ ಹಣ ಪಾವತಿಯಾಗಲಿದೆ.

ವಿಧಾನಸಭಾ ಚುನಾವಣೆಯ ಅಂಗವಾಗಿ ರಾಜ್ಯದಲ್ಲಿ ಉಳಿದುಕೊಂಡಿರುವ ಕೇಂದ್ರ ರಕ್ಷಣಾ ಸಿಬ್ಬಂದಿಗೂ ಸಹ ತುರ್ತು ಇಲ್ಲವೆ ಸಾಮಾನ್ಯ ಚಿಕಿತ್ಸೆಯನ್ನು ನಗದು ರಹಿತವಾಗಿ ನೀಡಬೇಕಾಗಿರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

English summary
Staff on election duty during polling day and counting day can get cash less treatment for any medical emergency situations at government hospitals and private as well. Department of health and family welfare has provided this facility for the staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X