ಪಕ್ಷಾಂತರಿಗಳಿಗೆ ಟಿಕೆಟ್ ಇಲ್ಲ: ಯಡಿಯೂರಪ್ಪ
ಕೊಪ್ಪಳ, ಡಿಸೆಂಬರ್ 19: ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಪಕ್ಷಕ್ಕೆ ಸೇರುವವರಿಗೆ ಸ್ವಾಗತ ಆದರೆ ಬೇರೆ ಪಕ್ಷದಿಂದ ಬರುವವರಿಗೆ ಚುನಾವಣೆ ಟಿಕೆಟ್ ನೀಡಲಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಪರಿವರ್ತನಾ ಯಾತ್ರೆಗಾಗಿ ನಗರಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷಕ್ಕೆ ಆಗಮಿಸಿದ ಮುಖಂಡರಿಗೆ ಚುನಾವಣೆ ಟಿಕೆಟ್ ನೀಡುವ ಭರವಸೆ ನೀಡಲಾಗುವುದಿಲ್ಲ ಎಂದು ಹೇಳಿದರು.

"ನಮ್ಮದು ಕಾರ್ಯಕರ್ತರ ಆಧಾರದಲ್ಲಿ ನಡೆಯುವ ಪಕ್ಷವಾದ್ದರಿಂದ ನಮಗೆ ಯಾವ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳ ಕೊರತೆ ಇಲ್ಲ, ಒಂದು ಕ್ಷೇತ್ರಕ್ಕೆ 5-10 ಆಕಾಂಕ್ಷಿಗಳಿದ್ದಾರೆ ಎಂದು ಅವರು ಹೇಳಿದರು.
ಗುಜರಾತ್-ಹಿಮಾಚಲ ಪ್ರದೇಶದ ಚುನಾವಣೆಯ ಬಿಜೆಪಿ ಗೆಲುವು ಕರ್ನಾಟಕದ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ, ಕರ್ನಾಟಕದಲ್ಲಿ ಮಿಷನ್ -150 ಸುಲಭವಾಗಿ ಸಾಧ್ಯವಾಗಲಿದೆ, ರಾಜ್ಯದ ಜನ ಪರಿವರ್ತನೆ ಬಯಸುತ್ತಿದ್ದಾರೆ ಎಂದು ಅವರು ಹೇಳಿದರು.












Click it and Unblock the Notifications