Ration Card Cancellation: ಬಿಪಿಎಲ್ ಕಾರ್ಡ್: ಸರ್ಕಾರದ ಬಗ್ಗೆ ಟೀಕಿಸಲ್ಲ ಎಂದ ಬಿ.ವೈ ರಾಘವೇಂದ್ರ !
ರಾಜ್ಯದಲ್ಲಿ ರೇಷನ್ ಕಾರ್ಡ್‌ನ ಕೆಲವೊಂದು ನಿರ್ದಿಷ್ಟ ಬದಲಾವಣೆಗೆ ರಾಜ್ಯ ಸರ್ಕಾರವು ಮುಂದಾಗಿದೆ. ಆದರೆ, ಬಿಪಿಎಲ್ ಹಾಗೂ ಎಪಿಎಲ್ ರೇಷನ್ ಕಾರ್ಡ್‌ಗಳ ವಿಚಾರವು ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲು ಆಗದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ರೇಷನ್ ಕಾರ್ಡ್ ರದ್ದು ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಆದರೆ, ಇದೀಗ ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಅನರ್ಹ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆದವರ ಮೇಲೆ ಕ್ರಮಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ.
ಇನ್ನು ರಾಜ್ಯ ಸರ್ಕಾರವು ಬಿಪಿಎಲ್ ಶಾಕ್ ಕೊಟ್ಟಿತ್ತು. ಜಿಎಸ್ಟಿ, ಐಟಿ ತೆರಿಗೆ ಪಾವತಿ ಮತ್ತು ಸರ್ಕಾರಿ ಹುದ್ದೆಯಲ್ಲಿ ಇರುವವರು ಸಹ ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿದ್ದಾರೆ. ಈ ರೀತಿ ಕಾರ್ಡ್‌ಗಳನ್ನು ಪಡೆದಿರುವವರ ಕಾರ್ಡ್‌ಗಳನ್ನು ರದ್ದು ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿಯ ಹಲವು ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಸಂಸದ ಬಿ.ವೈ ವಿಜಯೇಂದ್ರ ಅವರು, ಸರ್ಕಾರದ ನಡೆಯನ್ನು ಪರೋಕ್ಷವಾಗಿ ಸಮರ್ಥನೆ ಮಾಡಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಸರ್ಕಾರದ ಈ ನಿರ್ದಿಷ್ಟ ವಿಚಾರದಲ್ಲಿ ಕೆಲವೊಂದು ಸರಿಯಾಗಿದೆ. ಈಗ ಇರುವ BPL ಕಾರ್ಡ್ಗೆ ಕೆಲವು ಮಾನದಂಡಕ್ಕೆ ಬದಲಾಗಬೇಕಿದೆ. ಈ ವಿಚಾರದಲ್ಲಿ ನಾನು ಯಾವುದೇ ಟೀಕೆ ಮಾಡುವುದಿಲ್ಲ. ಕೆಲವು ನಿರ್ದಿಷ್ಟ ನಿಯಮಗಳು ಬದಲಾಗುವ ಅವಶ್ಯಕತೆ ಇದೆ ಎಂದು ರಾಘವೇಂದ್ರ ಅವರು ಅಭಿಪ್ರಾಯಪಟ್ಟಿದ್ದಾರೆ.
ಯಾಕೆ ರದ್ದು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ: ಜೋಶಿ
ಇನ್ನು ರೇಷನ್ ಕಾರ್ಡ್‌ಗಳನ್ನು ಯಾಕೆ ರದ್ದು ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದರು.
ಕಾರ್ಡ್‌ಗಳನ್ನು ಏಕೆ ರದ್ದು ಮಾಡಿದ್ದಾರೆ ನನಗೆ ಗೊತ್ತಿಲ್ಲ. ನಾವು ಶೇಕಡಾ 50ರಷ್ಟು ನಗರ ಪ್ರದೇಶ, ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 75 ರಷ್ಟು ಉಚಿತವಾಗಿ ಆಹಾರ ಕೊಡ್ತೀವಿದ್ದೇವೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಯಾಕೆ ಕಾರ್ಡ್ ರದ್ದು ಮಾಡಲು ತೀರ್ಮಾನ ಮಾಡಿದೆ ಅನ್ನೋದು ಗೊತ್ತಿಲ್ಲ. ನಾನು ಸಂಪೂರ್ಣವಾಗಿ ತಿಳಿದುಕೊಳ್ತೀನಿ. ಆಹಾರ ಭದ್ರತೆಗಾಗಿ ನಾವು ಪ್ರತಿ ವರ್ಷ 2 ಲಕ್ಷ 11 ಸಾವಿರ ಕೋಟಿ ನಾವು ಖರ್ಚು ಮಾಡ್ತಿದ್ದೇವೆ. ಕಾರ್ಡ್ ರದ್ದು ಮಾಡತಿರೋದು ನಿಮ್ಮಿಂದ ಗೊತ್ತಾಗಿದೆ ಎಂದು ಹೇಳಿದ್ದಾರೆ.

ರೇಷನ್ ಕಾರ್ಡ್ (ಪಡಿತರ ಚೀಟಿಗೆ)ಗೆ ಬೇಕಾಗುವ ದಾಖಲೆಗಳು ಏನೇನು ?
ನೀವು ರೇಷನ್ ಕಾರ್ಡ್ ಪಡೆದುಕೊಳ್ಳಬೇಕಾದರೆ, ಈ ದಾಖಲೆಗಳು ನಿಮ್ಮ ಬಳಿ ಇರಬೇಕಾಗುತ್ತದೆ.
* ಆಧಾರ್ ಕಾರ್ಡ್
* ಕಾಯಂ ನಿವಾಸದ ದಾಖಲೆ / ಪುರಾವೆ
* ನಿಮ್ಮ ಮೊಬೈಲ್ ಸಂಖ್ಯೆ
* ಡ್ರೈವಿಂಗ್ ಲೈಸೆನ್ಸ್
* ಈಚೆಗೆ ತೆಗೆಯಲಾದ ಪಾಸ್ ಪೋರ್ಟ್ ಅಳತೆಯ ಫೋಟೋ
* ಮತದಾರರ ಗುರುತಿನ ಚೀಟಿ
* ಆದಾಯ ಪ್ರಮಾಣ ಪತ್ರ (Income certificate)
* ಮನೆಯ ಸದಸ್ಯರ ಬಗ್ಗೆ ನಿಖರ ಮಾಹಿತಿ












Click it and Unblock the Notifications