ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಇಲ್ಲದೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ: ದೇವೇಗೌಡ

|
Google Oneindia Kannada News

ಬೆಂಗಳೂರು, ಫೆಬ್ರವರಿ 05: ಕಾಂಗ್ರೆಸ್ ಪಕ್ಷ ಇಲ್ಲದೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಮಹಾಘಟಬಂಧನ್‌ನ ಪ್ರಮುಖ ನಾಯಕ ದೇವೇಗೌಡ ಅವರು ಇಂದು ಹೇಳಿದ್ದಾರೆ.

ಪದ್ಮನಾಭನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ಬಲ ಪ್ರಾದೇಶಿಕ ಪಕ್ಷಗಳಿಗೆ ಬೇಕು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

can not form government in central without congress: Deve Gowda

ಪ್ರಾದೇಶಿಕ ಪಕ್ಷಗಳೇ ಸೇರಿ ಬಿಜೆಪಿ ವಿರುದ್ಧವಾಗಿ ರಚಿಸಿರುವ ಮಹಾಘಟಬಂಧನ್‌ ಗೆ ಕಾಂಗ್ರೆಸ್‌ನ ಶಕ್ತಿಯ ಅವಶ್ಯಕತೆ ಇದ್ದೇ ಇದೆ ಎಂದು ದೇವೇಗೌಡ ಅವರು ಹೇಳಿದ್ದಾರೆ. ಮಹಾಘಟಬಂಧನ್‌ನಲ್ಲಿ ಕೆಲವು ಪಕ್ಷಗಳಿಗೆ ಕಾಂಗ್ರೆಸ್‌ ರಾಜಕೀಯ ವಿರೋಧಿಯಾಗಿದ್ದು, ಅವು ಕಾಂಗ್ರೆಸ್‌ ಜೊತೆ ಗುರುತಿಸಿಕೊಳ್ಳಲು ಹಿಂದೇಟು ಹಾಕಿವೆ ಹೀಗಾಗಿ ದೇವೇಗೌಡ ಅವರ ಈ ಹೇಳಿಕೆ ಮಹತ್ವದ್ದಾಗಿದೆ.

21 ವಿರೋಧ ಪಕ್ಷಗಳಿಂದ ಚುನಾವಣಾ ಆಯುಕ್ತರ ಭೇಟಿ, ಇವಿಎಂ ಬಗ್ಗೆ ಮಹತ್ವದ ಸಲಹೆ21 ವಿರೋಧ ಪಕ್ಷಗಳಿಂದ ಚುನಾವಣಾ ಆಯುಕ್ತರ ಭೇಟಿ, ಇವಿಎಂ ಬಗ್ಗೆ ಮಹತ್ವದ ಸಲಹೆ

ಪ್ರಸ್ತುತ ಮಹಾಘಟಬಂಧನ್‌ಗೆ ಕಾಂಗ್ರೆಸ್ ಪಕ್ಷವು ಬಾಹ್ಯ ಬೆಂಬಲವನ್ನಷ್ಟೆ ನೀಡಿದೆ. ದೇವೇಗೌಡ ಅವರ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಲೋಕಸಭೆ ಅತಂತ್ರವಾಗಿ ಕಾಂಗ್ರೆಸ್‌ ಬೆಂಬಲದೊಂದಿಗೆ ಮಹಾಘಟಬಂಧನ್ ಅಥವಾ ಮಹಾಘಟಬಂಧನ್‌ ಬೆಂಬಲದಿಂದ ಕಾಂಗ್ರೆಸ್ ಅಧಿಕಾರ ಹಿಡಿಯುವ ಮುನ್ಸೂಚನೆಯನ್ನು ಅವರು ನೀಡಿದ್ದಾರೆ.

ಲೋಕಸಭಾ ಚುನಾವಣೆಗೆ ದೇವೇಗೌಡರ ಸ್ಪರ್ಧೆ ಬಗ್ಗೆ ಜಿಟಿಡಿ ಪ್ರತಿಕ್ರಿಯೆಲೋಕಸಭಾ ಚುನಾವಣೆಗೆ ದೇವೇಗೌಡರ ಸ್ಪರ್ಧೆ ಬಗ್ಗೆ ಜಿಟಿಡಿ ಪ್ರತಿಕ್ರಿಯೆ

English summary
Can't form government in central without help of congress said JDS leader Deve Gowda. He talked to media in his house in Bengaluru. Presently he is main leader in Oppositions 'Mahagatabandhan'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X