ನೂತನ ಸಚಿವರಲ್ಲಿ ಯಾರಿಗೆ ಯಾವ ಖಾತೆ ಮೇಲೆ ಕಣ್ಣು?

Posted By:
Subscribe to Oneindia Kannada

ಬೆಂಗಳೂರು, ಜೂನ್ 20: ಸಿದ್ದರಾಮಯ್ಯ ಅವರು ಕೊನೆಗೂ ತಮ್ಮ ಸಚಿವ ಸಂಪುಟ ಪುನರ್ ರಚನೆ ಮಾಡಿ 13 ಹೊಸ ಮುಖಗಳನ್ನು ಸೇರಿಸಿಕೊಂಡಿದ್ದಾರೆ. ಹಿರಿಯರಾದ ಕಾಗೋಡು ತಿಮ್ಮಪ್ಪ, ಕಿರಿಯರಾದ ಪ್ರಿಯಾಂಕ್ ಖರ್ಗೆ ಸೇರಿದಂತೆ ಜಾತಿ, ಪ್ರದೇಶ ಹಾಗೂ ಪ್ರಭಾವ ಎಲ್ಲಾ ರೀತಿಯಿಂದಲೂ ಸಮತೋಲನ ಆಯ್ಕೆ ಮಾಡಿಕೊಂಡು ಗೆದ್ದಿದ್ದಾರೆ. ಸಿದ್ದರಾಮಯ್ಯ ಅವರ ಮುಂದಿರುವ ಮುಂದಿನ ಪರೀಕ್ಷೆ ಖಾತೆ ಹಂಚಿಕೆ.

ಭಾನುವಾರ ಸಂಜೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನವೇ ಖಾತೆ ಹಂಚಿಕೆ ಪಟ್ಟಿ ಸಿದ್ಧಪಡಿಸಿದ್ದರು ಎನ್ನಲಾಗಿದೆ. ಆದರೆ, ಕಾವೇರಿ ಅಧಿಕೃತ ನಿವಾಸದಲ್ಲಿ ನೂತನ ಸಚಿವರುಗಳ ಜೊತೆ ಒಂದು ಸುತ್ತಿನ ಸಂಪುಟ ಸಭೆ ನಡೆಸಿದ್ದು ಬಿಟ್ಟರೆ ಖಾತೆ ಹಂಚಿಕೆ ಬಗ್ಗೆ ಇನ್ನೂ ಘೋಷಣೆ ಆಗಿಲ್ಲ.

ಆದರೆ, ಯಾರಿಗೆ ಯಾವ ಖಾತೆ ಸಿಗಲಿದೆ ಎಂಬ ಕುತೂಹಲ ಇದ್ದೇ ಇದೆ. ಈಗಾಗಲೇ ಹೊಸ ಸಚಿವರುಗಳು ತಮಗೆ ಬೇಕಾದ ಖಾತೆ ಬಗ್ಗೆ ಅಲ್ಲಲ್ಲಿ ಸುಳಿವು ನೀಡಿದ್ದಾರೆ. ಹಾಗೆ ಕಿವಿಗೆ ಬಿದ್ದ ಗಾಳಿಸುದ್ದಿ ಇಲ್ಲಿದೆ ಓದಿಕೊಳ್ಳಿ.[ಸಚಿವ ಸಂಪುಟಕ್ಕೆ 13 ಹೊಸಮುಖಗಳ ಸೇರ್ಪಡೆ]

9 ಮಂದಿ ಕ್ಯಾಬಿನೆಟ್ ಸಚಿವರಾಗಿ ಹಾಗೂ 4 ಮಂದಿ ಸ್ವತಂತ್ರ ಖಾತೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ 12 ಮಂದಿ ವಿಧಾನ ಸಭಾ ಸದಸ್ಯರು ಹಾಗೂ ಒಬ್ಬರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.[ಮೊದಲ ಬಾರಿಗೆ ಸಚಿವರಾದ ಏಳು ಶಾಸಕರು]

ಕ್ಯಾಬಿನೆಟ್ ಸಚಿವರು: ಕಾಗೋಡು ತಿಮ್ಮಪ್ಪ, ಕೆ.ಆರ್. ರಮೇಶ್ ಕುಮಾರ್, ಬಸವರಾಜ ರಾಯರೆಡ್ಡಿ, ಎಚ್.ವೈ. ಮೇಟಿ, ತನ್ವೀರ್ ಸೇಠ್, ಎಸ್.ಎಸ್. ಮಲ್ಲಿಕಾರ್ಜುನ, ಎಂ.ಆರ್. ಸೀತಾರಾಂ, ಸಂತೋಷ್ ಲಾಡ್ ಹಾಗೂ ರಮೇಶ್ ಲಕ್ಷ್ಮಣ ಜಾರಕಿಹೊಳಿ.[ಸಂಪುಟ ವಿಸ್ತರಣೆ:1 ಕಲ್ಲಿನಲ್ಲಿ 5 ಹಕ್ಕಿ ಹೊಡೆದ ಸಿದ್ದು ಚಾಣಾಕ್ಷತನ!]

ಸ್ವತಂತ್ರ ಖಾತೆಯ ರಾಜ್ಯ ಸಚಿವರು: ಪ್ರಿಯಾಂಕ ಎಂ. ಖರ್ಗೆ, ರುದ್ರಪ್ಪ ಲಮಾಣಿ, ಈಶ್ವರ ಖಂಡ್ರೆ ಹಾಗೂ ಪ್ರಮೋದ್ ಮಧ್ವರಾಜ್ [ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ ರಮ್ಯಾ?]

Siddaramaiah


ಯಾರು ಯಾವ ಖಾತೆ ಬಯಸಿದ್ದಾರೆ? ಯಾರಿಗೆ ಯಾವ ಖಾತೆ ಸಿಗಬಹುದು?
* ಪ್ರಮೋದ್ ಮಧ್ವರಾಜ್ (ಉಡುಪಿ)- ಮೀನುಗಾರಿಕೆ ಹಾಗೂ ಬಂದರು
* ಕಾಗೋಡು ತಿಮ್ಮಪ್ಪ (ಸಾಗರ)- ಕಂದಾಯ
* ರಮೇಶ್ ಕುಮಾರ್ (ಶ್ರೀನಿವಾಸಪುರ)- ಕೃಷಿ
* ತನ್ವೀರ್ ಸೇಠ್ (ನರಸಿಂಹರಾಜ)- ವಕ್ಫ್, ಮುನ್ಸಿಪಾಲಿಟಿ ಹಾಗೂ ಸ್ಥಳೀಯ ಸಂಸ್ಥೆ
* ಎಸ್ ಎಸ್ ಮಲ್ಲಿಕಾರ್ಜುನ (ದಾವಣಗೆರೆ ಉತ್ತರ)- ಯುವ ಮತ್ತು ಕ್ರೀಡಾ ಖಾತೆ

-
-
-
-
-
-
ಸಿದ್ದು ಸಂಪುಟ : ಯಾರಿಗೆ ಯಾವ ಖಾತೆ ಸಿಗಬಹುದು?

ಸಿದ್ದು ಸಂಪುಟ : ಯಾರಿಗೆ ಯಾವ ಖಾತೆ ಸಿಗಬಹುದು?

-
-
-
-
-
-
-

* ಬಸವರಾಜ ರಾಯರೆಡ್ಡಿ (ಯಲಬುರ್ಗಾ)-ಪ್ರಾಥಮಿಕ ಶಿಕ್ಷಣ
* ಈಶ್ವರ ಖಂಡ್ರೆ (ಭಾಲ್ಕಿ)- ಸಣ್ಣ ನೀರಾವರಿ
* ಪ್ರಿಯಾಂಕ್ ಖರ್ಗೆ (ಚಿತ್ತಾಪುರ)- ಆಹಾರ ಮತ್ತು ನಾಗರಿಕ ಸರಬರಾಜು
* ಸಂತೋಷ್ ಲಾಡ್ (ಕಲಘಟಗಿ)- ಕಾರ್ಮಿಕ ಖಾತೆ
* ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ (ಗೋಕಾಕ)- ಅಬಕಾರಿ
* ಎಂಆರ್ ಸೀತಾರಾಮ್ (ಬೆಂಗಳೂರು ಸಿಟಿ, ಶಾಸಕ)- ನಗರಾಭಿವೃದ್ಧಿ
(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister Siddaramaiah, on Sunday(Jun 19) inducted 13 new ministers into his cabinet. According to sources C M Siddaramaiah has reportedly finalised portfolios before inducting them to his cabinet and state ministry
Please Wait while comments are loading...