Get Updates
Get notified of breaking news, exclusive insights, and must-see stories!

ಬೆಂಗಳೂರು, ಜಿಲ್ಲಾ ಕೇಂದ್ರಗಳ ಇಂದಿರಾ ಕ್ಯಾಂಟೀನ್ ಆಗುತ್ತಾ ಶಿಫ್ಟ್!; ಏನಿದರ ಸೀಕ್ರೆಟ್?

ರಾಜ್ಯ ರಾಜಧಾನಿ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ತೆರೆಯಲಾಗಿರುವ ಇಂದಿರಾ ಕ್ಯಾಂಟೀನ್‌ಗಳು ಸೂಕ್ತ ಸ್ಥಳಗಳಲ್ಲಿ ಇವೆಯೇ? ಅಥವಾ ಅವುಗಳನ್ನು ಸ್ಥಳಾಂತರಿಸುವ ಅಗತ್ಯವಿದೆಯೇ ಎನ್ನುವುದರ ಕುರಿತು ಸಮೀಕ್ಷೆಗೆ ಆದೇಶಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

"ಇಂದಿರಾ ಕ್ಯಾಂಟೀನ್‌ಗಳನ್ನು ಸೂಕ್ತವಾದ ಸ್ಥಳಗಳಲ್ಲಿ ತೆರೆಯಲಾಗಿದೆಯೇ ಎಂಬುದರ ಬಗ್ಗೆ ಅಧ್ಯಯನ ಮಾಡಲು ಕರೆ ನೀಡಿದ್ದೇವೆ. ಮುಂದೆ ಕೆಲವು ಕ್ಯಾಂಟೀನ್‌ಗಳನ್ನು ಬಸ್ ನಿಲ್ದಾಣಗಳು ಮತ್ತು ಅತಿಹೆಚ್ಚು ಜನ ಸಂಚಾರ ಹಾಗೂ ಜನದಟ್ಟಣೆ ಇರುವ ಪ್ರದೇಶಗಳಿಗೆ ಸ್ಥಳಾಂತರಿಸಲಾಗುವುದು" ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದರು. ರಾಜ್ಯ ಸಂಪುಟ ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು ಹಾಗೂ ಇಂದಿರಾ ಕ್ಯಾಂಟೀನ್ ಸಮೀಕ್ಷೆಯ ತೀರ್ಮಾನದ ಕುರಿತು ಮುಂದೆ ಓದಿ ತಿಳಿಯಿರಿ.

ರಾಜ್ಯದಲ್ಲಿ ಒಟ್ಟು 344 ಇಂದಿರಾ ಕ್ಯಾಂಟೀನ್

ರಾಜ್ಯದಲ್ಲಿ ಒಟ್ಟು 344 ಇಂದಿರಾ ಕ್ಯಾಂಟೀನ್

ಸಿಲಿಕಾನ್ ಸಿಟಿ ಕಾರ್ಮಿಕ ಹಾಗೂ ಬಡ ವರ್ಗದ ಜನರ ಅನುಕೂಲಕ್ಕಾಗಿ ಪ್ರಾಥಮಿಕವಾಗಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಲಾಗಿತ್ತು. ಬೆಂಗಳೂರು ನಗರವೊಂದರಲ್ಲೇ ಒಟ್ಟು 174 ಇಂದಿರಾ ಕ್ಯಾಂಟೀನ್ ಅನ್ನು ತೆರೆಯಲಾಗಿತ್ತು. ಬೆಳಗಿನ ಉಪಹಾರಕ್ಕೆ 5 ರೂಪಾಯಿ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ 10 ರೂಪಾಯಿ ದರ ನಿಗದಿಗೊಳಿಸಲಾಗಿತ್ತು. ಬೆಂಗಳೂರಿನ ನಂತರದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಇಂದಿರಾ ಕ್ಯಾಂಟೀನ್ ಅನ್ನು ಸ್ಥಾಪಿಸಲಾಗಿದ್ದು, ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳು ಸೇರಿದಂತೆ ಒಟ್ಟು 170 ಕಡೆಗಳಲ್ಲಿ ಕ್ಯಾಂಟೀನ್ ಆರಂಭಿಸಲಾಗಿತ್ತು.

ಇಂದಿರಾ ಕ್ಯಾಂಟೀನ್ ವೆಚ್ಚವೂ ಸರ್ಕಾರದ ತಲೆಗೆ

ಇಂದಿರಾ ಕ್ಯಾಂಟೀನ್ ವೆಚ್ಚವೂ ಸರ್ಕಾರದ ತಲೆಗೆ

"ರಾಜ್ಯದಲ್ಲಿ ಇರುವ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಶೇ.30 ರಿಂದ ಶೇ.40ರಷ್ಟು ವೆಚ್ಚವನ್ನು ಸ್ಥಳೀಯ ಸಂಸ್ಥೆಗಳು ನೋಡಿಕೊಳ್ಳಬೇಕು. ಆದರೆ ಇದೀಗ ಸ್ಥಳೀಯ ಸಂಸ್ಥೆಗಳು ಅದನ್ನೂ ಸರ್ಕಾರವೇ ನೀಡಬೇಕು ಎಂದು ಹೇಳುತ್ತಿದೆ. ಈ ಹಿನ್ನೆಲೆ ಇಂದಿರಾ ಕ್ಯಾಂಟೀನ್‌ಗಳು ಸರಿಯಾಗಿ ಬಳಕೆ ಆಗುತ್ತಿವೆಯೇ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕಾಗಿದೆ," ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಕರ್ನಾಟಕ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ

ಕರ್ನಾಟಕ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ

ಅನೇಕ ಪ್ರಕರಣಗಳು ಬುಕ್ ಆಗುವುದನ್ನು ತಪ್ಪಿಸಲು ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಕರ್ನಾಟಕ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. "ಒಂದು ಪ್ರಕರಣದಲ್ಲಿ ಅನೇಕ ಎಫ್‌ಐಆರ್‌ಗಳು ದಾಖಲಾಗಿರುವುದನ್ನು ನಾವು ನೋಡಿದ್ದೇವೆ. ಅವರೆಲ್ಲರನ್ನೂ ಬಂಧಿಸಿ ಒಂದೇ ಪ್ರಕರಣ ದಾಖಲಿಸಲಾಗುವುದು. ಮುಂದೆ ಒಂದೇ ಒಂದು ಕೇಸ್ ನಂಬರ್ ಇರಲಿದೆ ಎಂದು ಮಾಧುಸ್ವಾಮಿ ವಿವರಿಸಿದರು.

ಕರ್ನಾಟಕದಲ್ಲಿ ವಿವಿಧ ಕಾಮಗಾರಿಗಳಿಗೆ ಅನುದಾನ ಘೋಷಣೆ

ಕರ್ನಾಟಕದಲ್ಲಿ ವಿವಿಧ ಕಾಮಗಾರಿಗಳಿಗೆ ಅನುದಾನ ಘೋಷಣೆ

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪುತ್ತೂರಿನ ಪಶು ವೈದ್ಯಕೀಯ ಕಾಲೇಜಿಗೆ 136 ಕೋಟಿ ರೂಪಾಯಿ ಅನುದಾನಕ್ಕೆ ಅನುಮೋದನೆ ನೀಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರ ಶಿಗ್ಗಾಂವಿಯ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ 25 ಕೋಟಿ ರೂಪಾಯಿ, ದಾವಣಗೆರೆ ಮತ್ತು ಹರಿಹರ ನಡುವೆ ರೈಲ್ವೆ ಸೇತುವೆ (ಬ್ರಿಡ್ಜ್) ನಿರ್ಮಾಣಕ್ಕೆ 36 ಕೋಟಿ ರೂಪಾಯಿ ಮತ್ತು ಹಾವೇರಿಗಳಲ್ಲಿ ಕೆರೆ ತುಂಬಿಸುವ ಕಾರ್ಯಕ್ಕೆ 105 ಕೋಟಿ ರೂಪಾಯಿ ಅನುಮೋದನೆ ನೀಡಲಾಗಿದೆ.

ಇದರ ಮಧ್ಯೆ ವಿಶೇಷ ಪ್ರಕರಣ ಎಂಬಂತೆ ದಿವಂಗತ ಐಪಿಎಸ್ ಅಧಿಕಾರಿ ಕೆ.ವಿ.ಜಗದೀಶ್ ಅವರ ಪತ್ನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಐಪಿಎಸ್ ಅಧಿಕಾರಿ ಕೆ.ವಿ.ಜಗದೀಶ್ ಮೃತಪಟ್ಟಿದ್ದರು.

ರಾಜ್ಯದಿಂದ ಕಬ್ಬಿಣದ ಅದಿರು ಮಾರಾಟಕ್ಕೆ ವಿರೋಧ

ರಾಜ್ಯದಿಂದ ಕಬ್ಬಿಣದ ಅದಿರು ಮಾರಾಟಕ್ಕೆ ವಿರೋಧ

ಕಬ್ಬಿಣದ ಅದಿರು ರಫ್ತು ಮಾಡುವುದಕ್ಕೆ ಸರ್ಕಾರ ವಿರೋಧವಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸುವುದಾಗಿ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ. "ಕಳೆದ 2013ರಲ್ಲಿ ಸುಪ್ರೀಂಕೋರ್ಟ್ ರಫ್ತು ಮಾಡಬೇಡಿ ಎಂದು ನಮಗೆ ಹೇಳಿತ್ತು. 2021ರಲ್ಲಿ ಇದು ಮತ್ತೊಮ್ಮೆ ಚರ್ಚೆಗೆ ಬಂದಾಗ ನಾವು ಹಗರಣವನ್ನು ಪರಿಗಣಿಸಿ ಇದರಲ್ಲಿ ಪಾಲ್ಗೊಳ್ಳುವುದು ಗೌರವ ತರುವಂಥದ್ದಲ್ಲ ಎಂದು ಹೇಳಿದ್ದೇವೆ. ಆದ್ದರಿಂದ ನಾವು ಅದಿರನ್ನು ರಫ್ತು ಮಾಡಬಾರದು ಎಂಬ ನಿಲುವಿಗೆ ಬದ್ಧರಾಗಿರಲು ನಿರ್ಧರಿಸಿದ್ದೇವೆ," ಎಂದು ಅವರು ಹೇಳಿದರು.

"ತೀವ್ರ ನಷ್ಟ" ಮತ್ತು ಕಬ್ಬಿಣದ ಅದಿರಿನ ವಾಣಿಜ್ಯ ಮೌಲ್ಯದಲ್ಲಿನ ಕುಸಿತದ ದೃಷ್ಟಿಯಿಂದ ರಫ್ತಿಗೆ ಅವಕಾಶ ನೀಡಬೇಕು ಎಂದು ಹೇಳಲು ಕೇಂದ್ರವು ಈಗ ತನ್ನ ನಿಲುವನ್ನು ಬದಲಾಯಿಸಿದೆ. "ಪ್ರತಿ ವರ್ಷ ನಾವು 80 ಲಕ್ಷ ಟನ್ ಅದಿರನ್ನು ಮಾರಾಟ ಮಾಡದೇ ಉಳಿಸುತ್ತಿದ್ದೇವೆ. ನಾವು 460 ರಿಂದ 470 ಲಕ್ಷ ಟನ್‌ಗಳನ್ನು ಹೊರ ತೆಗೆಯುತ್ತೇವೆ. 350 ಲಕ್ಷ ಟನ್‌ಗಳನ್ನು ಉಕ್ಕು ಉದ್ಯಮಕ್ಕೆ ಟೆಂಡರ್ ಮಾಡಲಾಗಿದೆ" ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+