ಸಂಪುಟ ವಿಸ್ತರಣೆ: ಯಾವ ಜಿಲ್ಲೆಗಳಿಗೆ ಸಚಿವ ಸ್ಥಾನ, ಯಾವುದಕ್ಕೆ ಇಲ್ಲ?
ಬೆಂಗಳೂರು, ಆಗಸ್ಟ್ 20: ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಇಂದು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಸಚಿವ ಸಂಪುಟ ವಿಸ್ತರಣೆ ಸಮಯ ಜಾತಿವಾರು, ಸಮುದಾಯವಾರು, ಪ್ರದೇಶವಾರು, ಅನುಭವ ಆಧರಿಸಿ ಪ್ರಾಶಸ್ತ್ಯ ನೀಡುವುದು ವಾಡಿಕೆ. ಬಿಜೆಪಿ ಸಹ ಇದನ್ನೇ ಮಾಡಿದೆ. ಆದರೆ ಜಿಲ್ಲಾವಾರು ಪ್ರಾಶಸ್ತ್ಯ ಸೂಕ್ತವಾಗಿಲ್ಲ ಎಂಬ ಕೂಗು ಎದ್ದಿದೆ.
ಬಿಜೆಪಿಯ ಭದ್ರ ಕೋಟೆಗಳು ಎನಿಸಿಕೊಂಡಿದ್ದ ಜಿಲ್ಲೆಗಳಿಗೆ, ಪ್ರಾಂತ್ಯಗಳಿಗೆ ಸಚಿವ ಸ್ಥಾನ ನೀಡುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂಬ ಕೂಗು ಸಣ್ಣದಾಗಿ ಎದ್ದಿದೆ. ಯಾವ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿದೆ ಯಾವುದಕ್ಕೆ ಇಲ್ಲ ಎಂಬ ಪಟ್ಟಿ ಇಲ್ಲಿದೆ.

ಜಗದೀಶ್ ಶೆಟ್ಟರ್: ಹುಬ್ಬಳ್ಳಿ-ಧಾರವಾಡ
ಗೋವಿಂದ ಕಾರಜೋಳ: ಮುಧೋಳ ಕ್ಷೇತ್ರ, ಬಾಗಲಕೋಟೆ ಜಿಲ್ಲೆ
ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ: ಶಿವಮೊಗ್ಗ ಜಿಲ್ಲೆ
ಸಿಸಿ ಪಾಟೀಲ್: ನರಗುಂದ ಕ್ಷೇತ್ರ, ಗದಗ ಜಿಲ್ಲೆ
ಬಸವರಾಜ ಬೊಮ್ಮಾಯಿ: ಶಿಗ್ಗಾಂವ್ ಕ್ಷೇತ್ರ, ಹಾವೇರಿ ಜಿಲ್ಲೆ
ಮಾಧುಸ್ವಾಮಿ: ಚಿಕ್ಕನಾಯಕನಹಳ್ಳಿ ಕ್ಷೇತ್ರ, ತುಮಕೂರು
ಶಶಿಕಲಾ ಜೊಲ್ಲೆ ಮತ್ತು ಲಕ್ಷ್ಮಣ ಸವದಿ: ಬೆಳಗಾವಿ ಜಿಲ್ಲೆ
ಕೋಟ ಶ್ರೀನಿವಾಸ ಪೂಜಾರಿ (ಪರಿಷತ್ ಸದಸ್ಯರು): ಉಡುಪಿ ಜಿಲ್ಲೆ
ಬಿ.ಚೌವ್ಹಾಣ್: ಔರಾದ್ ಕ್ಷೇತ್ರ, ಬೀದರ್ ಜಿಲ್ಲೆ
ಸಿಟಿ ರವಿ: ಚಿಕ್ಕಮಗಳೂರು ಜಿಲ್ಲೆ
ಶ್ರೀರಾಮುಲು: ಮೊಳಕಾಲ್ಮೂರು ಕ್ಷೇತ್ರ, ಚಿತ್ರದುರ್ಗ ಜಿಲ್ಲೆ
ಎಚ್.ನಾಗೇಶ್: ಮುಳಬಾಗಿಲು ಕ್ಷೇತ್ರ, ಕೋಲಾರ ಜಿಲ್ಲೆ
ಬೆಂಗಳೂರು: ಆರ್.ಅಶೋಕ್, ವಿ.ಸೋಮಣ್ಣ, ಅಶ್ವಥ್‌ನಾರಾಯಣ, ಸುರೇಶ್ ಕುಮಾರ್.
ಸಚಿವ ಸ್ಥಾನ ಸಿಗದ ಪ್ರಮುಖ ಜಿಲ್ಲೆಗಳು
ಏಳು ಜನ ಬಿಜೆಪಿ ಶಾಸಕರಿರುವ ದಕ್ಷಿಣ ಕನ್ನಡ, ಆರರಲ್ಲಿ ನಾಲ್ಕು ಜನ ಬಿಜೆಪಿ ಶಾಸಕರಿರುವ ಉತ್ತರ ಕನ್ನಡ ಜಿಲ್ಲೆ, ಎರಡರು ಕ್ಷೇತ್ರದಲ್ಲೂ ಬಿಜೆಪಿ ಶಾಸಕರಿರುವ ಕೊಡಗು, ಮೂರು ಜನ ಬಿಜೆಪಿ ಶಾಸಕರಿರುವ ಮೈಸೂರು, ನಾಲ್ಕು ಬಿಜೆಪಿ ಶಾಸಕರಿರುವ ಕಲಬುರಗಿ, ಎಂಟರಲ್ಲಿ ಆರು ಬಿಜೆಪಿ ಶಾಸಕರನ್ನು ಕೊಟ್ಟಿರುವ ದಾವಣಗೆರೆ ಜಿಲ್ಲೆ, ಉಡುಪಿ, ಮೂವರು ಬಿಜೆಪಿ ಶಾಸಕರಿರುವ ಬಳ್ಳಾರಿ.












Click it and Unblock the Notifications