ರಾಮಲಿಂಗಾ ರೆಡ್ಡಿಗೆ ಗೃಹ ಖಾತೆ, ರೇವಣ್ಣ ಸಾರಿಗೆ, ಗೀತಾಗೆ ಸಕ್ಕರೆ
ಬೆಂಗಳೂರು, ಸೆಪ್ಟೆಂಬರ್ 1: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ ಮಾಡಿದ್ದಾರೆ. ಗೀತಾ ಮಹದೇವಪ್ರಸಾದ್, ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರಗೆ ಮಂತ್ರಿಗಿರಿ ಸಿಕ್ಕಿದೆ. ಇನ್ನು ರಾಮಲಿಂಗಾ ರೆಡ್ಡಿ ಅವರಿಗೆ ಗೃಹ ಖಾತೆ, ಎಚ್.ಎಂ.ರೇವಣ್ಣಗೆ ಸಾರಿಗೆ ಖಾತೆ ಸಿಕ್ಕಿದೆ.
ತಿಮ್ಮಾಪುರ ಅವರಿಗೆ ಅಬಕಾರಿ, ಗೀತಾ ಮಹದೇವ ಪ್ರಸಾದ್ ಗೆ ಸಕ್ಕರೆ-ಸಣ್ಣ ಕೈಗಾರಿಕೆ, ರಮೇಶ್ ಜಾರಕಿಹೊಳಿ ಸಹಕಾರ ಹಾಗೂ ಸಂತೋಷ್ ಲಾಡ್ ಗೆ ಕಾರ್ಮಿಕ ಖಾತೆ ಜತೆಗೆ ಕೌಶಲ ಅಭಿವೃದ್ಧಿ ಸಹ ಸಿಕ್ಕಿದೆ. ಈ ಬಾರಿಯೂ ಜಾತಿ ಲೆಕ್ಕಾಚಾರದಲ್ಲೇ ವಿಸ್ತರಣೆ ಆಗಿರುವುದು ಗೊತ್ತಾಗುತ್ತದೆ.

ಆದರೆ, ತಿಪಟೂರಿನ ಶಾಸಕ ಷಡಕ್ಷರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದ್ದದ್ದು ಹುಸಿಯಾಗಿದೆ. ಇದರಿಂದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸ್ವತಃ ಅಸಮಾಧಾನಗೊಂಡಿದ್ದಾರೆ ಎಂಬ ಮಾತು ಚಾಲ್ತಿಯಲ್ಲಿದೆ. ಇನ್ನು ಪಕ್ಷದ ನಾಯಕಿ ಮೋಟಮ್ಮ ಸಹ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಂಪುಟ ವಿಸ್ತರಣೆ ಎಂಬುದು ಜೇನುಗೂಡಿಗೆ ಕೈ ಹಾಕಿದಂತಾಗಿದೆ.












Click it and Unblock the Notifications