ಜೆಡಿಎಸ್-ಕಾಂಗ್ರೆಸ್ ಬಳಿ ಬಾಕಿ ಉಳಿದಿರುವ ಸಚಿವ ಸ್ಥಾನಗಳೆಷ್ಟು?
ಬೆಂಗಳೂರು, ಜೂನ್ 14: ಮೈತ್ರಿ ಸರ್ಕಾರವು ಇಂದು ಸಂಪುಟ ವಿಸ್ತರಣೆ ಮಾಡಿ ಇಬ್ಬರು ಶಾಸಕರನ್ನು ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದಾರೆ.
ಪಕ್ಷೇತರರಾಗಿ ಗುರುತಿಸಿಕೊಂಡಿದ್ದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಅವರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಸ್ತುತ 31 ಮಂದಿ ಸಚಿವರು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಸ್ತುತ 31 ಸಚಿವರಿದ್ದಾರೆ. ಜೆಡಿಎಸ್ ಬಳಿ ಹಂಚಿಕೆ ಮಾಡದ ಒಂದು ಸಚಿವ ಸ್ಥಾನ ಇದೆ. ಈ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಹಾಗೆ ಆಗಿಲ್ಲ.
ಈಗ ಪ್ರಮಾಣ ವಚನ ಸ್ವೀಕರಿಸಿರುವ ಇಬ್ಬರಲ್ಲಿ ನಾಗೇಶ್ ಅವರು ಜೆಡಿಎಸ್ ಖಾತಾದಿಂದ ಸಚಿವರಾಗಿದ್ದರೆ, ಆರ್.ಶಂಕರ್ ಅವರು ಕಾಂಗ್ರೆಸ್ ಪಕ್ಷದಿಂದ ಸಚಿವರಾಗಿದ್ದಾರೆ.

ನಾಗೇಶ್‌ಗೆ ಶಿಕ್ಷಣ ಖಾತೆ?
ಬಿಎಸ್‌ಪಿಯ ಮಹೇಶ್ ಅವರ ರಾಜೀನಾಮೆ ಇಂದ ತೆರವಾಗಿದ್ದ ಶಿಕ್ಷಣ ಸಚಿವ ಸ್ಥಾನಕ್ಕೆ ನಾಗೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಂಚೆ ಸರ್ಕಾರಿ ನೌಕರರಾಗಿದ್ದ ನಾಗೇಶ್ ಅವರಿಗೆ ಶಿಕ್ಷಣ ಖಾತೆಯೇ ಪಕ್ಕಾ ಆಗುವ ಸಾಧ್ಯತೆ ಇದೆ.

ಆರ್.ಶಂಕರ್ ಅನ್ನು ಕಟ್ಟಿ ಹಾಕಿದ ಕಾಂಗ್ರೆಸ್
ಇನ್ನು ಆರ್.ಶಂಕರ್ ಅವರು ಕೆಪಿಜೆಪಿಯನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದ್ದು, ಅವರಿಗೆ ಶಿವಳ್ಳಿ ಅವರು ನಿರ್ವಹಿಸುತ್ತಿದ್ದ ಪೌರಾಡಳಿತ ಖಾತೆ ನೀಡಲಾಗಿದೆ. ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದ್ದ ಪಕ್ಷೇತರರನ್ನು ಆ ಮೂಲಕ ಕಟ್ಟಿ ಹಾಕಿದೆ ಮೈತ್ರಿ ಸರ್ಕಾರ.

ರಾಮಲಿಂಗಾ ರೆಡ್ಡಿಗೆ ಇಲ್ಲ ಅವಕಾಶ
ಕಾಂಗ್ರೆಸ್ ಹಿರಿಯ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ಧಕ್ಕುತ್ತದೆ ಎನ್ನಲಾಗಿತ್ತು. ಆದರೆ ಅದು ಹುಸಿಯಾಗಿದೆ. ಅವರಿಗೆ ಬಹುಶಃ ಮುಂದಿನ ಬಾರಿ ಅವಕಾಶ ದೊರೆಯುವ ಸಾಧ್ಯತೆ ಇದೆ. ಆದರೆ ಅಲ್ಲಿಯವರೆಗೂ ರಾಮಲಿಂಗಾರೆಡ್ಡಿ ಸುಮ್ಮನೆ ಕೂರುತ್ತಾರಾ ಎಂಬುದು ಅನುಮಾನ.

ಹಲವರು ಅತೃಪ್ತ ಶಾಸಕರಿದ್ದಾರೆ
ಇನ್ನು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿಸಿ ಪಾಟೀಲ್, ಸುಧಾಕರ್, ಕುಶ್ಟಗಿ ಶಾಸಕ ಅಮರೇಗೌಡ ಲಿಂಗನಗೌಡ ಪಾಟೀಲ್ ಇನ್ನೂ ಹಲವರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು ಇವರು, ಇವರುಗಳ ಮುಂದಿನ ನಡೆ ಕುತೂಹಲ ಕೆರಳಿಸಿದೆ.












Click it and Unblock the Notifications