Get Updates
Get notified of breaking news, exclusive insights, and must-see stories!

KSRTC ಬಸ್‌ಗಳಲ್ಲಿ 'ಪ್ಯಾನಿಕ್ ಬಟನ್-ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ' ಜಾರಿಗೆ ಒಪ್ಪಿಗೆ, ಏನಿದು? ಪ್ರಯೋಜನವೇನು? ತಿಳಿಯಿರಿ

ಬೆಂಗಳೂರು, ಆಗಸ್ಟ್ 11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಯಾಣಿಕರ ಸುರಕ್ಷತೆ ಹಾಗೂ ದಕ್ಷ ಸೇವೆ ಒದಗಿಸುತ್ತಿರುವ ಖಚಿತತೆಗಾಗಿ ಎಲ್ಲ ಬಸ್‌ಗಳಲ್ಲಿ ಬಸ್‌ಗಳಲ್ಲಿ 'ಪ್ಯಾನಿಕ್ ಬಟನ್ ಮತ್ತು ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ'ಯನ್ನು ಅಳವಡಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಇದರಿಂದ ಬಸ್‌ಗಳಲ್ಲಿ ಅಹಿತಕರ ಘಟನೆಗಳನ್ನು ಸಹ ತಡೆಯಬಹುದಾಗಿದೆ.

KSRTC ಬಸ್‌ನಲ್ಲಿ ಪ್ರಯಾಣಿಕರು ಅಹಿತಕರ ಸಂದರ್ಭದಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಆ ಮಾಹಿತಿ ಕೂಡಲೇ ನಿಗಮದ ನಿಯಂತ್ರಣ ಕೊಠಡಿಗೆ ತಲುಪುತ್ತದೆ. ಆ ಸಿಬ್ಬಂದಿ ಲೊಕೇಷನ್ ಆಧಾರದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸುತ್ತಾರೆ ಎಂದು ಈ ನೂತನ ಯೋಜನೆಯ ಉದ್ದೇಶ, ಕಾರ್ಯವೈಖರಿ ಕುರಿತು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.

Cabinet Approved Implement To Panic Button And Vehicle Tracking System In KSRTC Buses

ಇನ್ನೂ ಈ ವ್ಯವಸ್ಥೆಯಡಿ ಇರುವ GPS ಅಳವಡಿಕೆಯು ಬಸ್‌ನ ಸ್ಥಳ ಮತ್ತು ವೇಗದಂತಹ ಖಚಿತ ಮಾಹಿತಿ ನೀಡುತ್ತದೆ. ಪ್ಯಾನಿಕ್ ಬಟನ್‌ಗಳು ಮತ್ತು ಜಿಪಿಎಸ್ ಅಳವಡಿಕೆಯು ಪ್ರಯಾಣಿಕರು/ಸಾರ್ವಜನಿಕರಿಗೆ ಸಂಭಾವ್ಯ ಅಪಾಯ ಎದುರಾಗುವುದುನ್ನು ತಡೆಯಲು ಈ ಯೋಜನೆ ಸಹಕಾರಿಯಾಗಿದೆ. ಇದನ್ನು ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಯೋಜನೆ ಸಾಧನ ಅಳವಡಿಕೆಗೆ DPR ಸಲ್ಲಿಕೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) 'ನಿರ್ಭಯ' ಯೋಜನೆ ಅಡಿಯಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಕಷ್ಟಕಾಲದಲ್ಲಿ ನೆರವಾಗುವ ಈ ಸುಧಾರಿತ ವ್ಯವಸ್ಥೆಯನ್ನು ಅಳವಡಿಸಲು ಅನುಮೋದನೆಯನ್ನು ಈಗಾಗಲೇ ಪಡೆದುಕೊಂಡಿದೆ. KSRTC ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ (MORTH) ಈ ಸಾಧನಗಳನ್ನು ಬಸ್‌ಗಳಲ್ಲಿ ಅಳವಡಿಸುವ ಅನುಮೋದನೆ ಕೋರಿ ವಿವರವಾದ ಯೋಜನಾ ವರದಿ (DPR) ಕಳುಹಿಸಿತ್ತು.

ಹೆದ್ದಾರಿ ಸಚಿವಾಲಯ ಯೋಜನೆಯನ್ನು ಅನುಮೋದಿಸುವ ಜೊತೆಗೆ ತಾನೇ ಯೋಜನೆಗೆ ಖರ್ಚಾಗುವ ಅಂದಾಜು ಒಟ್ಟು 30 ಕೋಟಿ ರೂಪಾಯಿ ಹಣದಲ್ಲಿ ಶೇಕಡಾ 70 ರಷ್ಟು ವೆಚ್ಚ ಭರಿಸುವುದಾಗಿ ತಿಳಿಸಿತು. ಇನ್ನುಳಿದ ಬಾಕಿ ವೆಚ್ಚವನ್ನು ರಾಜ್ಯ ಸರ್ಕಾರ ಒದಗಿಸಲಿದೆ. ಈ ಯೋಜನೆಯು ಸದ್ಯದ ಮಾಹಿತಿಯಂತೆ bmtc ಮತ್ತು ksrtc ಗಳಲ್ಲಿ ಅನುಷ್ಠಾನಗೊಳ್ಳು ಸಜ್ಜಾಗಿದೆ. ಇನ್ಣೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಮತ್ತು ವಾಯವ್ಯ ಕರ್ನಾಟಕ ಸಾರಿಗೆ ನಿಗಮವು (NWKRTC) ಯೋಜನೆ ಜಾರಿಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬೇಕಿದೆ.

Cabinet Approved Implement To Panic Button And Vehicle Tracking System In KSRTC Buses

ಇನ್ನೂ ಜಿಪಿಎಸ್‌ನಿಂದ ಪ್ರಯಾಣಿಕರು ಬಸ್ ಟ್ರ್ಯಾಕ್ ಮಾಡಬಹುದಾಗಿದೆ. ಇದರಿಂದ ಕಾಯುವ ಸಮಯ ಉಳಿತಾಯವಾಗಲಿದೆ. ಬಸ್‌ಗಳು ಯಾವಾಗ ಬರಲಿವೆಯೋ ಎಂಬ ಚಿಂತೆ ಇರದು. ಅದಕ್ಕಾಗಿ ಪ್ರಯಾಣಿಕರು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ.

ಈ ಯೋಜನೆ ಅಷ್ಟೇ ಅಲ್ಲದೇ ರಾಜ್ಯ ಸಂಪುಟ ಸಭೆ ಸೈಬರ್ ಅಪರಾಧಗಳನ್ನು ನಿಗ್ರಹಿಸುವ ಮತ್ತು ಡೇಟಾ ಗೌಪ್ಯತೆ ಉತ್ತೇಜನದ 'ಸೈಬರ್ ಭದ್ರತಾ ನೀತಿ 2023' ಗೂ ಅನುಮೋದನೆ ನೀಡಿತು. ಈ ನೀತಿಯಿಂದ ಸೈಬರ್ ಭದ್ರತೆ ಮತ್ತು ಡೇಟಾ ಗೌಪ್ಯತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಸರ್ಕಾರದ್ದಾಗಿದೆ.

ಇನ್ನೂ ಪಂಚಾಯತಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳು ನಿಯತಕಾಲಿಕವಾಗಿ ಜಾಗೃತಿ ಕಾರ್ಯಕ್ರಮ ಮಾಡಬೇಕು. ಸರ್ಕಾರದ ನೂತನ ಸಾಫ್ಟ್‌ವೇರ್, ಆನ್‌ಲೈನ್ ಬ್ಯಾಂಕಿಂಗ್ ಮತ್ತು ತಾಂತ್ರಿಕ ಶಿಕ್ಷಣ ಹಾಗೂ ತರಬೇತಿ ಕಾರ್ಯಕ್ರಮಗಳು ಇವುಗಳ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಸಚಿವ ಎಚ್‌ಕೆ ಪಾಟೀಲರು ವಿವರಿಸಿದರು.

ಸಚಿವ ಸಂಪುಟವು ರಾಜಧಾನಿ ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ 2017 ರಲ್ಲಿ ಸ್ಥಾಪಿತವಾ ಏರೋಸ್ಪೇಸ್ - ಡಿಫೆನ್ಸ್‌ನಲ್ಲಿನ ಶ್ರೇಷ್ಠತೆಯ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭಿಸುವ ಪ್ರಸ್ತಾವನೆಗೂ ಗ್ರೀನ್ ಸಿಗ್ನಲ್ ನೀಡಿದೆ.

ಕೇಂದ್ರವು ಸಂಶೋಧನೆ ಮತ್ತು ಅಧ್ಯಯನಕ್ಕೆ ಸರ್ಕಾರ ಆದ್ಯತೆ ನೀಡುವ ನಿಟ್ಟಿನಲ್ಲಿ 391 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಡಸಾಲ್ಟ್ ಸಿಸ್ಟಮ್ಸ್‌ನೊಂದಿಗೆ ಪಿಪಿಪಿಯಲ್ಲಿ ಯೋಜನೆ ಅನುಷ್ಠಾನಕ್ಕೆ ತರಲು ಚಿಂತನೆಯಲ್ಲಿದೆ. ಇದು ಸಾಫ್ಟ್‌ವೇರ್ ಆಧಾರಿತ ಕಲಿಕಾ ಪ್ರಯೋಗಾಲಯದಲ್ಲಿ ರೋಸ್ಪೇಸ್ ಮತ್ತು ರಕ್ಷಣೆಯಲ್ಲಿ 3ಡಿ ಡಿಜಿಟಲ್ ಅನುಭವ ನೀಡಲಿದೆ ಎಂದು ಅವರು ಮಾಹಿತಿ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+