ಸಮೀಕ್ಷೆ: ಕರ್ನಾಟಕದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಯಾರು?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 20:ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆ 2018 ಕುರಿತಂತೆ ಸಿ ಫೋರ್ ಸಂಸ್ಥೆಯು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ, ಭಾನುವಾರ(ಆಗಸ್ಟ್ 20)ದಂದು ಪ್ರಕಟಿಸಿದೆ.

ಸಿ ಫೋರ್ ಸಮೀಕ್ಷೆ : ಸಿದ್ದರಾಮಯ್ಯ -ಕಾಂಗ್ರೆಸ್ ಸರ್ಕಾರಕ್ಕೆ ಮತ್ತೆ ಬಹಮತ

ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಅಧಿಕಾರ ಸ್ಥಾಪಿಸಲಿದೆ. ಭರ್ಜರಿ ಬಹುಮತ ಪಡೆಯಲಿದ್ದು, ಸ್ವಂತ ಬಲದಿಂದ ಪೀಠಕ್ಕೇರಲಿದೆ, ಶೇಕಡಾವಾರು ಮತ ಗಳಿಕೆ, ಯಾವ ಪಕ್ಷಕ್ಕೆ ಎಷ್ಟು ಮತ? ಯಾವ ವಯಸ್ಸಿನವರು ಯಾವ ಪಕ್ಷದ ಪರ ಇದ್ದಾರೆ ಎಂಬ ಮಾಹಿತಿ ಈಗ ಲಭ್ಯವಿದೆ.

ಸಮೀಕ್ಷೆ: ಚುನಾವಣೆ ನಡೆದರೆ ಎನ್ ಡಿಎಗೆ 349 ಸ್ಥಾನ!

ಇದರ ಜತೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಯೋಜನೆಗಳು, ನೂನ್ಯತೆಗಳ ಬಗ್ಗೆ ಕೂಡಾ ಸಮೀಕ್ಷೆ ನಡೆಸಲಾಗಿದೆ.

2018ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ 150 ಸ್ಥಾನ!

ಅಲ್ಲದೆ, ಇತ್ತೀಚಿನ ಸರ್ಕಾರಗಳ ಪೈಕಿ ಕರ್ನಾಟಕದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಯಾರು? ಮುಂದೆ ಯಾರನ್ನು ಸಿಎಂ ಆಗಿ ಕಾಣಲು ಬಯಸಿದ್ದೀರಿ? ಕಾಂಗ್ರೆಸ್ ಸರ್ಕಾರ ತೃಪ್ತಿ ತಂದಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಾಗಿದೆ. ಇನ್ನಷ್ಟು ವಿವರ ಮುಂದಿದೆ...

ಸಿ ಫೋರ್ ನಡೆಸಿದ ಸಮೀಕ್ಷೆ

ಸಿ ಫೋರ್ ನಡೆಸಿದ ಸಮೀಕ್ಷೆ

ಎಲ್ಲ ಜಿಲ್ಲೆಗಳಿಂದ ಆಯ್ದ 165 ವಿಧಾನಸಭಾ ಕ್ಷೇತ್ರಗಳ 24,679 ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ. ರಾಜ್ಯಾದ್ಯಂತ 340 ನಗರ ಹಾಗೂ 550 ಗ್ರಾಮೀಣ ಪ್ರದೇಶಗಳನ್ನು ಹಾಗೂ ವಿವಿಧ ಧರ್ಮ, ಜಾತಿಯ ಜನರನ್ನು ಒಳಗೊಂಡು ಈ ಸಮೀಕ್ಷೆ ನಡೆಸಲಾಗಿದೆ ಎಂದು ಸಿ ಫೋರ್ ತಿಳಿಸಿದೆ. 2008 ಹಾಗೂ 2013ರ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಸಿ ಫೋರ್ ನಡೆಸಿದ ಸಮೀಕ್ಷೆ 99 ಶೇ. ನಿಜವಾಗಿತ್ತು.

ಯಾರನ್ನು ಸಿಎಂ ಆಗಬೇಕು?

ಯಾರನ್ನು ಸಿಎಂ ಆಗಬೇಕು?

ಶೇ 46ರಷ್ಟು ಮಂದಿ ಹಾಲಿಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದಿದ್ದಾರೆ.
ಶೇ 27 ಮತದಾರರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ನಿರೀಕ್ಷೆಯಿದೆ.
ಮಾಜಿ ಮಾಖ್ಯಮಂತ್ರಿ ಕುಮಾರಸ್ವಾಮಿ ಅವರ ಪರ ಶೇ 17 ರಷ್ಟು ಮತದಾರರು ಮಾತ್ರ ಮತ ಹಾಕಿದ್ದಾರೆ. ಶೇ 4ರಷ್ಟು ಮಂದಿ ಇವರಲ್ಲದೆ ಬೇರೆಯವರು ಸಿಎಂ ಆಗಲಿ ಎಂದಿದ್ದಾರೆ.

ಯಾರು ಜನಪ್ರಿಯ ಮುಖ್ಯಮಂತ್ರಿ

ಯಾರು ಜನಪ್ರಿಯ ಮುಖ್ಯಮಂತ್ರಿ

ಇತ್ತೀಚಿನ ಸರ್ಕಾರಗಳ ಪೈಕಿ ಹೆಚ್ಚು ಜನಪ್ರಿಯ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಸಿದ್ದರಾಮಯ್ಯ: ಶೇ 46ರಷ್ಟು ಮತ ಸಿಕ್ಕಿದೆ.
ಬಿಎಸ್ ಯಡಿಯೂರಪ್ಪ: ಶೇ 27
ಎಚ್. ಡಿ ಕುಮಾರಸ್ವಾಮಿ : ಶೇ 18
ನಮಗೆ ಗೊತ್ತಿಲ್ಲ : ಶೇ 6 ರಷ್ಟು ಮಂದಿ ಉತ್ತರಿಸಿದ್ದಾರೆ.
ಇತರೆ : ಶೇ 3 ರಷ್ಟು ಮತಗಳು ಬಂದಿವೆ

ಯಾವ ಸರ್ಕಾರ ಚೆನ್ನಾಗಿತ್ತು?

ಯಾವ ಸರ್ಕಾರ ಚೆನ್ನಾಗಿತ್ತು?

ಹಾಲಿ ಕಾಂಗ್ರೆಸ್ ಸರ್ಕಾರ: ಶೇ 44ರಷ್ಟು ಮತಗಳು
ಈ ಹಿಂದಿನ ಬಿಜೆಪಿ ಸರ್ಕಾರ : ಶೇ 28
ಎಚ್ಡಿಕೆ ಅವರ ಸರ್ಕಾರ : ಶೇ 18
ಗೊತ್ತಿಲ್ಲ/ ಏನನ್ನೂ ಹೇಳಲಾರೆ : ಶೇ 10

***

ಕಾಂಗ್ರೆಸ್ ಸರ್ಕಾರದ ಆಡಳಿತ ತೃಪ್ತಿದಾಯಕವೇ?
ಸಂಫೂರ್ಣ ತೃಪಿದಾಯಕ : ಶೇ 18
ಪರ್ವಾಗಿಲ್ಲ, ತಕ್ಕಮಟ್ಟಿಗೆ ತೃಪ್ತಿ: ಶೇ 53
ತೃಪ್ತಿದಾಯಕವಾಗಿಲ್ಲ: ಶೇ 29

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
C fore Pre – Poll Survey Report is out. Whom do you prefer as CM of Karnataka ? Whose functioning is better? Who is the most popular CM of Karnataka you have seen in recent past? How satisfied are you with Congress government in state? Get to know the answer here.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ