"ಜನರಿಗೆ ಮೂತ್ರ ಕುಡಿಸಿ" ಎಂದ್ರಾ ಸಂತೋಷ್ ಲಾಡ್? ವಿಜಯೇಂದ್ರ ಗರಂ ಆಗಿದ್ದೇಕೆ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಮಾತಿಗೆ ಸಿಟ್ಟಾಗಿದ್ದಾರೆ. "ಜನರಿಗೆ ಕಾಫಿ, ಟೀ ಯಾಕೆ ಕುಡಿಸ್ತೀರ, ಮೂತ್ರ ಕುಡಿಸಿ" ಎಂದು ಸಂತೋಷ್ ಲಾಡ್ ಹೇಳಿದ್ದಾರೆ ಎಂದು ವಿಜಯೇಂದ್ರ ಖಂಡಿಸಿದ್ದಾರೆ. ಪದ ಸಂಸ್ಕೃತಿಯು ವ್ಯಕ್ತಿತ್ವದ ಮುಖಬಿಂಬ ಪ್ರತಿಬಿಂಬಿಸುತ್ತದೆ. ಪದಸಂಸ್ಕೃತಿಯನ್ನು ಮರೆತ ಸಚಿವ ಸಂತೋಷ್ ಲಾಡ್ ಅವರು ತಮ್ಮ ಕೀಳು ಮಟ್ಟದ ವ್ಯಕ್ತಿತ್ವವನ್ನು ಅನಾವರಣ ಮಾಡಿಕೊಂಡಿದ್ದಾರೆ. 'ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ'ಎಂಬಂತೆ ಸಂತೋಷ್ ಲಾಡ್ ಅವರ ಎಲುಬಿಲ್ಲದ ನಾಲಿಗೆಯಲ್ಲಿ ಹೊಲಸು ಮಾತುಗಳು ಹೊಮ್ಮತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೆಮ್ಮೆಯ ಕರ್ನಾಟಕ ಸರ್ಕಾರದ ಜವಾಬ್ದಾರಿಯುತ ಮಂತ್ರಿ ಸ್ಥಾನದಲ್ಲಿ ಕುಳಿತು ಅದರ ಘನತೆಗೆ ಕೊಚ್ಚೆ ಬಳಿಯುವ ಮಾತುಗಳನ್ನಾಡುತ್ತಿರುವ ಸಂತೋಷ್ ಲಾಡ್ ಅಂತವರು ಕಾಂಗ್ರೆಸ್ ಸರ್ಕಾರದ ಸಚಿವರು ಎಂದು ಹೇಳಿಕೊಳ್ಳಲು ಮಾತ್ರ ಲಾಯಕ್ಕಾಗಿದ್ದಾರೆ ಹೊರತು, ಕರ್ನಾಟಕ ಸರ್ಕಾರದ ಸಚಿವರು ಎಂದು ಹೇಳಿಕೊಳ್ಳುವ ಯಾವ ಯೋಗ್ಯತೆಯೂ ಇಲ್ಲ ಎನ್ನುವುದನ್ನು ಅವರ ಈ ಹಿಂದಿನ ಮಾತುಗಳು ಹಾಗೂ ನಡವಳಿಕೆಗಳು ಸಾಕ್ಷೀಕರಿಸಿದ್ದವು ಎಂದು ಆರೋಪಿಸಿದ್ದಾರೆ.

ದೆಹಲಿ ಬಾಂಬ್ ಸ್ಪೋಟ ಪ್ರಕರಣದ ಹಿನ್ನೆಲೆಯಲ್ಲಿ ಬೇಜವಾಬ್ದಾರಿ ಟೀಕೆ ಮಾಡುವ ಭರದಲ್ಲಿ ಜನರಿಗೆ ಕಾಫಿ, ಟೀ ಏಕೆ ಕುಡಿಸ್ತೀರಾ... ಕುಡಿಸಿ ಎಂಬ ಕೀಳುಮಟ್ಟದ ಪದ ಬಳಸುವ ಮೂಲಕ ಕನ್ನಡದ ಪದ ಸಂಸ್ಕ್ರತಿಯನ್ನು ಮಲಿನಗೊಳಿಸಿದ್ದಾರೆ, ಕನ್ನಡಿಗರ ಸಂಸ್ಕಾರ ನಡವಳಿಕೆಯನ್ನು ಅವಮಾನಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ತಮ್ಮ ಸರ್ಕಾರದ ಘನತೆಯ ಕುರಿತು ಕನಿಷ್ಠ ಬದ್ಧತೆಯಿದ್ದರೆ ಈ ಕೂಡಲೇ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ವಜಾಗೊಳಿಸುವ ಮೂಲಕ ರಾಜ್ಯದ ಗೌರವ ಉಳಿಸಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ದೆಹಲಿ ಸ್ಫೋಟಕ್ಕೂ ಬೆಂಗಳೂರಿನಲ್ಲಿರೋ ಭಯೋತ್ಪಾದಕನಿಗೂ ನಂಟು?
ದೆಹಲಿಯ ಬಾಂಬ್ ಬ್ಲಾಸ್ಟ್‌ನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಭಯೋತ್ಪಾದಕ ನೇರವಾಗಿ ಭಾಗಿಯಾಗಿದ್ದಾನಾ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾನಾ? ಎಂಬುದರ ಕುರಿತು ತನಿಖೆಯಾಗಬೇಕು. ಜೈಲಿನಲ್ಲಿರುವ ಉಗ್ರರಿಗೆ ಮೊಬೈಲ್ ಸೇರಿದಂತೆ ಇತರ ಸಲಕರಣೆಗಳನ್ನು ನೀಡಿದವರು ಯಾರು ಎಂಬುದರ ಕುರಿತು ಸಹ ತನಿಖೆಯಾಗಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ದೇಶದೆಲ್ಲೆಡೆ ಪತ್ತೆಯಾದ ಆರ್‌ಡಿಎಕ್ಸ್ ಯಾವ ಶಾಂತಿ ಧರ್ಮದವರ ಬಳಿಯಿತ್ತು? ರಾಜ್ಯದ ಜೈಲಿನಲ್ಲಿರುವ ಉಗ್ರನಿಗೆ ಶಾಂತಿದೂತ ಎಂಬ ಕಾರಣಕ್ಕೆ ಮೊಬೈಲ್ ನೀಡಲಾಗಿದೆಯಾ? ಭಯೋತ್ಪಾದನೆಯಲ್ಲೂ ರಾಜಕಾರಣದ ಲಾಭ-ನಷ್ಟ ನೋಡುವ ಮಾನಸಿಕತೆ ಕಾಂಗ್ರೆಸ್ ಪಕ್ಷದಲ್ಲಿ ಬದುಕಿರುವ ಕಾರಣ ಇಂತಹ ಘಟನೆಗಳು ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ.ರವಿ ಹೇಳಿದ್ದಾರೆ.
ದೆಹಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ತೀಕ್ಷ್ಣ ಮತ್ತು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತೇವೆ ಎಂದು ಈಗಾಗಲೇ ಪ್ರಧಾನಿ ಮೋದಿ ಅವರು ಸ್ಪಷ್ಟಪಡಿಸಿದ್ದಾರೆ. ದೇಶದ ಮೇಲೆ ನಡೆದ ದಾಳಿಯಲ್ಲೂ ರಾಜಕೀಯ ಲೆಕ್ಕಾಚಾರ ಹಾಕುವ ಸಿಎಂ ಸಿದ್ದರಾಮಯ್ಯ ಅವರ ನಡೆ ಅವಿವೇಕಿತನದ್ದಾಗಿದೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications