ಅಣ್ಣಾಮಲೈ ಬೀಷ್ಮ ಪ್ರತಿಜ್ಞೆ: ವಿಕೃತಿ ಮೆರೆವವರನ್ನು ಖಂಡಿಸಬೇಕಿದೆ: ಬಿವೈ ವಿಜಯೇಂದ್ರ
ಬೆಂಗಳೂರು, ಡಿಸೆಂಬರ್ 28: ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಭೀಷ್ಮ ಪ್ರತಿಜ್ಞೆ ಮಾಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಡಿಎಂಕೆ ವಿರುದ್ಧ ತಮ್ಮ ನಿವಾಸದ ಮುಂದೆ ಚಾಟಿ ಏಟುಗಳನ್ನು ಹೊಡೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಕೃತಿ ಮೆರೆವವರನ್ನು ಖಂಡಿಸಬೇಕಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧದ ಅಣ್ಣಾಮಲೈ ಅವರ ವಿನೂತನ ಪ್ರತಿಭಟನೆ ಕುರಿತು ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ (X) ಮಾಡಿದ್ದಾರೆ. ದೈವಶ್ರದ್ಧೆ, ಆಚಾರ ವಿಚಾರಗಳು ನಂಬಿಕೆಯನ್ನು ಆಧರಿಸಿರುವ ಅಣ್ಣಾಮಲೈ ಅವರು ವಿನೂತನವಾಗಿ ಪ್ರತಿಭಟಿಸಿದ್ದಾರೆ.

ತಮ್ಮ ನಂಬಿಕೆಯನ್ನು ಆಧರಿಸಿ ದೈವ ಶ್ರದ್ಧೆಯನ್ನು ಪ್ರದರ್ಶಿಸುವ ಮೂಲಕ ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಘಟನೆಯ ವಿರುದ್ಧ ಹೋರಾಟಕ್ಕಿಳಿದ್ದಾರೆ. ಈ ವಿಚಾರದಲ್ಲಿ 'ದಾಷ್ಟ್ಯತನದಿಂದ ವರ್ತಿಸುತ್ತಿರುವ' ಡಿಎಂಕೆ ಸರ್ಕಾರವು ಆರೋಪಿತ ದುಷ್ಕರ್ಮಿಗಳ ವಿರುದ್ಧ ಕಾನೂನಿನ ಚಾಟಿ ಬೀಸದ ಧೋರಣೆಯನ್ನು ಪ್ರತಿಭಟನಾ ಸೂಚಕವಾಗಿ ಧೈವಶ್ರದ್ಧೆಯ ಚಾಟಿ ಏಟು ಬಾರಿಸಿಕೊಂಡು ಅವರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ವಿಕೃತಿ ಮೆರವವರನ್ನು ಖಂಡಿಸಬೇಕಿದೆ: ಬಿವೈವಿ
ಅಣ್ಣಾಮೈಲೈ ಅವರ ಪ್ರತಿಭಟನೆಯನ್ನು ಕೆಲವು ವಿಕೃತಿಗಳು ವಿಡಂಬನೆ ಮಾಡುತ್ತಿವೆ, ಸ್ತ್ರೀ ಕುಲದ ರಕ್ಷಣೆಗಾಗಿ, ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡಲು ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಕ್ರಮವನ್ನು ನಾವೆಲ್ಲರೂ ಬೆಂಬಲಿಸಬೇಕಿದೆ. ಈ ಸಂಬಂಧ ವಿಕೃತಿ ಮೆರೆಯುವವರ ಹೇಳಿಕೆ ಹಾಗೂ ವರ್ತನೆಯನ್ನು ಖಂಡಿಸಬೇಕಿದೆ ಎಂದು ಅವರು ಕರೆ ಕೊಟ್ಟಿದ್ದಾರೆ. ಈ ಮೂಲಕ ಅಣ್ಣಾಮಲೈ ಅವರ ನಡೆಯನ್ನು ಬಿವೈವಿ ಬೆಂಬಲಿಸಿದ್ದಾರೆ.

ತಮಿಳುನಾಡಿನಲ್ಲಿ ಡಿಎಂಕೆ ರಾಜ್ಯ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ಪಾದರಕ್ಷೆಗಳನ್ನು ತೊಡುವುದಿಲ್ಲ ಎಂದು ಕೆ.ಅಣ್ಣಾಮಲೈ ಅವರು ಭೀಷ್ಮ ಪ್ರತಿಜ್ಞೆ ತೊಟ್ಟಿದ್ದಾರೆ. ಅವರ ಶಪಥದ ಹೋರಾಟ ಗೆಲುವಿನ ಗುರಿ ಮುಟ್ಟಲಿ ಎಂದು ಹಾರೈಸೋಣ. ತಮಿಳುನಾಡಿನ ಮಹಿಳಾ ಪೀಡಕ ಡಿಎಂಕೆ ಸರ್ಕಾರದ ವಿರುದ್ಧ ಆರಂಭವಾಗಿರುವ ದಿಟ್ಟ ಹೋರಾಟ ಬಿಜೆಪಿಯ ಬದ್ಧತೆ ಏನೆಂಬುದನ್ನು ಸಾಕ್ಷೀಕರಿಸಲಾಗಿದೆ.
ಅಣ್ಣಾ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ನಡೆದಿತ್ತು. ಆರೋಪಿಗಳ ವಿರುದ್ಧ ಸರ್ಕಾರದ ಧೋರಣೆ ವಿರುದ್ಧ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ಅವರು ವಿನೂತನವಾಗಿ ಶುಕ್ರವಾರ ಪ್ರತಿಭಟಿಸಿದರು.
ಟೀಕಿಸಿದವರೆಗೆ ಬಿವೈವಿ ತಿರುಗೇಟು
ಇಂತಹ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ನಾನು ಚಪ್ಪಲಿ, ಶೂ ಧರಿಸುವುದಿಲ್ಲ ಎಂದು ಅವರು ತಮಿಳುನಾಡು ತಮ್ಮ ನಿವಾಸದ ಮುಂದೆ ಆರು ಚಾಟಿ ಏಟು ಹೊಡೆದುಕೊಂಡಿದ್ದಾರೆ. ಈ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅವರ ನಡೆಯನ್ನು ಬಿಜೆಪಿ ಯವರು ಬೆಂಬಲಿಸಿದ್ದಾರೆ. ಡಿಎಂಕೆ, ಕಾಂಗ್ರೆಸ್ ಮತ್ತಿತರ ನಾಯಕರು ಟೀಕಿಸಿದ್ದರು, ಲೇವಡಿ ಮಾಡಿದ್ದರು. ಇದಕ್ಕೆ ಬಿವೈ ವಿಜಯೇಂದ್ರ ಅವರು ತಿರುಗೇಟು ನೀಡಿದ್ದಾರೆ.












Click it and Unblock the Notifications