ಶಿಗ್ಗಾಂವಿ ಉಪಚುನಾವಣೆ: ನ.5ಕ್ಕೆ ಭರತ್ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ

ಹಾವೇರಿ ನವೆಂಬರ್ 2: ಶಿಗ್ಗಾಂವಿ ಉಪಚುನಾವಣೆ ಪ್ರಚಾರದ ಕಾವು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ದೀವಾಪವಳಿ ಹಬ್ಬಕ್ಕಾಗಿ ಕೊಂಚ ವಿರಾಮ ಪಡೆದಿದ್ದ ಚುನಾವಣೆ ಪ್ರಚಾರದ ಅಬ್ಬರ ಈಗ ಮತ್ತೆ ಶುರುವಾಗಲಿದೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಖಾನ್ ಕಣಕ್ಕಿಳಿದಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಪ್ರಚಾರ ಆರಂಭಿಸಿದ್ದಾರೆ. ಈ ನಡುವೆ ನ.5ಕ್ಕೆ ಭರತ್ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ ನಡೆಸಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಉಪಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳು ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ದೀಪಾವಳಿ ನಂತರ ಚುನಾವಣ ಬಿಸಿ ಮತ್ತಷ್ಟು ಹೆಚ್ಚಾಗಲಿದೆ. ಕೇಂದ್ರ ನಾಯಕರು, ಸ್ಟಾರ್‌ ಪ್ರಚಾರಕರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಮತದಾರರನ್ನು ಸೆಳೆಯಲು ವಿವಿಧ ಭರವಸೆಗಳೊಂದಿಗೆ ಪ್ರಚಾರದ ಅಖಾಡಕ್ಕೆ ಧುಮುಕಲಿದ್ದಾರೆ. ಇದೇ ನವೆಂಬರ್ 5ರಂದು ಬಿಜೆಪಿ ಅಭ್ಯರ್ಥಿ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಚಾರ ನಡೆಸಲಿದ್ದಾರೆ.

BY Vijayendra campaign for Bharath Bommai for Shiggaon by-election November 5

ನ.11ರಂದು ಬಿಎಸ್‌ ಯಡಿಯೂರಪ್ಪ ಭರತ್ ಪರ ಪ್ರಚಾರ

ಅಲ್ಲದೆ ನವೆಂಬರ್ 11ರಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಭರತ್ ಬೊಮ್ಮಾಯಿ ಅವರ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಈ ದಿನ ಶಿಗ್ಗಾಂವಿಯ ವಿವಿದೆಡೆ ರೋಡ್‌ ಶೋ, ಬೃಹತ್ ಸಮಾವೇಶ ನಡೆಯಲಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಒಟ್ಟು 2,26,226 ಮತದಾರರಿದ್ದಾರೆ. ಈ ಪೈಕಿ ಪಂಚಮಶಾಲಿ ಸಮುದಾಯದ ಪ್ರಭಾವ ಹೆಚ್ಚಾಗಿದೆ. ಇವರ ಬಳಿಕ ಮುಸ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಶಿಗ್ಗಾಂವಿಯಲ್ಲಿ ಪಂಚಮಶಾಲಿ ಮತ್ತು ಸವಣೂರಿನಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಾಗಿದೆ. ಪಂಚಮಶಾಲಿ ಸಮುದಾಯವರು ಸುಮಾರು 70 ಸಾವಿರದಷ್ಟು ಇದ್ದರೆ, ಸುಮಾರು 55 ಸಾವಿರದಷ್ಟು ಮುಸ್ಲಿಂ ಮತದಾರರು ಇದ್ದಾರೆ.

ಇದೇ ಕಾರಣಕ್ಕೆ ಈ ಎರಡು ಸಮುದಾಯದ ಅಭ್ಯರ್ಥಿಗಳನ್ನೇ ಇಲ್ಲಿ ಆಯ್ಕೆ ಮಾಡಲು ಪಕ್ಷಗಳು ಉತ್ಸಾಹ ತೋರುತ್ತವೆ. ಕಳೆದ ನಾಲ್ಕು ಚುನಾವಣೆಯಲ್ಲಿ ಪಂಚಮಶಾಲಿ ಸಮಯದಾಯದ ಬಸವರಾಜ್ ಬೊಮ್ಮಾಯಿ ಅವರು ಇಲ್ಲಿ ಜಯ ಸಾಧಿಸಿಕೊಂಡು ಬರುತ್ತಿದ್ದಾರೆ. ಇದೇ ಕಾರಣಕ್ಕೆ ಈ ಬಾರಿ ಅವರ ಪುತ್ರ ಭರತ್ ಬೊಮ್ಮಾಯಿ ಅವರನ್ನ ಕಣಕ್ಕೆ ಇಳಿಸಲಾಗಿದ್ದು, ಅಬ್ಬರದ ಪ್ರಚಾರ ನಡೆಸಲಾಗುತ್ತಿದೆ.

ನ. 6ರಂದು ಕೈ ಅಭ್ಯರ್ಥಿ ಪರ ಸಿಎಂ ಪ್ರಚಾರ

ಇನ್ನೂ ನವೆಂಬರ್ 6ರಂದು ಕೈ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎರಡನೇ ಸುತ್ತಿನ ಪ್ರಚಾರ ನಡೆಸಲಿದ್ದಾರೆ. ಇದರಲ್ಲಿ ಕಾಂಗ್ರೆಸ್‌ ಸಚಿವರು ಹಾಗೂ ಶಾಸಕರೂ ಭಾಗಿಯಾಗಲಿದ್ದಾರೆ.

BY Vijayendra campaign for Bharath Bommai for Shiggaon by-election November 5

ಕಾಂಗ್ರೆಸ್ ಮುಸ್ಲಿಂ ಮತದಾರರನ್ನು ತನ್ನ ತೆಕ್ಕೆಗೆ ತರಲು ಮುಸ್ಲಿಂ ಅಭ್ಯರ್ಥಿಗೆ ಮಣೆ ಹಾಕುವ ಪರಿಪಾಠ ಮುಂದುವರೆಸಿದೆ. ಈ ಹಿಂದೆ ಮೂರು ಬಾರಿ ಅಜ್ಜಂಪೀರ್ ಖಾದ್ರಿಗೆ ಟಿಕೆಟ್ ನೀಡಿದ್ದ ಕಾಂಗ್ರೆಸ್‌ ಒಮ್ಮೆ ಯಾಸಿರ್ ಪಠಾಣ್‌ಗೆ ಮಣೆ ಹಾಕಿತ್ತು. ಆದರೆ ಇವರಿಬ್ಬರೂ ಸೋಲನ್ನು ಅನುಭವಿಸಿದ್ದರು. ಈ ಭಾರಿ ಪಕ್ಷ ಯಾಸಿರ್‌ಗೆ ಟಿಕೆಟ್ ನೀಡಿದೆ. ಜೊತೆಗೆ ಕಾಂಗ್ರೆಸ್‌ಗೆ ಈ ಬಾರಿ ಭಾಗ್ಯಗಳು ಕೊಂಚ ಹೆಚ್ಚು ಮತಗಳನ್ನು ತಂದುಕೊಡುವ ಸಾಧ್ಯತೆ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+