ಇದು Buy ಮಾಡಿರೋ Byelection ಹೀಗಾಗಿ ಬೈಯುವಂತಾಗಿದೆ: ಟಿ.ಎ ಶರವಣ
ಬೆಂಗಳೂರು ನವೆಂಬರ್ 2: 'ಇದು Buy ಮಾಡಿರೋ Byelection ಹೀಗಾಗಿ ಬೈಯುವಂತಾಗಿದೆ' ಎಂದು ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ಮುಖಂಡ ಟಿ. ಎ ಶರವಣ ಆರೋಪಿಸಿದ್ದಾರೆ. ಇಂದು ಸಿಂಧಗಿ-ಹಾನಗಲ್ ಉಪಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದ್ದು ಹಾನಗಲ್‌ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಶುರುವಾಗಿದೆ. ಹಾನಗಲ್‌ನಲ್ಲಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಮುಂಚುಣಿಯಲ್ಲಿದೆ. ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯಾರ್ಥಿಗಳು ಭಾರೀ ಹಿನ್ನೆಡೆ ಬಗ್ಗೆ ಪ್ರತಿಕ್ರಿಯಿಸಿದ ಶರವಣ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು ಸುದ್ದಿಮಾಧ್ಯಮಕ್ಕೆ ಮಾತನಾಡಿದ ಶರವಣ, ಉಪಚುನಾವಣೆಯ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. "ಇದು ಖರೀದಿ ಮಾಡಿರುವ ಚುನಾವಣೆಯಾಗಿದ್ದು ಇದರಿಂದ ಬೈಯುವುಂತಾಗಿದೆ" ಎಂದು ಆರೋಪಿಸಿದ್ದಾರೆ. ಈ ಮೂಲಕ ಉಪಚುನಾವಣೆಯಲ್ಲಿ ಭಾರೀ ಹಣದ ಹರಿದಾಟವಾಗಿದೆ ಎನ್ನುವ ಮಾತನ್ನು ಪರೋಕ್ಷವಾಗಿ ಹೇಳಿದ್ದಾರೆ.
By Election Result: ಹಾನಗಲ್ ಕಾಂಗ್ರೆಸ್, ಸಿಂದಗಿ ಬಿಜೆಪಿ ಮುನ್ನಡೆ
ಇನ್ನೂ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೆ ಈ ಹೇಳಿಕೆ ಹೊರಬಂದಿದೆ. ಎರಡೂ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಸಮರ ಜೋರಾಗಿದೆ. ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಇದು ಮೊದಲ ಚುನಾವಣೆಯಾಗಿದ್ದು ಗೆಲ್ಲಲ್ಲೇಬೇಕು ಎನ್ನುವ ಅಗ್ನಿ ಪರೀಕ್ಷೆ ಇದಾಗಿದೆ. ಜೊತೆಗೆ ಹಾನಗಲ್ ಕ್ಷೇತ್ರದ ಜನರು ಮತ ಹಾಕಲು ಹಣ ಪಡೆದುಕೊಳ್ಳುತ್ತಿದ್ದಾರೆಂದು ಕಾಂಗ್ರೆಸ್ ಇಲ್ಲಿನ ಜನರಿಗೆ ಅವಮಾನ ಮಾಡುತ್ತಿದ್ದಾರೆ. ಹಣ ನೀಡುವುದು, ಜಾತಿ ಬಳಕೆ ಮಾಡಿಕೊಳ್ಳುವುದು ಕಾಂಗ್ರೆಸ್'ನ ಸಂಸ್ಕೃತಿಯಾಗಿದೆ ಎಂದು ಬಿಜೆಪಿ ಹಾಗೂ ಬಿಜೆಪಿ ಹಣ ಹಂಚಿಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಎರಡೂ ಪಕ್ಷಗಳು ಕೆಸರೆರೆಚಾಡಿಕೊಂಡಿದ್ದವು.
ಇಂದು ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು ಎಲ್ಲರ ಚಿತ್ತ ಹಾನಗಲ್‌ನತ್ತ ನೆಟ್ಟಿದೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಜ ಸಜ್ಜನರ, ಕಾಂಗ್ರೆಸ್ನಿಂದ ಶ್ರೀನಿವಾಸ್ ಮಾನೆ, ಜೆಡಿಎಸ್ನಿಂದ ನಿಯಾಜ್ ಶೇಖ್ ಸ್ಪರ್ಧಿಸಿದರೆ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರ, ಜೆಡಿಎಸ್ನಿಂದ ನಾಜಿಯಾ ಅಂಗಡಿ, ಕಾಂಗ್ರೆಸ್ ಪಕ್ಷದಿಂದ ಅಶೋಕ್ ಮನಗೂಳಿ ಸಮರದಲ್ಲಿದ್ದಾರೆ. ಇಂದು ಹಾನಗಲ್ ಕ್ಷೇತ್ರದ ಉಪಚುನಾವಣೆ ಮತ ಎಣಿಕೆಯನ್ನು ಹಾವೇರಿ ತಾಲೂಕಿನ ದೇವಗಿರಿ ಬಳಿಯಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಡಲಾಗುತ್ತಿದೆ. ಇನ್ನು ವಿಜಯಪುರ ನಗರದ ಸೈನಿಕ ಶಾಲೆಯ ಆವರಣದಲ್ಲಿ ಸಿಂದಗಿ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. ಬೆಳಿಗ್ಗೆ 8ರಿಂದ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಗೆಲುವು ಯಾರದು ಎಂದು ಕಾದು ನೋಡಬೇಕಿದೆ.
ರಾಜ್ಯದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಈಗಾಗಲೇ ಮತ ಎಣಿಕೆ ಆರಂಭವಾಗಿದ್ದು ಹಾನಗಲ್ 4ನೇ ಸುತ್ತಿನ ಮತ ಎಣಿಕೆ ಹಾಗೂ ಸಿಂಧಗಿಯಲ್ಲಿ 5ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ. ಒಟ್ಟು ಹಾನಗಲ್ 4ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆಗೆ 18019 ಮತಗಳು ಸಿಕ್ಕರೆ, ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ 17769 , ಜೆಡಿಎಸ್ ಅಭ್ಯರ್ಥಿಗೆ ನಿಯಾಜ್ ಶೇಖ್ 149 ಮತಗಳು ಒಲಿದಿದ್ದು 5ನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ. ಇನ್ನೂ ಸಿಂಧಗಿ 5ನೇ ಸುತ್ತಿನ ಮತೆಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿಗೆ 16160 ಮತಗಳು, ಬಿಜೆಪಿ ಅಭ್ಯರ್ಥಿಗೆ ರಮೇಶ್ ಭೂಸನೂರು 27791 ಮತಗಳು ಹಾಗೂ ಜೆಡಿಎಸ್ ನಾಜಿಯಾ ಅಂಗಡಿ 941 ಮತಗಳು ದಕ್ಕಿದ್ದು ಎಂಟನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂಧಗಿ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಬೆಳಗ್ಗೆ 8 ಗಂಟೆ ಆರಂಭವಾಗಲಿದೆ. ಹಾನಗಲ್‌ನಲ್ಲಿ 19 ಸುತ್ತು, ಸಿಂಧಗಿಯಲ್ಲಿ 22 ಸುತ್ತುಗಳ ಎಣಿಕೆ ನಡೆಯಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.