ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.3ಕ್ಕೆ 5 ಕ್ಷೇತ್ರಗಳ ಉಪಚುನಾವಣೆ: ಮೈತ್ರಿ vs ಬಿಜೆಪಿ, ಯಾರ ಪರ ಜನತೆ

|
Google Oneindia Kannada News

ಬೆಂಗಳೂರು, ನವೆಂಬರ್ 02: ಬಹುನಿರೀಕ್ಷಿತ ಪಂಚ ಕ್ಷೇತ್ರಗಳ ಉಪಚುನಾವಣೆ ನಾಳೆ ನಡೆಯಲಿದ್ದು, ರಾಜ್ಯದ ಜನರು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪರ ಇದ್ದಾರೆಯೋ ಬಿಜೆಪಿ ಪರ ಇದ್ದಾರೋ ಎಂಬುದು ನಾಳೆ ಮತಯಂತ್ರಗಳಲ್ಲಿ ದಾಖಲಾಗಲಿದೆ.

ಬಳ್ಳಾರಿ, ಮಂಡ್ಯ, ಶಿವಮೊಗ್ಗದಲ್ಲಿ ಲೋಕಸಭೆ ಉಪಚುನಾವಣೆ ನಡೆದರೆ, ರಾಮನಗರ ಹಾಗೂ ಜಮಖಂಡಿ ಕ್ಷೇತ್ರಗಳಲ್ಲಿ ವಿಧಾನಸಭೆ ಉಪಚುನಾವಣೆ ನಡೆಯಲಿದೆ.

ದೀಪಾವಳಿ ವಿಶೇಷ ಪುರವಣಿ

ಬಳ್ಳಾರಿಯಲ್ಲಿ ಸಂಸದರಾಗಿದ್ದ ಶ್ರೀರಾಮುಲು, ಮಂಡ್ಯದಲ್ಲಿ ಪುಟ್ಟರಾಜು, ಶಿವಮೊಗ್ಗದಲ್ಲಿ ಸಂಸದ ಯಡಿಯೂರಪ್ಪ ರಾಜೀನಾಮೆ ನೀಡಿದ್ದ ಕಾರಣ ಅಲ್ಲಿ ಉಪಚುನಾವಣೆ ನಡೆಯುತ್ತಿದೆ.

ಜಮಖಂಡಿಯಲ್ಲಿ ಶಾಸಕ ಸಿದ್ದು ನ್ಯಾಮಗೌಡ ಅವರು ಅಕಾಲಿಕವಾಗಿ ಮರಣಹೊಂದಿದ ಕಾರಣ ಹಾಗೂ ರಾಮನಗರದ ಶಾಸಕರಾಗಿ ಆಯ್ಕೆ ಆಗಿದ್ದ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ ಕಾರಣ ಉಪಚುನಾವಣೆ ನಡೆಯುತ್ತಿದೆ.

ಜಮಖಂಡಿ ಉಪ ಚುನಾವಣೆ : ಕಾಂಗ್ರೆಸ್‌, ಬಿಜೆಪಿ ಬಲಾಬಲವೇನು? ಜಮಖಂಡಿ ಉಪ ಚುನಾವಣೆ : ಕಾಂಗ್ರೆಸ್‌, ಬಿಜೆಪಿ ಬಲಾಬಲವೇನು?

ಚುನಾವಣಾ ಇಲಾಖೆಯು ಮತದಾನಕ್ಕಾಗಿ ಸರ್ವ ತಯಾರಿಯನ್ನೂ ಮಾಡಿಕೊಂಡಿದೆ. ನಾಳೆ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಚುನಾವಣೆ ನಡೆಯಲಿದೆ. ಮತದಾನದ ಮೂರು ದಿನಗಳ ನಂತರ ಅಂದರೆ ನವೆಂಬರ್ 6 ರಂದು ಫಲಿತಾಂಶ ಹೊರಬೀಳಲಿದೆ.

ಲೋಕಸಭೆ ಉಪಚುನಾವಣೆ ಕಣ

ಲೋಕಸಭೆ ಉಪಚುನಾವಣೆ ಕಣ

ಬಳ್ಳಾರಿ ಲೋಕಸಭೆ ಉಪಚುನಾವಣೆ ಅತಿ ಹೆಚ್ಚು ಗಮನ ಸೆಳೆದಿದೆ ಅಲ್ಲಿ ಶ್ರೀರಾಮುಲು ಸಹೋದರಿ ಜೆ.ಶಾಂತಾಅ ಅವರು ಬಿಜೆಪಿ ಅಭ್ಯರ್ಥಿಯಾಗಿ ಹಾಗೂ ವಿಎಸ್ ಉಗ್ರಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ರಾಮುಲು ಮತ್ತು ಡಿಕೆಶಿ ಮಧ್ಯೆ ಫೈಟ್ ಎನಿಸಿಕೊಂಡಿದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ಮತ್ತು ಜೆಡಿಎಸ್‌ನ ಮಧು ಬಂಗಾರಪ್ಪ ನಡುವೆ ಪೈಪೋಟಿ ಇದೆ. ಮಧುಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡ ಮತ್ತು ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಮಧ್ಯೆ ನೇರ ಸ್ಪರ್ಧೆ ಇದೆ. ಇಲ್ಲಿ ಯಾರೇ ಗೆದ್ದರು ಅಂತರ ಕಡಿಮೆ ಎನ್ನಲಾಗಿದೆ.

ಉಪಚುನಾವಣೆ ಕದನ: ದೋಸ್ತಿ ಸರ್ಕಾರದ ಮೈತ್ರಿ ಜಪ ಯಶಸ್ವಿಯಾಗುತ್ತಾ?ಉಪಚುನಾವಣೆ ಕದನ: ದೋಸ್ತಿ ಸರ್ಕಾರದ ಮೈತ್ರಿ ಜಪ ಯಶಸ್ವಿಯಾಗುತ್ತಾ?

ವಿಧಾನಸಭೆ ಉಪಚುನಾವಣೆ

ವಿಧಾನಸಭೆ ಉಪಚುನಾವಣೆ

ರಾಮನಗರದಲ್ಲಿ ಹಲವು ಕೊನೆ ಕ್ಷಣದ ನಾಟಕೀಯ ಬೆಳವಣಿಗೆ ನಂತರ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಅವರು ಕಣದಲ್ಲಿ ಉಳಿದಿರುವ ಏಕಮೇವ ಪ್ರಬಲ ಅಭ್ಯರ್ಥಿ ಆಗಿದ್ದಾರೆ. ಬಿಜೆಪಿಯ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದುದ ಕಾಂಗ್ರೆಸ್ ಸೇರಿದ್ದಾರೆ. ಇನ್ನು ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಮಧ್ಯೆ ತುರುಸಿನ ಪೈಪೋಟಿ ಇದೆ.

ನನ್ನನ್ನು 108 ಅಂಬುಲೆನ್ಸ್ ಶ್ರೀರಾಮುಲು ಅಂತಾರೆ: ಸಿದ್ದು Vs ರಾಮುಲು ವಾಕ್ಸಮರ ಜೋರು ನನ್ನನ್ನು 108 ಅಂಬುಲೆನ್ಸ್ ಶ್ರೀರಾಮುಲು ಅಂತಾರೆ: ಸಿದ್ದು Vs ರಾಮುಲು ವಾಕ್ಸಮರ ಜೋರು

ಮತದಾನಕ್ಕೆ ಸರ್ವ ತಯಾರಿ

ಮತದಾನಕ್ಕೆ ಸರ್ವ ತಯಾರಿ

ಐದು ಕ್ಷೇತ್ರದ ಉಪಚುನಾಣೆಗಾಗಿ 6453 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 1502 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಐದು ಕ್ಷೇತ್ರಗಳಲ್ಲಿ 53 ಪಿಂಕ್‌ ಮತಗಟ್ಟೆಗಳನ್ನು ತೆರೆಯಲಾಗಿದೆ. ಐದೂ ಕ್ಷೇತ್ರಗಳಲ್ಲಿ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಎಚ್ಡಿಕೆ ಡಿಕೆಶಿ 'ಆಪರೇಶನ್ ರಾಮನಗರ'ಕ್ಕೆ ಬೆಚ್ಚಿಬಿದ್ದ ಅಮಿತ್ ಶಾ!ಎಚ್ಡಿಕೆ ಡಿಕೆಶಿ 'ಆಪರೇಶನ್ ರಾಮನಗರ'ಕ್ಕೆ ಬೆಚ್ಚಿಬಿದ್ದ ಅಮಿತ್ ಶಾ!

ಒಟ್ಟು 54.45 ಮತದಾರರು

ಒಟ್ಟು 54.45 ಮತದಾರರು

ಐದು ಕ್ಷೇತ್ರಗಳಲ್ಲಿ ಒಟ್ಟು 54.45 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. 27.21 ಲಕ್ಷ ಪುರುಷ ಮತದಾರರು, 27.30 ಲಕ್ಷ ಮಹಿಳಾ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಉಪಚುನಾವಣೆಗಾಗಿ 9822 ಬ್ಯಾಲೆಟ್ ಯುನಿಟ್ ಬಳಸಲಾಗುತ್ತಿದೆ. 8,438 ಕಂಟ್ರೋಲ್ ಯುನಿಟ್, 8,992 ವಿವಿ ಪ್ಯಾಟ್‌ ಬಳಸಲಾಗುತ್ತಿದೆ. 130 ವಿಡಿಯೋ ಕಾಸ್ಟಿಂಗ್ ಮಾಡಿಸಲಾಗುತ್ತಿದ್ದು, 1312 ಮಂದಿ ಮೈಕ್ರೋ ವೀಕ್ಷಕರನ್ನು ನೇಮಿಸಲಾಗುತ್ತಿದೆ.

English summary
By election of five constituencies will happen on November 03. Bellari, Shimoga and Mandya constituency Lok Sabha by election and Ramnagara and Jamkhandi voting for assembly by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X