BWSSB: ಬಾಕಿ ₹663 ಕೋಟಿ ವಸೂಲಿಗೆ OTS ಯೋಜನೆ ಜಾರಿಗೆ ಬೆಂಗಳೂರು ಜಲಮಂಡಳಿ ಸಜ್ಜು
ಬೆಂಗಳೂರು, ಆಗಸ್ಟ್ 09: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ರೀತಿಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಗೆ ಬರಬೇಕಾದ ನೀರಿನ ಶುಲ್ಕ ಕೋಟ್ಯಂತರ ರೂಪಾಯಿ ಬಾಕಿ ಇದೆ. ಹೀಗಾಗಿ ಪಾಲಿಕೆ ಅನುಸರಿಸಿದ OTS ವಿಧಾನವನೇ ಅನುಸರಿಸಲು ಜಲಮಂಡಳಿ ಅಧಿಕಾರಿಗಳು ತಿರ್ಮಾನಿಸಿದ್ದಾರೆ. ೀ ಯೋಜನೆ ಜಾರಿಯಾದರೆ ಗ್ರಾಹಕರಿಗೆ ಮತ್ತು ಜಲಮಂಡಳಿಗೂ ಹೆಚ್ಚಿನ ಅನುಕೂಲವಾಗಲಿದೆ.
ಬೆಂಗಳೂರು ಜಲಮಂಡಳಿಯಿಂದ ಪೂರೈಕೆ ಆಗುವ ಕಾವೇರಿ ನೀರನ್ನು ಬಳಸಿ ಪಾವತಿಸಬೇಕಾದ ನೀರಿನ ಶುಲ್ಕ ಬರೋಬ್ಬರಿ ₹663 ಬಾಕಿ ಸಂದಾಯವಾಗಬೇಕಿದೆ. ಗ್ರಾಹಕರು, ಬಿಬಿಎಂಪಿ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳು ನೀರಿನ ಶುಲ್ಕ ಕಟ್ಟದೇ ಬಾಕಿ ಉಳಿಸಿಕೊಂಡಿವೆ. ಶುಲ್ಕದ ಮೇಲಿನ ಬಡ್ಡಿ ಬೆಳೆಯುತ್ತಲೇ ಇದೆ.

ಹೀಗೆ ಶುಲ್ಕ ಬಾಕಿ ಉಳಿಯುತ್ತಲೇ ಹೋದರೆ, ಜಲಮಂಡಳಿಗೆ ಆರ್ಥಿಕ ಹೊರೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಬಿಬಿಎಂಪಿ ಮಾದರಿಯಲ್ಲಿ ಜಲಮಂಡಳಿಯು ಒನ್ ಟೈಮ್ ಪರಿಹಾರ (OTS) ಜಾರಿಗೆ ಮುಂದಾಗಿದೆ.
ಯೋಜನೆ ಜಾರಿಯಾದರೆ ಬಡ್ಡಿ ಮನ್ನಾ?
ಈ ಯೋಜನೆ ಜಾರಿಯಾದರೆ ಗ್ರಾಹಕರು ಈವರೆಗೆ ಉಳಿಸಿಕೊಂಡ ನೀರಿನ ಶುಲ್ಕವನ್ನು ಒಂದೇ ಬಾರಿಗೆ ಪಾವತಿಸಿದವರಿಗೆ ಶುಲ್ಕದ ಮೇಲಿನ ಬಡ್ಡಿ ಮನ್ನಾ ಆಗಲಿದೆ. ಈ ಕುರಿತು ಅಧಿಕಾರಿಗಳು ವಿಸ್ತೃತವಾಗಿ ಚರ್ಚಿಸಿದ್ದಾರೆ. ಇದೀಗ ರಾಜ್ಯ ಸರ್ಕಾರ ಜಾರಿ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿ, ಬಡ್ಡಿ ಮನ್ನಾ ಬಗ್ಗೆ ಮನವರಿಕೆ ಮಾಡಿ ಜಾರಿಗೆ ಅನುಮತಿ ಕೇಳಲಿದ್ದಾರೆ.

ವಿಪರ್ಯಾಸವೆಂದರೆ ಬೆಂಗಳೂರು ಜಲಮಂಡಳಿಯು ಸರ್ಕಾರದ ಒಂದು ಅಂಗಸಂಸ್ಥೆಯಾಗಿದೆ. ಇದೇ ರೀತಿ ಇರುವ ಬಿಬಿಎಂಪಿಯ ಕಚೇರಿಗಳು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳು ಈವರೆಗೆ ಬಳಸಿರುವ ಕಾವೇರಿ ನೀರಿನ ಶುಲ್ಕ ಕಟ್ಟದೇ ಬಾಕಿ ಉಳಿಸಿಕೊಂಡಿವೆ.
ನೀರಿನ ಶುಲ್ಕದ ಮೇಲಿನ ಬಡ್ಡಿ ₹241 ಕೋಟಿ
ಜಲಮಂಡಳಿತಯು ತನ್ನ ವ್ಯಾಪ್ತಿಯಲ್ಲಿ ಸುಮಾರು ಐದು ಲಕ್ಷ ನೀರಿನ ಸಂಪರ್ಕ ನೀಡಿದೆ. ಇದರಿಂದ ಒಟ್ಟು ₹663 ರೂಪಾಯಿ ಬಿಲ್ ಬಾಕಿ ಉಳಿದಿದ್ದು, ಪಾವತಿ ಆಗಬೇಕಿದೆ. ಒಟ್ಟು ಬಾಕಿ ಉಳಿದ ಹಣದಲ್ಲಿ ₹442 ಕೋಟಿ ರೂಪಾಯಿ ನೀರು ಶುಲ್ಕ ಬಾಕಿ ಸಂಗ್ರಹವಾಗಬೇಕಿದೆ. ಇದು ವರ್ಷಗಳಿಂದ ಉಳಿದಕೊಂಡಿದ್ದು, ಈ ಹಣದ ಮೇಲಿನ ಬಡ್ಡಿಯೇ ₹241 ಕೋಟಿ ರೂಪಾಯಿ ಆಗಿದೆ.
ಹೀಗೆ ಕೋಟ್ಯಾಂತರ ರೂಪಾಯಿ ಬಾಕಿ ಉಳಿದಿರುವುದರಿಂದ ಜಲಮಂಡಳಿಗೆ ಆರ್ಥಿಕ ತೊಂದರೆ ಉಂಟಾಗುತ್ತಿದೆ. ಹೆಚ್ಚುತ್ತಿರುವ ಇಂದಿನ ಬೆಲೆಗಳ ಮಧ್ಯೆ ಈ ಹಣ ಸಂಗ್ರಹವಾಗುವುದು ಜಲಮಂಡಳಿಗೆ ತೀರಾ ಅಗತ್ಯವಾಗಿದೆ.
ಈ ಹಿಂದೆ ಬೆಂಗಳೂರಿನಲ್ಲಿ ಆಸ್ತಿ ತೆರಿಗೆಗಳ ಬಾಕಿ ಪಾವತಿ ಆಗಿರಲಿಲ್ಲ. ಈ ವೇಳೆ ಬಿಬಿಎಂಪಿ ಒಟಿಎಸ್ ಯೋಜನೆ ಜಾರಿಗೆ ತಂದಿತು. ಬಡ್ಡಿ ಮನ್ನಾ ಆಗುವ ಕಾರಣಕ್ಕಾಗಿ ಗ್ರಾಹಕರು, ವಾಣಿಜ್ಯೋದ್ಯಮಿಗಳು ಬಿಲ್ ಪಾವತಿಸಲು ಮುಂದೆ ಬಂದಿದ್ದಾರೆ. ಇದೇ ರೀತಿಯ ಮಾರ್ಗೋಪಾಯವನ್ನು ಜಲಮಂಡಳಿ ಅನುಸರಿಲು ನಿರ್ಧರಿಸಿದೆ.












Click it and Unblock the Notifications