ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ಬಜೆಟ್ ಕುರಿತಂತೆ ಪ್ರಬಂಧ ಸ್ಪರ್ಧೆ

By Mahesh
|
Google Oneindia Kannada News

ಬೆಂಗಳೂರು, ಜು.3: ಬಿಸಿನೆಸ್ ಗುರು ಪತ್ರಿಕೆಯು ಆರ್ಥಿಕತೆ, ಉದ್ಯಮ ಮತ್ತು ನಾಯಕತ್ವ ಕುರಿತಂತೆ ಕನ್ನಡದ ಏಕೈಕ ಪತ್ರಿಕೆಯಾಗಿದೆ. ಬೆಂಗಳೂರುಸೇರಿದಂತೆ ನಾಡಿನಾದ್ಯಂತ ಪ್ರಸಾರಗೊಳ್ಳುತ್ತಿರುವ ಈ ಪಾಕ್ಷಿಕ ಪತ್ರಿಕೆ ಇದೇ ಜುಲೈ ತಿಂಗಳಿಗೆ ಒಂದು ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ವಿಶಿಷ್ಟ ಲೇಖನ ಸ್ಪರ್ಧೆ ಆಯೋಜಿಸಿದೆ.

"ನಾನು ಕೇಂದ್ರ ಹಣಕಾಸು ಸಚಿವನಾಗಿದ್ದರೆ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮಂಡಿಸುವ ಬಜೆಟ್ ಹೀಗಿರಲಿದೆ" ಈ ವಿಷಯ ಕುರಿತು ವಿದ್ಯಾರ್ಥಿಗಳು ಬರೆಯಬೇಕು. ತಮ್ಮ ಬಜೆಟ್ ನ ಮುಖ್ಯಾಂಶಗಳು, ವಿವಿಧ ವಲಯ ಅಥವಾ ಕ್ಷೇತ್ರಕ್ಕೆ ನೀಡುವ ಒತ್ತು, ಆದಾಯ ಮತ್ತು ಖರ್ಚಿನ ಮೂಲ ಇತ್ಯಾದಿ ಒಟ್ಟಾರೆ ಬಜೆಟ್‍ನ ಅಂಶಗಳನ್ನು ಲೇಖನ ಒಳಗೊಂಡಿರಬೇಕು.

Business Guru Kannada magazine competition on Budget for Student

ಸ್ಪರ್ಧೆಯ ನಿಯಮಗಳು:
1. ಲೇಖನ ಕನ್ನಡದಲ್ಲಿರಬೇಕು; 2000 ಪದ ಮಿತಿ ಮೀರಬಾರದು.
2. ಲೇಖನವನ್ನು ಪತ್ರ ಮುಖೇನ ಇಲ್ಲವೇ ಇ-ಮೇಲ್ ಮೂಲಕ ಪತ್ರಿಕಾಲಯಕ್ಕೆ ಇದೇ ಜುಲೈ 25ರೊಳಗೆ ತಲುಪಿಸಬೇಕು.
* ಜುಲೈ 25ರ ನಂತರ ಬಂದ ಲೇಖನಗಳನ್ನು ಪರಿಗಣಿಸಲಾಗುವುದಿಲ್ಲ.
3. ವಿದ್ಯಾರ್ಥಿಗಳು ತಮ್ಮ ಹೆಸರು, ತರಗತಿ, ಕಾಲೇಜು ವಿವರ ಕುರಿತು ವಿಭಾಗ ಮುಖ್ಯಸ್ಥರು ಇಲ್ಲವೇ ಪ್ರಾಂಶುಪಾಲರ ದೃಢೀಕರಣವನ್ನೊಳಗೊಂಡ ಪತ್ರವನ್ನು ತಮ್ಮ ಲೇಖನದೊಂದಿಗೆ ಲಗತ್ತಿಸಬೇಕು. [ಕೇಂದ್ರ ಬಜೆಟ್ ಮಂಡನೆ ದಿನಾಂಕ ಬಹಿರಂಗ]

4. ಹಿರಿಯ ಪತ್ರಕರ್ತರು, ಹಿರಿಯ ಉಪನ್ಯಾಸಕರನ್ನೊಳಗೊಂಡ ಉನ್ನತ ಸಮಿತಿ ಉತ್ತಮ ಲೇಖನಗಳನ್ನು ಆಯ್ಕೆ ಮಾಡಲಿದೆ. ಆಯ್ಕೆಯಲ್ಲಿ ತೀರ್ಪುಗಾರರ ನಿರ್ಧಾರ ಅಂತಿಮ.
* ಪ್ರಥಮ ಬಹುಮಾನ ರೂ. 5,000, ದ್ವಿತೀಯ ರೂ. 3,000 ಹಾಗೂ ತೃತೀಯ ಬಹುಮಾನ ರೂ. 1,000.
ಜತೆಗೆ ಆಯ್ಕೆಯಾದವರಿಗೆ ಪ್ರಶಸ್ತಿ ಪತ್ರ ನೀಡಲಾಗುವುದು.
* ಆಯ್ಕೆಯಾದ ಮೂರು ಅತ್ಯುತ್ತಮ ಲೇಖನಗಳನ್ನು ನಮ್ಮ ಪತ್ರಿಕೆಯ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು.

ಆಗಸ್ಟ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪತ್ರಿಕೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ಪ್ರದಾನ ಮಾಡಲಾಗುವುದು.

ವಿದ್ಯಾರ್ಥಿಗಳಲ್ಲಿ ಕನ್ನಡ ಬರವಣಿಗೆಯ ಅಭಿರುಚಿ ಮೂಡಿಸುವುದು ಮತ್ತು ಆರ್ಥಿಕ ವಿದ್ಯಮಾನಗಳ ಕುರಿತು ಆಸಕ್ತಿ ಮೂಡಿಸುವುದು ಈ ಸ್ಪರ್ಧೆಯ ಉದ್ದೇಶವಾಗಿದೆ. ತಮ್ಮ ವಿದ್ಯಾರ್ಥಿಗಳಲ್ಲಿ ಈ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಲೇಖನ ಕಳಿಸಬೇಕಾದ ವಿಳಾಸ:
ಬಿಸಿನೆಸ್ ಗುರು, ನಂ. 15/1,
ರಂಗನಾಥಪುರ ಮುಖ್ಯರಸ್ತೆ,
ಸ್ಯಾಂಕಿ ಕೆರೆ ಎದುರು
ಅಯ್ಯಪ್ಪ ದೇವಾಲಯದ ಹಿಂಭಾಗ,
ಮಲ್ಲೇಶ್ವರ (18ನೇ ಅಡ್ಡರಸ್ತೆ),
ಬೆಂಗಳೂರು 560003.

ದೂರವಾಣಿ: 080-2344 7077, 99643 37077.
ಇ-ಮೇಲ್: [email protected]

English summary
Business Guru the only Kannada magazine on Economy and Leadership is conducting a essay competition to Degree and Phd students across Karnataka. Topic of essay"If I am the Finance Minister how will be the Union Budget"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X