ಕರ್ನಾಟಕಕ್ಕೆ ಬಂಪರ್: ಉದ್ಯೋಗ ಸೃಷ್ಟಿ - ಹೂಡಿಕೆ ವಿಚಾರದಲ್ಲಿ ಗುಡ್‌ನ್ಯೂಸ್!
ಕರ್ನಾಟಕದ ಸೆಮಿಕಂಡಕ್ಟರ್ ವಲಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕರ್ನಾಟಕದ ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೆ ಭರ್ಜರಿ ಪ್ರೋತ್ಸಾಹ ಸಿಗುತ್ತಿದ್ದು ಭಾರತದ ಮೊಟ್ಟಮೊದಲ 300m.m. ವೇಫರ್ ವ್ಯಾಲಿಡೇಶನ್ ಕೇಂದ್ರ ಕರ್ನಾಟಕದಲ್ಲಿ ಸ್ಥಾಪನೆ ಆಗಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ. ಹೌದು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರೀ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯಾಗುತ್ತಿದ್ದು ಕನ್ನಡಿಗರಿಗೆ ಬಂಪರ್ ಸಿಕ್ಕಂತೆ ಆಗಿದೆ. ಈ ಬಗ್ಗೆ ಸಚಿವ ಎಂ ಬಿ ಪಾಟೀಲ್ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
• #AppliedMaterials ಸಂಸ್ಥೆ ಬೃಹತ್ ಹೂಡಿಕೆಗೆ ಮುಂದಾಗಿದೆ - ಬೆಂಗಳೂರಿನಲ್ಲಿ ಸಹಯೋಗದ ಇಂಜಿನಿಯರಿಂಗ್ ಕೇಂದ್ರ ಸ್ಥಾಪನೆಗಾಗಿ 4 ವರ್ಷಗಳಲ್ಲಿ ₹3,500 ಕೋಟಿ ($400 ಮಿಲಿಯನ್) ಹೂಡಿಕೆ ಮಾಡಲಿದೆ ಎಂದು ಅವರು ಹೇಳಿದ್ದಾರೆ. ಈ ಕೇಂದ್ರದ ಮೂಲಕ ಭವಿಷ್ಯದಲ್ಲಿ ₹16,000 ಕೋಟಿಗೂ ಹೆಚ್ಚು ($2 ಬಿಲಿಯನ್) ಮೌಲ್ಯದ ಹೂಡಿಕೆಗೆ ಉತ್ತೇಜನ ದೊರೆಯಲಿದೆ. ಅಲ್ಲದೇ ಭಾರತದ ಮೊಟ್ಟಮೊದಲ ಖಾಸಗಿ 300 m.m. ವೇಫರ್ ವ್ಯಾಲಿಡೇಶನ್ ಕೇಂದ್ರ ಕರ್ನಾಟಕದಲ್ಲಿ ಸ್ಥಾಪನೆಯಲ್ಲಿದೆ ಇದರಿಂದ ಸಾವಿರಾರು ಹೈಟೆಕ್ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದ್ದಾರೆ.

• ಈ ಹೂಡಿಕೆ, ಕರ್ನಾಟಕವನ್ನು ಜಾಗತಿಕ ಮಟ್ಟದ ಸೆಮಿಕಂಡಕ್ಟರ್ ಹಾಗೂ ಪ್ರಗತಿಶೀಲ ತಯಾರಿಕಾ ಕೇಂದ್ರವನ್ನಾಗಿ ರೂಪಿಸುವ ನಮ್ಮ ದೃಷ್ಟಿಕೋನದಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ.
#AppliedMaterials ಜೊತೆ ನಮ್ಮ ನಿರಂತರ ಪ್ರಯತ್ನಗಳು ಹಾಗೂ ಕಾರ್ಯತಂತ್ರದ ಸಹಕಾರದ ಫಲವಾಗಿ, ನವೀನ ಆವಿಷ್ಕಾರ ಹಾಗೂ ಪ್ರಗತಿಶೀಲ ತಯಾರಿಕೆಗೆ ಕರ್ನಾಟಕದ ಬಲಿಷ್ಠ ಪರಿಸರ ಮತ್ತೊಮ್ಮೆ ಆಯ್ಕೆಯ ತಾಣವೆಂದು ಸಾಬೀತುಪಡಿಸಿದೆ.
ಈ ಹೂಡಿಕೆ, ಕರ್ನಾಟಕವನ್ನು ಜಾಗತಿಕ ಸೆಮಿಕಂಡಕ್ಟರ್ ಮತ್ತು ಉನ್ನತ ಮೌಲ್ಯದ ತಯಾರಿಕಾ ಕೇಂದ್ರವನ್ನಾಗಿ ಬೆಳೆಸುವ ನಮ್ಮ ದೃಷ್ಟಿಕೋನದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಕರ್ನಾಟಕದ ಬೆಳವಣಿಗೆಯ ಕಥೆಗೂ, ಸೆಮಿಕಂಡಕ್ಟರ್ ಸಾಹಸಕ್ಕೂ ನೀವು ಅಮೂಲ್ಯ ಸಹಭಾಗಿಗಳಾಗಿದ್ದೀರಿ ಎಂದೂ ಅವರು ಹೇಳಿದ್ದಾರೆ.
ಡೆನ್ಮಾರ್ಕ್‌ನೊಂದಿಗೆ ಹೂಡಿಕೆ: ಇನ್ನು ಕರ್ನಾಟಕ ಸರ್ಕಾರವು ಈಚೆಗೆ ಡೆನ್ಮಾರ್ಕ್‌ನೊಂದಿಗೆ ಹೂಡಿಕೆ ಒಪ್ಪಂದವನ್ನು ಮಾಡಿಕೊಂಡಿದೆ. ಡೆನ್ಮಾರ್ಕ್‌ನಲ್ಲಿ ಕರ್ನಾಟಕದ ಹೂಡಿಕೆ ಸಾಮರ್ಥ್ಯದ ಅನಾವರಣವಾಗಿದೆ ಎಂದು ಎಂ ಬಿ ಪಾಟೀಲ್ ಅವರು ಹೇಳಿದ್ದಾರೆ. ರಾಜ್ಯಕ್ಕೆ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ ಕೈಗೊಂಡಿರುವ ಡೆನ್ಮಾರ್ಕ್ ಪ್ರವಾಸದಲ್ಲಿ ಪ್ರಮುಖ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ.
Novo Nordiskಗೆ ಫಾರ್ಮಾ ಮತ್ತು ಬಯೋಟೆಕ್ ಪರಿಸರ ವ್ಯವಸ್ಥೆ ಕುರಿತು ಮನವರಿಕೆ ನೀಡಲಾಯಿತು. Novonesisಗೆ KWIN Cityಯ ಸಾಮರ್ಥ್ಯ ಪರಿಚಯಿಸಲಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದ (#GIM2025) ಸಂದರ್ಭದಲ್ಲಿ ಮಾಡಿಕೊಂಡ ₹350 ಕೋಟಿ ಹೂಡಿಕೆಯ ಒಡಂಬಡಿಕೆಯ ಪ್ರಗತಿ ಬಗ್ಗೆ ಕಾರ್ಲ್ಸ್ ಬರ್ಗ್ ಜೊತೆ ಚರ್ಚೆ ನಡೆಯಿತು ಎಂದು ಅವರು ಹೇಳಿದ್ದಾರೆ. ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳಿಂದ ರಾಜ್ಯದಲ್ಲಿ ಭಾರೀ ಉದ್ಯೋಗ ಸೃಷ್ಟಿಯಾಗಲಿದೆ. ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications