ಆಯೋಧ್ಯಯಲ್ಲಿ ವಾಲ್ಮೀಕಿ ಮಂದಿರಕ್ಕಾಗಿ ಡಿಮ್ಯಾಂಡ್ : ಜಾರಕಿಹೊಳಿ ಹೇಳಿದ್ದೇನು?
ಹಾವೇರಿ, ಡಿಸೆಂಬರ್ 30: ಅಯೋಧ್ಯೆ ರಾಮಮಂದಿರ ಬಳಿ ಮಹರ್ಷಿ ವಾಲ್ಮೀಕಿ ಮಂದಿರ ನಿರ್ಮಾಣವಾಗಬೇಕು. ಆಯೋಧ್ಯಯಲ್ಲಿ ವಾಲ್ಮೀಕಿ ಮಂದಿರಕ್ಕಾಗಿಯೂ ನಾವು ಡಿಮ್ಯಾಂಡ್ ಮಾಡಿದ್ದೇವೆ. ರಾಮನ ಪರಿಚಯ ಮಾಡಿಸಿದವರು ವಾಲ್ಮೀಕಿ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು
ಈ ಕುರಿತಂತೆ ಸಭೆಯಲ್ಲಿ ಕೂಡಾ ಚರ್ಚೆ ಮಾಡಿದ್ದೇವೆ. ಅಯೋಧ್ಯೆಗೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಆಯೋಧ್ಯ ವಿಮಾನ ನಿಲ್ದಾಣಕ್ಕೆ ಹೆಸರಿಟ್ಟಿದ್ದು ಸಂತಸ ನಾವು ಸ್ವಾಗತ ಮಾಡುತ್ತೇವೆ. ಮಂದಿರ ಆಗಿದೆ ಬಹಳ ಜನರ ನಿರೀಕ್ಷೆ ಇತ್ತು ಒಳ್ಳೆಯ ರೀತಿಯಲ್ಲಿ ತಯಾರಾಗಿದೆ. ಪ್ರತಿಷ್ಠಿತ ಮಂದಿರ ಆಗಿದೆ,ಬಹಳಷ್ಟು ಮಂದಿರದಲ್ಲಿ ಇದು ಒಂದಾಗಿದೆ ಎಂದು ಹೇಳಿದರು.

ಚುನಾವಣಾ ವೇಳೆ ಅಭಿವೃದ್ಧಿಗಿಂತ ಧಾರ್ಮಿಕ ವಿಚಾರ ಹೈಲಟ್ ಆಗುತ್ತೀರುವ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯ ಬಿಟ್ಟು ಏನಿಲ್ಲಾ,ರಾಜಕೀಯ ಇದ್ದೆ ಇರುತ್ತೆ .ಚುನಾವಣೆ ಆದ ಬಳಿಕ ಎಲ್ಲವೂ ಗೊತ್ತಾಗುತ್ತದೆ. ರಾಜಕೀಯಕ್ಕೂ ಆದಕ್ಕೂ ಸಂಬಂಧ ಇದ್ದೆ ಇರುತ್ತೆ. ನಮ್ಮ ದೇಶ ಹಾಗೇ ಬಂದಿದೆ ಇಲ್ಲಿ ಎರಡು ವಿಚಾರಗಳು ನಡೆಯುತ್ತವೆ. ಅದಕ್ಕೆ ತಕ್ಷಣವೇ ಕಡಿವಾಣ ಹಾಕೋಕೆ ಆಗೊಲ್ಲ ಅದಕ್ಕೆ ಇನ್ನೂ ಸಮಯ ಬೇಕು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.
ಹಿಜಾಬ್ ಆದೇಶದಲ್ಲಿ ವಿದ್ಯಾರ್ಥಿಗಳಿಗೆ ಗೊಂದಲ ವಿಚಾರವಾಗಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಆದೇಶ ಮಾಡಿಲ್ಲ, ಆದೇಶ ಸಹ ಆಗಿಲ್ಲ. ಹಿಜಾಬ್ ಧರಿಸುವ ಕುರಿತಂತೆ ಮೇಲಾಗಿ ಕಾನೂನು ಇಲ್ಲ. ಧರಿಸುವುದು, ಬಿಡೋದು ಅವರ ಇಷ್ಟ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಇನ್ನಿಬ್ಬರು ಡಿಸಿಎಂ ಆಯ್ಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಯಾವುದು ಇಲ್ಲ. ಮಾಡಬೇಕಾದ್ದು ಬಿಡಬೇಕಾದ್ದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
ಕಲ್ಲಡ್ಕರ್ ಪ್ರಭಾಕರ್ ಬಟ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, ಕೇಸ್ ದಾಖಲು ಆಗಿದೆ. ಕೋರ್ಟ್ ನಿರ್ಣಯ ಮಾಡುತ್ತದೆ. ಯಾವ ಸಮಯದಲ್ಲಿ ಏನ್ ಹೇಳಿದಾರೆ ಎನ್ನೋದು ಕೋರ್ಟ್ ನೋಡುತ್ತದೆ. ಅದು ಮುಖ್ಯ ಕಾದು ನೋಡಬೇಕಷ್ಟೆ ಈಗ ಅದು ಅನವಶ್ಯಕ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸಚಿವ ಮಧುಬಂಗಾರಪ್ಪ ಚೆಕ್ ಬೌನ್ಸ್ ವಿಚಾರಕ್ಕೆ ರಾಜೀನಾಮೆ ಯಾಕ ಕೊಡಬೇಕು. ಅದು ಖಾಸಗಿ ವಿಚಾರ. ವ್ಯವಹಾರದಲ್ಲಿ ಇದೆಲ್ಲಾ ಇರುತ್ತದೆ ಇಂತಹ ಕೇಸ್ ಗಳು ಆಗಿವೆ. ರಾಜಕೀಯವಾಗಿ ತಪ್ಪು ಮಾಡಿದರೆ ಬೇರೆ. ಬಿಸಿನೆಸ್ ಮಾಡೋರಿಗೆ ಇದೆಲ್ಲ ಇದ್ದೆ ಇರುತ್ತದೆ ಎಂದು ಸಚಿವ ಜಾರಕಿಹೊಳಿ ತಿಳಿಸಿದರು.












Click it and Unblock the Notifications