Buddha Purnima 2023: ಬುದ್ಧ ಪೂರ್ಣಿಮಾ ಪ್ರಯುಕ್ತ ಮೇ 5ಕ್ಕೆ ಮಾಂಸ ಮಾರಾಟ ರದ್ದು

ಬೆಂಗಳೂರು ಮೇ 05: ಬುದ್ಧ ಪೂರ್ಣಿಮಾ ಪ್ರಯುಕ್ತ ಮೇ 05 ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಮೇ 05 ಶುಕ್ರವಾರ ಬುದ್ದ ಪೂರ್ಣಿಮಾ ಜೊತೆಗೆ ಚಂದ್ರಗ್ರಹಣವೂ ನಡೆಯಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇ 05 ರ ಶುಕ್ರವಾರದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ಹತ್ಯೆಯನ್ನು ನಿಷೇಧಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಪೂರ್ಣ ಮಾಂಸ ಮಾರಾಟ ನಿಷೇಧಿಸಿ ಸುತ್ತೋಲೆಯನ್ನು ಹೊರಡಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆದೇಶಕ್ಕೆ ಹಲವರು ಆಕ್ರೋಶ ಹೊರಹಾಕಿದ್ದಾರೆ. ಇಂತಹ ನಿ‍ಷೇಧಗಳು ಇಂಟರ್‌ನೆಟ್ ಆಧಾರಿತ ಮಾಂಸ ಮಾರಾಟಗಾರರಿಗೆ ಸಹಾಯ ಮಾಡಲು ಹೊರಡಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಮನವಮಿ ಹಿನ್ನೆಲೆ ಬೃಹತ್ ಬೆಂಗಳೂರು ಹಾಮನಗರ ಪಾಲಿಕೆ (ಬಿಬಿಎಂಪಿ) ಮಾರ್ಚ್ 30ರ ಗುರುವಾರದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ಹತ್ಯೆಯನ್ನು ನಿಷೇಧಿಸಿಸಲಾಗಿತ್ತು. ಫೆಬ್ರವರಿಯಲ್ಲಿ, ಮಹಾ ಶಿವರಾತ್ರಿ ಸಂದರ್ಭದಲ್ಲಿ ಮಾಂಸ ಮಾರಾಟ ಮತ್ತು ವಧೆ ನಿಷೇಧಿಸಿ ಬಿಬಿಎಂಪಿ ಇದೇ ರೀತಿಯ ಆದೇಶವನ್ನು ಹೊರಡಿಸಿತ್ತು.

Buddha Poornima: Sale of meat canceled on May 5

ಕೃಷ್ಣ ಜನ್ಮಾಷ್ಟಮಿಯಂತಹ ಇತರ ಹಬ್ಬಗಳು ಮತ್ತು ಗಾಂಧಿ ಜಯಂತಿಯಂತಹ ಸರ್ಕಾರಿ ರಜಾದಿನಗಳಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ಹತ್ಯೆಯ ಮೇಲೆ ನಾಗರಿಕ ಸಂಸ್ಥೆ ಇದೇ ರೀತಿಯ ನಿಷೇಧವನ್ನು ವಿಧಿಸುತ್ತದೆ. ಬಿಬಿಎಂಪಿ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 3,000 ಪರವಾನಗಿ ಹೊಂದಿರುವ ಮಾಂಸದ ಅಂಗಡಿಗಳು ಮತ್ತು ಮೂರು ಕಸಾಯಿಖಾನೆಗಳು ಅಧಿಕೃತವಾಗಿವೆ.

ಇತ್ತೀಚೆಗೆ ಬೆಂಗಳೂರಿನ ಯಲಹಂಕದಲ್ಲಿರುವ ವಾಯುನೆಲೆಯಲ್ಲಿನ ಅಂತಾರಾಷ್ಟ್ರೀಯ ಏರೋ ಇಂಡಿಯಾ 2023ರ ಹಿನ್ನೆಲೆಯೂ ಮಾಂಸಾಹಾರ ನಿಷೇಧ ಮಾಡಲಾಗಿತ್ತು. ಯಲಹಂಕ ವಲಯ ವ್ಯಾಪ್ತಿಯಲ್ಲಿರುವ ಎಲ್ಲ ಮಾಂಸದ ಮಳಿಗೆಗಳಲ್ಲಿ ಜನವರಿ 30 ರಿಂದಲೇ ರಿಂದ ಫೆಬ್ರುವರಿ 20ರವರೆಗೆ ಎಲ್ಲ ತರಹದ ಮಾಂಸ ಮಾರಾಟ ನಿಷೇಧಿಸಲಾಗಿತ್ತು. ಇಷ್ಟೇ ಅಲ್ಲದೇ ಹೋಟೇಲ್ ಹಾಗೂ ರೆಸ್ಟೋರೆಂಟ್/ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನೂ ಸಹ ಬಿಬಿಎಂಪಿ ನಿಷೇಧಿಸಿತ್ತು. ಆದರೆ, ಜನರ ಆಕ್ರೋಶದ ಹಿನ್ನೆಲೆ ಆದೇಶವನ್ನು ವಾಪಸ್ ಪಡೆಯಲಾಗಿತ್ತು.

ಬೌದ್ಧ ಧರ್ಮದ ಪಿತಾಮಹ ಎಂದು ಕರೆಯಲ್ಪಡುವ ಭಗವಾನ್ ಗೌತಮ ಬುದ್ಧನ ಜನ್ಮ ದಿನಾಚರಣೆಯನ್ನು ಬುದ್ಧ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಇದು ದೇಶದಲ್ಲಿ ಮತ್ತು ಪ್ರಪಂಚದಾದ್ಯಂತ ಬೌದ್ಧ ಜನರು ವ್ಯಾಪಕವಾಗಿ ಆಚರಿಸುವ ಪ್ರಮುಖ ಹಬ್ಬವಾಗಿದೆ. 'ಬುದ್ಧ ಜಯಂತಿ' ಎಂದೂ ಕರೆಯಲ್ಪಡುವ ಈ ಹಬ್ಬವು ಪ್ರಪಂಚದಾದ್ಯಂತದ ಬೌದ್ಧರಿಗೆ ಅಪಾರ ಮಹತ್ವವನ್ನು ಹೊಂದಿದೆ. ಶುಕ್ರವಾರದಂದು ಬುದ್ಧ ಪೂರ್ಣಿಮಾ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+