ಬಿಎಸ್ ಎನ್ ಎಲ್ ಲ್ಯಾಂಡ್ ಲೈನ್ ನಿಂದ ಭಾನುವಾರ ಫ್ರೀ ಕಾಲ್ಸ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 15: ಇನ್ನು ಮುಂದೆ ಪ್ರತಿ ಭಾನುವಾರ ಬಿಎಸ್ ಎನ್ ಎಲ್ ಲ್ಯಾಂಡ್ ಲೈನ್ ನಿಂದ ಯಾವುದೇ ನೆಟ್ ವರ್ಕ್ ನ ಸ್ಥಿರ ದೂರವಾಣಿಗೆ ಅಥವಾ ಮೊಬೈಲ್ ಫೋನಿಗೆ ಉಚಿತವಾಗಿ ಕರೆ ಮಾಡಬಹುದು. ಆಗಸ್ಟ್ 15ರಿಂದಲೇ ಈ ಯೋಜನೆ ಜಾರಿಗೆ ಬಂದಿದೆ ಎಂದು ಟೆಲಿಕಾಂ ಮಿನಿಸ್ಟರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.

ಸದ್ಯಕ್ಕೆ ದೇಶದ ಯಾವುದೇ ಭಾಗದ, ಯಾವುದೇ ನೆಟ್ ವರ್ಕ್ ಗೆ ರಾತ್ರಿ 9ರಿಂದ ಬೆಳಗ್ಗೆ 7ರ ವರೆಗೆ ಬಿಎಸ್ ಎನ್ ಎಲ್ ಲ್ಯಾಂಡ್ ಲೈನ್ ಫೋನ್ ನಿಂದ ಉಚಿತವಾಗಿ ಕರೆ ಮಾಡಬಹುದಾಗಿದೆ. ಈ ಯೋಜನೆಯ ಲಾಭವನ್ನು ದೇಶದಲ್ಲಿರುವ ಬಿಎಸ್ ಎನ್ ಎಲ್ ನ 1.43 ಕೋಟಿ ಮಂದಿ ಗ್ರಾಹಕರು ಪಡೆಯಲಿದ್ದಾರೆ.

BSNL announce free call on Sunday's

ಸದ್ಯಕ್ಕೆ ಜಾರಿಯಲ್ಲಿರುವ ಉಚಿತ ಕರೆ ಯೋಜನೆಗೆ ಭಾನುವಾರದ ಉಚಿತ ಕರೆಯೂ ಸೇರ್ಪಡೆಯಾಗುತ್ತದೆ. ಹೊಸದಾಗಿ ಲ್ಯಾಂಡ್ ಲೈನ್ ಗೆ ಅರ್ಜಿ ಹಾಕುವವರಿಗೆ ಮೊದಲ 6 ತಿಂಗಳು 49 ರು. ತಿಂಗಳ ಬಾಡಿಗೆ ಇರುತ್ತದೆ. ಆ ನಂತರ ಗ್ರಾಹಕರು ತಮಗೆ ಬೇಕಾದ ಯೋಜನೆಗೆ ಬದಲಾಗಬಹುದು. ತಿಂಗಳ ಕನಿಷ್ಠ ಬಾಡಿಗೆ 99 ರು. ನಿಂದ ಆರಂಭವಾಗುತ್ತದೆ.

BSNL announce free call on Sunday's

ಈ ಉಚಿತ ಕರೆ ಯೋಜನೆಗೆ ಹೆಚ್ಚುವರಿಯಾಗಿ ಯವುದೇ ಶುಲ್ಕ ಇರುವುದಿಲ್ಲ. ಲ್ಯಾಂಡ್ ಲೈನ್ ಫೋನ್ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BSNL Land line customers can do free calls to any network land line and mobile phones on every sundays. Scheme implented form August 15th.
Please Wait while comments are loading...