ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರೇ ದಿನಕ್ಕೆ ಕುರ್ಚಿ ಬಿಟ್ಟು ಹೊಸ ದಾಖಲೆ ಬರೆದ ಯಡಿಯೂರಪ್ಪ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 19: ಮೇ 17ರಂದು ಗುರುವಾರ ಮುಂಜಾನೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್ ಯಡಿಯೂರಪ್ಪ ಇಂದು ಸಂಜೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಮೂರು ದಿನಗಳ ಕನಿಷ್ಠ ಅವಧಿಗೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಭಾರತದ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.

ಈ ಹಿಂದೆ 2007ರಲ್ಲಿ ಇದೇ ಯಡಿಯೂರಪ್ಪನವರು 7 ದಿನಗಳ ಅವಧಿಗೆ ಮುಖ್ಯಮಂತ್ರಿಯಾಗಿದ್ದರು.

ಫ್ಲೋರ್ ಟೆಸ್ಟ್ ಬಳಿಕ ಟ್ರಾಲ್ಸ್ ಪುಟದಲ್ಲಿ ಡಿಕೆಶಿ, ಎಚ್ಡಿಕೆ, ಬಿಎಎಸೈಫ್ಲೋರ್ ಟೆಸ್ಟ್ ಬಳಿಕ ಟ್ರಾಲ್ಸ್ ಪುಟದಲ್ಲಿ ಡಿಕೆಶಿ, ಎಚ್ಡಿಕೆ, ಬಿಎಎಸೈ

ಭಾರತದ ಇತಿಹಾಸದಲ್ಲಿ ಕಡಿಮೆ ಅವಧಿಗೆ ಮುಖ್ಯಮಂತ್ರಿಯಾದವರು ಯಾರು ಎಂದು ಇತಿಹಾಸ ಕೆದಕಿದರೆ ಉತ್ತರ ಪ್ರದೇಶದ ಜಗದಾಂಬಿಕಾ ಪಾಲ್ ಹೆಸರು ಸಿಗುತ್ತದೆ. 1998ರಲ್ಲಿ ಕಲ್ಯಾಣ್ ಸಿಂಗ್ ಸರಕಾರವನ್ನು ವಜಾ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಫೆಬ್ರವರಿ 21ರ ರಾತ್ರಿ ಪಾಲ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಬೆಳಗಾಗುವಾಗ ಕಲ್ಯಾಣ್ ಸಿಂಗ್ ಸರ್ಕಾರವನ್ನು ವಜಾ ಮಾಡಿದ ನಿರ್ಧಾರವನ್ನು ಹೈ ಕೋರ್ಟ್ ರದ್ದು ಗೊಳಿಸಿತ್ತು. ಹೀಗಾಗಿ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದವರು ಬೆಳಗಾಗುವಾಗ ಮಾಜಿ ಮುಖ್ಯಮಂತ್ರಿಯಾಗಿದ್ದರು. ಅವರನ್ನು ಒಂದು ದಿನ ಮುಖ್ಯಮಂತ್ರಿ ಎಂದೇ ಕರೆಯಲಾಗುತ್ತದೆ.

BS Yeddyurappas 3-day stint as CM among shortest

ಇದಾದ ನಂತರ ಇದೀಗ ಎರಡನೇ ಸ್ಥಾನದಲ್ಲಿರುವವರು ಕರ್ನಾಟಕದ ಯಡಿಯೂರಪ್ಪ. ಅವರದ್ದು ಮೂರು ದಿನಗಳ ದಾಖಲೆ.

ಇನ್ನು ಬಿಹಾರದ ಸತೀಶ್ ಪ್ರಸಾದ್ ಸಿಂಗ್ ರನ್ನು 1968ರಲ್ಲಿ ಜನವರಿ 28ರಿಂದ ಫೆಬ್ರವರಿ 1ರವರೆಗೆ 5 ದಿನಗಳ ಕಾಲ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿತ್ತು. ಇವರ ನಂತರ ಮುಖ್ಯಮಂತ್ರಿಯಾದ ಬಿಪಿ ಮಂಡಲ್ ಕೂಡ ಕೇವಲ 31 ದಿನಗಳ ಕಾಲ ಸಿಎಂ ಆಗಿದ್ದರು.

ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದ ಯಡಿಯೂರಪ್ಪ ಎಡವಿದ್ದು ಎಲ್ಲಿ?ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದ ಯಡಿಯೂರಪ್ಪ ಎಡವಿದ್ದು ಎಲ್ಲಿ?

ಹರ್ಯಾಣದ ಓಂ ಪ್ರಕಾಶ್ ಚೌಟಾಲಾ 1990ರ ಜುಲೈನಲ್ಲಿ 5 ದಿನ 1991ರಲ್ಲಿ 14 ದಿನದಂತೆ ಎರಡು ಬಾರಿ ಕಡಿಮೆ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಮೇಘಾಲಯದ ಕಾಂಗ್ರೆಸ್ ನಾಯಕ ಎಸ್.ಸಿ ಮಾರಕ್ 1998ರಲ್ಲಿ ಇದೇ ರೀತಿ 13 ದಿನ ಸಿಎಂ ಹುದ್ದೆ ಅಲಂಕರಿಸಿದ್ದರು.

ತಮಿಳುನಾಡಿನ ವರ್ಣರಂಜಿತ ರಾಜಕಾರಣಿ ಎಂಜಿ ರಾಮಚಂದ್ರನ್ ಪತ್ನಿ ಜಾನಕಿ ರಾಮಚಂದ್ರನ್ 1988ರಲ್ಲಿ 23 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಕೇರಳದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಸಿಎಚ್ ಮೊಹಮ್ಮದ್ ಕೋಯಾ 1979ರಲ್ಲಿ 45 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಇವರು ಈ ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರಿದ ಏಕೈಕ ಮುಸ್ಲಿಂ ಸಮುದಾಯದ ನಾಯಕ ಎಂಬುದು ವಿಶೇಷ.

English summary
B S Yeddyurappa's three-day tenure as the chief minister of Karnataka turned out to be one of the shortest in Indian history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X