ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಟು-ಬೂಟು ತೊಟ್ಟು ವಿದೇಶಕ್ಕೆ ಹಾರಿದ ಬಿ. ಎಸ್. ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಜನವರಿ 19: ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿದೇಶಕ್ಕೆ ತೆರಳಿದರು. ದಾವೋಸ್‌ನಲ್ಲಿನಡೆಯಲಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವರು ನಿಯೋಗದ ಜೊತೆ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ಭಾನುವಾರ 'ಧವಳಗಿರಿ' ನಿವಾಸದಿಂದ ಯಡಿಯೂರಪ್ಪ ವಿದೇಶಕ್ಕೆ ತೆರಳಿದರು. ಸದಾ ಬಿಳಿ ಸಫಾರಿ ಬಟ್ಟೆಯಲ್ಲಿ ಕಾಣಿಸಿಕೊಳ್ಳುವ ಯಡಿಯೂರಪ್ಪ ಒಂದು ಸೂಟ್ ತೊಟ್ಟಿದ್ದರು. ದಾವೋಸ್‌ನಲ್ಲಿ ಚಳಿ ಹೆಚ್ಚಿರುವ ಕಾರಣ ಮುಖ್ಯಮಂತ್ರಿಗಳು ಬೆಚ್ಚನೆಯ ಉಡುಪಿನ ಮೊರೆ ಹೋಗಿದ್ದಾರೆ.

ದಾವೋಸ್ ನಲ್ಲಿ ಹೂಡಿಕೆದಾರರ ಅಕರ್ಷಿಸಲು ಯಡಿಯೂರಪ್ಪ ಸಜ್ಜು ದಾವೋಸ್ ನಲ್ಲಿ ಹೂಡಿಕೆದಾರರ ಅಕರ್ಷಿಸಲು ಯಡಿಯೂರಪ್ಪ ಸಜ್ಜು

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್. ಸೆಲ್ವ ಕುಮಾರ್ ಮುಂತಾದ ಅಧಿಕಾರಿಗಳು ಯಡಿಯೂರಪ್ಪ ಅವರ ಜೊತೆಗಿದ್ದರು.

ಹರಿಹರದ ಘಟನೆ ಬಗ್ಗೆ ಸ್ವಾಮಿಜಿಗಳ ಕ್ಷಮೆ ಕೋರಿದ ಯಡಿಯೂರಪ್ಪಹರಿಹರದ ಘಟನೆ ಬಗ್ಗೆ ಸ್ವಾಮಿಜಿಗಳ ಕ್ಷಮೆ ಕೋರಿದ ಯಡಿಯೂರಪ್ಪ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ ನಾರಾಯಣ್ ಮುಖ್ಯಮಂತ್ರಿಗಳಿಗೆ ಶುಭ ಕೋರಿ ಬೀಳ್ಕೊಟ್ಟರು. ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್, ಶಾಸಕ ಎಸ್. ಆರ್. ವಿಶ್ವನಾಥ್ ಜೊತೆಗಿದ್ದರು.

ಯಡಿಯೂರಪ್ಪ 'ರಾಜಾ ಹುಲಿ' ಅಲ್ಲ 'ರಾಜಾ ಇಲಿ': ಉಗ್ರಪ್ಪಯಡಿಯೂರಪ್ಪ 'ರಾಜಾ ಹುಲಿ' ಅಲ್ಲ 'ರಾಜಾ ಇಲಿ': ಉಗ್ರಪ್ಪ

ಕೋಟಿನಲ್ಲಿ ಮಿಂಚಿದ ಯಡಿಯೂರಪ್ಪ

ಕೋಟಿನಲ್ಲಿ ಮಿಂಚಿದ ಯಡಿಯೂರಪ್ಪ

ಸದಾ ಬಿಳಿ ಸಫಾರಿ ಬಟ್ಟೆಯಲ್ಲಿ ಕಾಣಿಸಿಕೊಳ್ಳುವ ಯಡಿಯೂರಪ್ಪ ಇಂದು ಸೂಟ್ ತೊಟ್ಟಿದ್ದರು. ನೆವಿ ಗ್ರೇ ಕಲರ್ ಕೋಟು, ಬ್ಲಾಕ್ ಕಲರ್ ಪ್ಯಾಂಟು, ಬ್ಲಾಕ್ ಕಲರ್ ಶೂನಲ್ಲಿ ಯಡಿಯೂರಪ್ಪ ವಿದೇಶಕ್ಕೆ ತೆರಳಿದರು.

ಸಂಪುಟ ವಿಸ್ತರಣೆ

ಸಂಪುಟ ವಿಸ್ತರಣೆ

'ಧವಳಗಿರಿ' ನಿವಾಸದ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಬಿ. ಎಸ್. ಯಡಿಯೂರಪ್ಪ, "ಅಮಿತ್ ಶಾ ಜೊತೆ ಅರ್ಧಗಂಟೆ ಮಾತುಕತೆ ನಡೆಸಿದ್ದೇನೆ.ಉತ್ತಮ ಸ್ಪಂದನೆ ಸಿಕ್ಕದೆ. ದಾವೋಸ್‌ನಿಂದ ಬಂದ ಎರಡು ದಿನದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ" ಎಂದು ಹೇಳಿದರು.

ಉದ್ಯಮಿಗಳ ಜೊತೆ ಸಂವಾದ

ಉದ್ಯಮಿಗಳ ಜೊತೆ ಸಂವಾದ

"ದಾವೋಸ್‌ ಪ್ರವಾಸಕ್ಕೆ ಹೊರಟದ್ದೇವೆ. ಆರ್ಥಿಕ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, 35 ಉದ್ಯಮಿಗಳ ಜೊತೆ ಸಂವಾದವಿದೆ. ರಾಜ್ಯಕ್ಕೆ ಬಂಡವಾಳ ಹರಿದು ಬರುವ ಸಾಧ್ಯತೆ ಇದೆ. ದಾವೋಸ್ ಶೃಂಗಸಭೆಯಿಂದ ರಾಜ್ಯದಲ್ಲಿ ಉದ್ಯೋಗ ಹೆಚ್ಚಳ ಆಗಲಿದೆ" ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ವಾಪಸ್ ಆಗಲಿದ್ದಾರೆ

ಶುಕ್ರವಾರ ವಾಪಸ್ ಆಗಲಿದ್ದಾರೆ

ಸೋಮವಾರ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಸಮ್ಮೇಳನ ಆರಂಭವಾಗಲಿದೆ. ಯಡಿಯೂರಪ್ಪ ನಿಯೋಗದ ಜೊತೆ ತೆರಳಿದ್ದು, ಶುಕ್ರವಾರ ಅವರು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ. ಯಡಿಯೂರಪ್ಪ ವಾಪಸ್ ಆದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಳು ಆರಂಭವಾಗಲಿದೆ.

ವಿಮಾನ ನಿಲ್ದಾಣದಲ್ಲಿ ಭೇಟಿ

ವಿಮಾನ ನಿಲ್ದಾಣದಲ್ಲಿ ಭೇಟಿ

ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪಗೆಡಿಸಿಎಂ ಅಶ್ವಥ್ ನಾರಾಯಣ, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪಗೆ ಶುಭಾಶಯ ಕೋರಿದರು.

English summary
Karnataka chief Minister B.S.Yeddyurappa on Sunday January 19, 2020 travel to Davos. Yediyurappa will attend World Economic Forum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X