ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರ ಬೆಳಿಗ್ಗೆ 9ಕ್ಕೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಪಕ್ಕಾ

|
Google Oneindia Kannada News

ಬೆಂಗಳೂರು, ಮೇ 16: ಯಡಿಯೂರಪ್ಪ ಅವರು ನಾಳೆ (ಗುರುವಾರ) ಬೆಳಿಗ್ಗೆ 9 ಗಂಟೆಗೆ ರಾಜಭವನದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ವಿಷಯವನ್ನು ಕರ್ನಾಟಕದ ಬಿಜೆಪಿ ಉಸ್ತುವಾರ ಮುರಳೀಧರ ರಾವ್ ಅವರು ಸ್ಪಷ್ಟಪಡಿಸಿದ್ದು, ರಾಜ್ಯಪಾಲರು ಬಿಜಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

BS Yeddyurappa taking oath as Karnataka Chief Minister

ನಾಳೆ ಬಿ.ಎಸ್.ಯಡಿಯೂರಪ್ಪ ಒಬ್ಬರೇ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದ ಅವರು, ಸರ್ಕಾರಕ್ಕೆ ಬಹುಮತ ಸಾಬೀತು ಮಾಡಲು ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದಾರೆ ಎಂದು ಮುರಳಿಧರ ರಾವ್ ಅವರು ಹೇಳಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ : ಬಹುಮತ ಸಾಬೀತುಪಡಿಸಲು ಬಿಜೆಪಿ ಮಾಸ್ಟರ್ ಪ್ಲಾನ್ಸಸ್ಪೆನ್ಸ್ ಥ್ರಿಲ್ಲರ್ : ಬಹುಮತ ಸಾಬೀತುಪಡಿಸಲು ಬಿಜೆಪಿ ಮಾಸ್ಟರ್ ಪ್ಲಾನ್

ಕರ್ನಾಟಕದ ಜನ ಬಿಜೆಪಿ ಪರವಾಗಿದ್ದು, ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಹಾಗಾಗಿ ರಾಜ್ಯಪಾಲರು ಬಿಜೆಪಿಗೆ ಅವಕಾಶ ನೀಡಿದ್ದಾರೆ, ಅಲ್ಲದೆ ಎಸ್‌.ಆರ್.ಬೊಮ್ಮಾಯಿ ಪ್ರಕರಣದಲ್ಲಿ ನ್ಯಾಯಾಲಯ ಸಹ ಇದನ್ನೇ ಹೇಳಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಚುನಾವಣಾ ಪೂರ್ವವಾಗಿ ಮೈತ್ರಿ ಮಾಡಿಕೊಂಡಿರಲಿಲ್ಲ, ಆದರೆ ಈಗ ಅಧಿಕಾರದ ಆಸೆಯಿಂದಷ್ಟೆ ಸರ್ಕಾರ ರಚಿಸಲು ಅವಕಾಶ ಕೋರುತ್ತಿವೆ ಎಂದು ರಾಜ್ಯಪಾಲರಿಗೆ ನಾವು ಮನದಟ್ಟು ಮಾಡಿಕೊಟ್ಟಿದ್ದೇವೆ ಎಂದು ಮುರಳಿಧರ ರಾವ್ ಅವರು ಹೇಳಿದರು.

ಯಡಿಯೂರಪ್ಪ ಅವರು ನಾಳೆ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಲಿದ್ದು, ಬಹುಮತ ಸಾಬೀತು ಮಾಡಿದ ಬಳಿಕ ಮಂತ್ರಿ ಮಂಡಲ ರಚನೆ ಮಾಡಲಾಗುತ್ತದೆ ಎಂದು ಮುರಳಿಧರ ರಾವ್ ಅವರು ಹೇಳಿದರು.

English summary
BS Yeddyurappa will be taking oath as 23rd Karnataka Chief Minister at Raj Bhavan tomorrow on 17th May at 9 AM. Governor Wajubhai Wala has invited BJP to form government in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X