ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರವನ್ನು ಅಸ್ಥಿರಗೊಳಿಸೊಲ್ಲ: ಯಡಿಯೂರಪ್ಪ ಮಾತಿನ ಮರ್ಮವೇನು?

|
Google Oneindia Kannada News

Recommended Video

ಮೈತ್ರಿ ಸರ್ಕಾರವನ್ನ ಅಸ್ಥಿರಗೊಳಿಸೋದಿಲ್ಲ ಎಂದು ಬಿ ಎಸ್ ವೈ ಹೇಳಿದ್ಯಾಕೆ? | Oneindia Kannada

ಬೆಂಗಳೂರು, ಜನವರಿ 19: "ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೆಡಿಎಸ್ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ. ಮೈತ್ರಿ ಸರ್ಕಾರದ ನಾಯಕರು ಚಿಂತಿಸುವ ಅಗತ್ಯವಿಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಆಪರೇಷನ್ ಕಮಲದ ಯತ್ನ ವಿಫಲವಾಗುತ್ತಿದ್ದಂತೆಯೇ ಗುರುಗ್ರಾಮದ ರೆಸಾರ್ಟ್ ನಲ್ಲಿ ತಂಗಿದ್ದ ಬಿಜೆಪಿ ಶಾಸಕರೆಲ್ಲರನ್ನೂ ವಾಪಸ್ಸಾಗುವಂತೆ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಆ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು ತಾವು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿಲ್ಲ ಎಂದಿದ್ದಾರೆ.

ಯಡಿಯೂರಪ್ಪ ಸಿಎಂ ಆಗ್ತಾರೆ ಎಂದಿದ್ದ ಕೇರಳ ಜ್ಯೋತಿಷಿ ಮಾತು ನಿಜವಾಗುತ್ತಾ?ಯಡಿಯೂರಪ್ಪ ಸಿಎಂ ಆಗ್ತಾರೆ ಎಂದಿದ್ದ ಕೇರಳ ಜ್ಯೋತಿಷಿ ಮಾತು ನಿಜವಾಗುತ್ತಾ?

ಆದರೆ ನಿಜಕ್ಕೂ ಆಪರೇಷನ್ ಕಮಲದ ಪ್ಲ್ಯಾನ್ ಫೇಲ್ ಆಗಿದೆಯಾ? ಅಥವಾ ಯಡಿಯೂರಪ್ಪ ಅವರ ಈ ಹೇಳಿಕೆಯೂ ಹೊಸದೊಂದು ತಂತ್ರದ ಭಾಗವಾ ಎಂಬುದು ಈಗಿರುವ ಪ್ರಶ್ನೆ.

ನಾಲ್ಕು ದಿನಗಳಿಂದಲೂ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಬಿಜೆಪಿಯ ಶಾಸಕರೆಲ್ಲರೂ ಗುರುಗ್ರಾಮದ ರೆಸಾರ್ಟ್ ವೊಂದರಲ್ಲಿ ತಂಗಿದ್ದರೆ, ಕಾಂಗ್ರೆಸ್ಸಿನ ಕೆಲ ಶಾಸಕರು ಮುಂಬೈಗೆ ತೆರಳಿ, ಸಂಪರ್ಕಕ್ಕೆ ಸಿಕ್ಕದಂತೆ ನಾಪತ್ತೆಯಾಗಿದ್ದರು.

ಯಡಿಯೂರಪ್ಪ ಮಾತಿನ ಮರ್ಮವೇನು?

ಯಡಿಯೂರಪ್ಪ ಮಾತಿನ ಮರ್ಮವೇನು?

ಕಳೆದ ಒಂದು ವಾರದಿಂದಲೂ ನಡೆಯುತ್ತಿರುವ ಪ್ರಯತ್ನವೆಲ್ಲವೂ ಸರ್ಕಾರವನ್ನು ಬೀಳಿಸುವುದಕ್ಕೇ ಆಗಿರುವಾಗ, ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ ಎಂಬ ಯಡಿಯೂರಪ್ಪ ಅವರ ಮಾತನ್ನು ನಂಬುವುದಾದರೂ ಹೇಗೆ? ನಾವು ಪ್ರಯತ್ನ ಬಿಟ್ಟು ಸುಮ್ಮನಾಗಿದ್ದೇವೆ, ಆಪರೇಷನ್ ಕಮಲ ಫೇಲ್ಯೂರ್ ಆಗಿದೆ ಎಂಬಂಥ ಸನ್ನಿವೇಶ ಸೃಷ್ಟಿಸಿ, ಒಳಗೊಳಗೇ ವ್ಯೂಹ ರಚಿಸುವುದು ಬಿಜೆಪಿಯ ಉದ್ದೇಶವೇ? ಎಂಬ ಪ್ರಶ್ನೆಯೂ ಏಳುತ್ತಿದೆ.

ಆಪರೇಷನ್ ಠುಸ್... 3 ನೇ ಬಾರಿಗೂ ಯಡಿಯೂರಪ್ಪ ಫೇಲ್?ಆಪರೇಷನ್ ಠುಸ್... 3 ನೇ ಬಾರಿಗೂ ಯಡಿಯೂರಪ್ಪ ಫೇಲ್?

ಜ್ಯೋತಿಷಿಯ ಮಾತು ಸತ್ಯವಾದೀತೆ?

ಜ್ಯೋತಿಷಿಯ ಮಾತು ಸತ್ಯವಾದೀತೆ?

ಕೇರಳದ ಜ್ಯೋತಿಷಿಯೊಬ್ಬರು ಸಂಕ್ರಾಂತಿಯ ನಂತರ ಯಡಿಯೂರಪ್ಪ ಅವರ ಅದೃಷ್ಟ ಕುಸಲಾಯಿಸುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅವರಿಗೆ ಮತ್ತೆ ಸಿಎಂ ಆಗುವ ಯೋಗವಿದೆ ಎಂದಿದ್ದರು. ಆ ಮಾತನ್ನು ಗಂಭೀರವಾಗಿ ಪರಿಗಣಿಸಿಯೇ ಬಿ ಎಸ್ ವೈ ಈ ಎಲ್ಲಾ ಪ್ತಯತ್ನಕ್ಕೂ ಮುಂದಾಗಿದ್ದು. ಆದರೆ ಅವರ ಕಾರ್ಯತಂತ್ರ ನಿರೀಕ್ಷಿದಷ್ಟು ಫಲ ನೀಡಿದಂತೆ ಕಾಣುತ್ತಿಲ್ಲ.

ಕಾಂಗ್ರೆಸ್‌ಗೆ ಇನ್ನೂ ಕಾಡುತ್ತಿದೆ 'ಆಪರೇಷನ್' ಭಯ: ಇಂದು ಶಾಸಕರೊಂದಿಗೆ ಮತ್ತೆ ಸಭೆಕಾಂಗ್ರೆಸ್‌ಗೆ ಇನ್ನೂ ಕಾಡುತ್ತಿದೆ 'ಆಪರೇಷನ್' ಭಯ: ಇಂದು ಶಾಸಕರೊಂದಿಗೆ ಮತ್ತೆ ಸಭೆ

ಗುರುಗ್ರಾಮದಿಂದ ಶಾಸಕರು ವಾಪಸ್

ಗುರುಗ್ರಾಮದಿಂದ ಶಾಸಕರು ವಾಪಸ್

ಗುರುಗ್ರಾಮದಲ್ಲಿ ತಂಗಿದ್ದ ಬಿಜೆಪಿ ಶಾಸಕರೆಲ್ಲ ಇಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ತಾವು ಸರ್ಕಾರ ಬೀಳಿಸುವ ಅಥವಾ ಅಸ್ಥಿರಗೊಳಿಸುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಬರ ಅಧ್ಯಯನಕ್ಕಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ, ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ಫಲನೀಡುತ್ತದೆಯೇ ಎಂಬುದನ್ನು ಕಾದುಮೋಡಬೇಕು.

ಕಾಂಗ್ರೆಸ್ ಸಭೆಗೆ ಶಾಸಕರು ಗೈರಾಗಿದ್ದೇಕೆ?

ಕಾಂಗ್ರೆಸ್ ಸಭೆಗೆ ಶಾಸಕರು ಗೈರಾಗಿದ್ದೇಕೆ?

ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಶಾಸಕರಾದ ಡಾ.ಉಮೇಶ್ ಜಾಧವ್, ಬಿ ನಾಗೇಂದ್ರ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಗೈರಾಗಿದ್ದರು. ಈ ನಾಲ್ವರೂ ಬಿಜೆಪಿ ತೆಕ್ಕೆಗೆ ಜಾರಬ =ಹುದಾದ ಅನುಮಾನ ವ್ಯಕ್ತವಾಗಿದ್ದು, ಉಳಿದ ಶಾಸಕರನ್ನಾದರೂ ತನ್ನ ಬಿಗಿಮುಷ್ಠಿಯಲ್ಲಿಟ್ಟುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಅದರ ಫಲವಾಗಿಯೇ ಕಾಂಗ್ರೆಸ್ ನ ಶಾಸಕರನ್ನೆಲ್ಲ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟಿಗೆ ಕಳಿಸಲಾಗಿದೆ.

English summary
Former Karnataka CM and BJP leader BS Yeddyurappa, in Bengaluru: Our MLAs are returning to Bengaluru from Delhi. We will tour the state and analyse the situation of drought. We will not destabilize this govt at any cost. Congress and JDS need not worry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X