ಜನ್ಮದಲ್ಲೂ ಅದು ನಡೆಯಲ್ಲ: ರಾಜ್ಯ ಕಾಂಗ್ರೆಸ್ ಬಗ್ಗೆ ಬ್ರಹ್ಮಾಂಡ ಗುರೂಜಿ ಶಾಕಿಂಗ್ ಭವಿಷ್ಯ!
ರಾಜ್ಯ ಕಾಂಗ್ರೆಸ್ ಮುಂದಿನ ಅವಧಿಗೂ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ. ಈ ಬಾರಿ ಪೂರ್ಣಾವಧಿ ಸಿಎಂ, ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳ ನಡುವೆಯೇ ರಾಜ್ಯ ರಾಜಕಾರಣದ ಬಗ್ಗೆ ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇಂದು ಹಾಸನಾಂಬ ದೇವಿಯ ದರ್ಶನ ಪಡೆದ ನಂತರ ರಾಜ್ಯ ಹಾಗೂ ರಾಜಕಾರಣದ ಬಗ್ಗೆ ಶಾಕಿಂಗ್ ಭವಿಷ್ಯವಾಣಿ ನುಡಿದಿದ್ದಾರೆ.
ರಾಜಕಾರಣಿಗಳು ಇನ್ಮುಂದೆ ಹಿಟ್ಲರ್ ನಿಯಮಗಳನ್ನ ತುತ್ತಾರೆ. ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಇದೇ ಕೊನೆ, ಮುಂದೆ ಜನ್ಮ ಜನ್ಮದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಎಂದಿದ್ದಾರೆ. ರಾಜ್ಯದ ಜನರು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮುಂದೆ ಜಲಗಂಡಾಂತರ ಸಂಭವಿಸಲಿದೆ. ಘಟಪ್ರಭ, ಮಲಪ್ರಭಾ, ಗೋದಾವರಿ ನದಿಗಳು ದೇಶವನ್ನೇ ಎರಡು ಭಾಗ ಮಾಡುವಷ್ಟು ತುಂಬಿಹರಿಯುತ್ತವೆ ಎಂದಿದ್ದಾರೆ.

ಕಾಂಗ್ರೆಸ್ ಅವಧಿ ಇದೇ ಕೊನೆ, ಇನ್ನು ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಎಲ್ಲ ರಾಜಕೀಯ ಪಕ್ಷದವರು ಗೊಂದಲದಲ್ಲಿ ಸಿಲುಕಲಿದ್ದಾರೆ. ಕಚ್ಚಾಟ ಶುರುವಾಗುತ್ತೆ. ಕರ್ನಾಟಕವು ಕುರ್ಚಿಗಾಗಿ ಬಡಿದಾಡಿಕೊಳ್ಳುವ ವಿಚಾರದಲ್ಲಿ ಇಡೀ ಜಗತ್ತಿನ ಇತಿಹಾಸ ಪುಟದಲ್ಲಿ ಹೆಸರುವಾಸಿಯಾಗುತ್ತದೆ. ಮುಂದಿನ ಸಂಕ್ರಾಂತಿಯೊಳಗೆ ಕೇತು ಮತ್ತು ಸೂರ್ಯ ರಾಹು ಜೊತೆಗೆ ಸೇರಲಿದ್ದು, ಬಹಳ ದೊಡ್ಡ ಗಲಾಟೆಗಳು ನಡೆಯುತ್ತವೆ. ಇದರ ಜೊತೆಗೆ ರಾಜಕಾರಣಿಗಳ ಸ್ಥಾನ ಪಲ್ಲಟ, ಪಕ್ಷ, ಭೇದ ಭಾವ ಎಲ್ಲವೂ ಆಗಲಿದೆ ಎಂದು ಹೇಳಿದ್ದಾರೆ.
ಸನ್ಯಾಸಿ ಪ್ರಧಾನಿ ಆಗ್ತಾರೆ
75 ವರ್ಷ ತುಂಬಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವರು ಆರೋಗ್ಯ ಕೊಟ್ಟು ಕಾಪಾಡಲಿ. ಮೋದಿ ಈ ದೇಶದ ರಕ್ಷಾ ಕವಚ. ಮುಂದಿನ ದಿನಗಳಲ್ಲಿ ಸನ್ಯಾಸಿಯೊಬ್ಬರು ದೇಶದ ಪ್ರಧಾನಿ ಸ್ಥಾನದಲ್ಲಿ ಕೂರಲಿದ್ದಾರೆ. ಅವರು ದೇಶದ ಚುಕ್ಕಾಣಿ ಹಿಡಿಯುತ್ತಾರೆ. ಬ್ರಹ್ಮಚಾರಿ ಪ್ರಧಾನಿ ಆಗದಿದ್ದರೆ, ಇಡೀ ಜಗತ್ತಿಗೆ ಶನಿ ಪ್ರವೇಶವಾಗುತ್ತೆ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ಕರ್ನಾಟಕ ಎರಡು ಭಾಗ ಆಗುತ್ತೆ
ಹಾಸನಾಂಬ ಅಮ್ಮನವರು ಇಲ್ಲಿ ಇರೋದು ಕೂಡ ಇದೇ ಕೊನೆಯ ವರ್ಷ. ಮುಂದಿನ ವರ್ಷದಿಂದ ತಾಯಿ ಇಲ್ಲಿ ಇರಲ್ಲ. ಶಿವನ ಶಕ್ತಿ ಒಂದು ಕಡೆ ಸೇರುತ್ತೆ. ನಾವೆಲ್ಲ ಕೊನೆಯ ಅವಧಿಯಲ್ಲಿ ದರ್ಶನ ಮಾಡಿದ್ದೇವೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಳಯ ಆಗುತ್ತೆ. ಉತ್ತರ ಭಾರತ, ಉತ್ತರ ಕರ್ನಾಟಕ ಭಾಗ ಮುಳುಗಡೆಯಾಗುತ್ತೆ. ಕರ್ನಾಟಕ ಮೂರು ಭಾಗ ಹಾಗೂ ಭಾರತ ಎರಡು ಭಾಗ ಆಗುತ್ತದೆ. ಇದಕ್ಕೆಲ್ಲ ಮುನ್ಸೂಚನೆಯಾಗಿದೆ ಇದೇ ಕೊನೆಯ ವಿಶೇಷವಾದ ಸಂದರ್ಭವಾಗಿದ್ದು ಮುಂದೆ ಆಗುವ ಉಗ್ರಸ್ವರೂಪದ ಬಗ್ಗೆ ತಾಯಿ ಸೂಚನೆ ಕೊಟ್ಟಿದ್ದಾಳೆ ಎಂದಿದ್ದಾರೆ.












Click it and Unblock the Notifications