Breaking: ಕರ್ನಾಟಕದ ವಿವಿಧ ಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ, ಕಲಾಪಗಳು ಮೊಟಕು, ಎಲ್ಲೆಡೆ ಆತಂಕ
ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳ ಕೋರ್ಟ್‌ಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ನ್ಯಾಯಾಲಗಳ ಇಂದಿನ ಕಲಾಪಗಳು ಮೊಟಕುಕೊಂಡಿದ್ದು, ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶಾಲಾ, ಕಾಲೇಜುಗಳಿಗೆ ಇತ್ತೀಚೆಗೆ ಬಾಂಬ್ ಬೆದರಿಕೆ ಬಂದಿದ್ದವು. ಇದೀಗ ರಾಜ್ಯದ ವಿವಿಧ ಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಕರ್ನಾಟಕದ ಹಾವೇರಿ,ಕೊಡಗು, ಮಂಡ್ಯ, ಧಾರವಾಡ, ದಾವಣಗೆರೆ, ಉತ್ತರ ಕನ್ನಡ ಮತ್ತು ಚಿತ್ರದುರ್ಗ ಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಏಕಕಾಲಕ್ಕೆ ಹಲವು ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಸಂದೇಶ ಬಂದಿದ್ದು, ವಕೀಲರು, ನ್ಯಾಯಾಧೀಶರು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಲಿದೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರೀಯ ದಳ, ಸ್ಥಳೀಯ ಪೊಲೀಸರು ಹಾಗೂ ಸಿಬ್ಬಂದಿ ಕೋರ್ಟ್ ಆವರಣ, ಹಾಲ್‌ಗಳನ್ನು, ಕೊಠಡಿಗಳನ್ನು ಪರಿಶೀಲಿಸಿದ್ದಾರೆ. ಎಲ್ಲೆಡೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ. ಇದರ ಬೆನ್ನಲ್ಲೆ ಸುರಕ್ಷತೆ, ಜೀವ ರಕ್ಷಣೆಯ ಮುಂಜಾಗ್ರತೆ ದೃಷ್ಟಿಯಿಂದ ಇಂದಿನ ಎಲ್ಲ ಕೋರ್ಟ್ ಕಲಾಪಗಳನ್ನು ಮೊಟಕುಗೊಳಿಸಲಾಗಿದೆ.
13 ಸಲ ಬಾಂಬ್ ಬೆದರಿಕೆ
ಕಳೆದ 46 ದಿನದಲ್ಲಿ 13 ಸಲ ಬಾಂಬ್ ಬೆದರಿಕೆ ಬಂದಿದ್ದಾಗಿ ವರದಿ ಆಗಿದೆ. ಶಾಲಾ ಕಾಲೇಜುಗಳು ಆಯ್ತು ಇದೀಗ ನ್ಯಾಯ ನೀಡುವ ಸ್ಥಳಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿದೆ. ಸದ್ಯ ಎಲ್ಲಿಯೂ ಸ್ಪೋಟ, ಅಹಿತಕರ ಘಟನೆಗಳು ನಡೆದಿದೆ. ಇದು ಹುಸಿ ಬಾಂಬ್ ಬೆದರಿಕೆ ಎನ್ನಲಾಗಿದೆ. ಸದ್ಯ ಇ-ಮೇಲೆ ಬಂದಿದ್ದು ಎಲ್ಲಿಂದ? ಎಂಬಿತ್ಯಾದಿ ಆಯಾಮಗಳ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications