ಉತ್ತರ ಕರ್ನಾಟಕ ಮೂಲದ ಬಿಎಂಟಿಸಿ ನೌಕರನನ್ನು ಹೊಡೆದ ಬೆಂಗಳೂರಿನ ಜಿಗಣಿ ಪೊಲೀಸ್! BMTC Bus
ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಬಸ್ ವಿಚಾರ ಪದೇ ಪದೇ ಚರ್ಚೆಗೆ ಬರುತ್ತಿದೆ, ಅದರಲ್ಲೂ ಕನ್ನಡ ನಾಡಿನ ಈ ಸಾರಿಗೆ ಸಂಸ್ಥೆಗಳು ಇಡೀ ಜಗತ್ತಿನಾದ್ಯಂತ ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಬಸ್ ಬಗ್ಗೆ ಕನ್ನಡಿಗರಲ್ಲೂ ಹೆಮ್ಮೆ ಮೂಡಿದೆ. ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಬಸ್ ಸಂಚಾರ ವ್ಯವಸ್ಥೆಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳು ಆಗಿವೆ. ಹೀಗೆ ಅಭಿವೃದ್ಧಿ ಪಥದಲ್ಲಿ ರಾಜ್ಯ ಸಾರಿಗೆ ಸಾಗಿರುವ ಸಮಯದಲ್ಲೇ ಪೊಲೀಸರ ದೌರ್ಜನ್ಯ?
ಹೌದು, ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಬಸ್ ಸಂಚಾರದ ವಿಚಾರದಲ್ಲಿ ಪದೇ ಪದೇ ಸುದ್ದಿ ಓಡಾಡ್ತಾ ಇರ್ತವೆ. ಒಂದು ಕಡೆ ಕಡಿಮೆ ಬಸ್ ಓಡಾಟ ಸೇರಿದಂತೆ, ಇನ್ನೊಂದು ಕಡೆ ಅನಗತ್ಯ ಬಸ್‌ಗಳ ಓಡಾಟ ಕೂಡ ಸದ್ದು ಮಾಡುತ್ತಲೇ ಇರುತ್ತದೆ. ಹೀಗೆ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಕುರಿತು ಭಾರಿ ದೊಡ್ಡ ಚರ್ಚೆಗಳು ಸೋಷಿಯಲ್ ಮೀಡಿಯಾಗಳಲ್ಲಿ ನಡೆಯುತ್ತಲೇ ಇರುತ್ತವೆ. ಹೀಗಿದ್ದಾಗಲೇ, ಉತ್ತರ ಕರ್ನಾಟಕ ಮೂಲದ ಬಿಎಂಟಿಸಿ ನೌಕರನನ್ನು ಹೊಡೆದ ಬೆಂಗಳೂರಿನ ಜಿಗಣಿ ಪೊಲೀಸ್!

ಉತ್ತರ ಕರ್ನಾಟಕ ಮೂಲದವರ ಮೇಲೆ ಹಲ್ಲೆ?
ಹೌದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಾ ಇದೆ. ಈ ವಿಡಿಯೋದಲ್ಲಿ ಜಿಗಣಿ ಪೊಲೀಸ್ ಸಿಬ್ಬಂದಿ ಒಬ್ಬರು ಉತ್ತರ ಕರ್ನಾಟಕ ಮೂಲದ ಬಿಎಂಟಿಸಿ ಬಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ತನ್ನ ಕಾರಿಗೆ ಸೈಡ್ ಬಿಡಲಿಲ್ಲ ಅಂತಾ ಬಸ್ ಚಾಲಕನ ಮೇಲೆ ಜಿಗಣಿ ಠಾಣೆ ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿ, ಅಮ್ಮ & ಅಕ್ಕನ ಬಗ್ಗೆಯು ಅವಾಚ್ಯವಾಗಿ ಬೈದಿರುವ ಆರೋಪ ಕೇಳಿ ಬಂದಿದೆ ಪೊಲೀಸ್ ಸಿಬ್ಬಂದಿ ವಿರುದ್ಧ ಕೇಳಿ ಬಂದಿದೆ.
ಪೊಲೀಸ್ ದರ್ಪದ ವಿರುದ್ಧ ಪ್ರತಿಭಟನೆ
ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಆರೋಪ ಮಾಡಲಾಗಿದ್ದು, ಮದ್ಯಪಾನ ಮಾಡಿದ್ದ ಪೊಲೀಸ್ ಸಿಬ್ಬಂದಿ ಹೀಗೆ ದಿಢೀರ್ ಬಸ್ ಡಿಪೋ ಒಳಗೆ ಕಾರು ನುಗ್ಗಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ ಆರೋಪ ಮಾಡಲಾಗಿದೆ. ಇನ್ನು ಮತ್ತೊಂದು ಕಡೆಯಲ್ಲಿ ಬಸ್ ಚಾಲಕ ಸುನೀಲ್ ಮೇಲೆ ಹಲ್ಲೆ ಮಾಡಿ ಪೊಲೀಸರು ದರ್ಪ ತೋರಿದ್ದಾರೆ, ಈ ಹಲ್ಲೆ ಖಂಡಿಸಿ ಡಿಪೋದಿಂದ ಬಸ್ ಹೊರಗಡೆ ತೆಗೆಯಲ್ಲ ಎಂದು ಬಿಎಂಟಿಸಿ ಸಿಬ್ಬಂದಿ ಪ್ರತಿಭಟಿಸಿದ್ದಾರೆ. ಕೊನೆಗೆ ದೊಡ್ಡ ಅಲ್ಲೋಲ ಕಲ್ಲೋಲವೇ ಉಂಟಾಗಿತ್ತು....












Click it and Unblock the Notifications